80 ವರ್ಷದ ಹಳೇ ಸೀರೆಯ ಗೌನ್, ಉದ್ದನೆ ಜಡೆ, ಮೂಗುತಿ..; ಕೇನ್ಸ್​ನಲ್ಲಿ ಮಿಂಚಿದ ಕನ್ನಡತಿ ದಿಶಾ ಮದನ್!..Cannes

Disha Madan Cannes Film Festival 2026
Disha Madan Cannes Film Festival 2026
Published on

ಪ್ರಮುಖ ಮುಖ್ಯಾಂಶಗಳು

  • ಸತತ ಎರಡನೇ ವರ್ಷ ಕೇನ್ಸ್​ನಲ್ಲಿ ಕನ್ನಡತಿ, ನಟಿ ದಿಶಾ ಮದನ್​ ಭಾಗಿ
  • ಲಕ್ಷ್ಮಿ ನಿವಾಸ ಸೀರಿಯಲ್​​ ನಟಿಯ ಮೈಮಾಟಕ್ಕೆ ಫ್ಯಾನ್ಸ್ ಫಿದಾ
  • ಕೇನ್ಸ್ ರೆಡ್​ಕಾರ್ಪೆಟ್​ನಲ್ಲಿ ಲಕ್ಷ್ಮಿ ನಿವಾಸ ಸೀರಿಯಲ್​​​ ನಟಿ ದಿಶಾ ಮದನ್ ಮಿಂಚಿಂಗ್
Cannes Film Festival : ಲಕ್ಷ್ಮಿ ನಿವಾಸ ಸೀರಿಯಲ್​​​ ನಟಿ ಮತ್ತು ಡಿಜಿಟಲ್​ ಕಾಂಟೆಂಟ್ ಕ್ರಿಯೇಟರ್​ ಆದ ದಿಶಾ ಮದನ್​ ಅವರು ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ Cannes Film Festival 2026 ರೆಡ್ ಕಾರ್ಪೆಟ್ ಮೇಲೆ ಎರಡನೇ ಬಾರಿಗೆ ಭಾಗಿಯಾಗಿದ್ದಾರೆ. ದಕ್ಷಿಣ ಭಾರತ  ಹಾಗೂ ಕರ್ನಾಟಕದ ಸಂಸ್ಕೃತಿಯನ್ನು  ಪ್ರದರ್ಶಿಸಿದ್ದಾರೆ.  
 'Brut x Nespresso' ರೆಡ್ ಕಾರ್ಪೆಟ್‌ಗಾಗಿ ದಿಶಾ ಮದನ್ ಅವರು ಆಯ್ಕೆ ಮಾಡಿಕೊಂಡ ಉಡುಪು ಕೇವಲ ಫ್ಯಾಷನ್ ಆಗಿರದೆ, ಭಾರತೀಯ ಪರಂಪರೆ, ಸುಸ್ಥಿರತೆ ಮತ್ತು ದಕ್ಷಿಣ ಭಾರತದ ಸಾಂಪ್ರದಾಯಿಕ ಕರಕುಶಲತೆಗೆ ನೀಡಿದ ಅಪೂರ್ವ ಗೌರವವಾಗಿ ಮೂಡಿಬಂದಿದೆ.
ದಿಶಾ ಮದನ್ ಧರಿಸಿದ್ದ ಗೌನ್ ಅನ್ನು ಬೆಂಗಳೂರು ಮೂಲದ ಪ್ರಸಿದ್ಧ ಫ್ಯಾಷನ್ ಲೇಬಲ್ 'ನಿಹಾರಿಕಾ ವಿವೇಕ್' ತಂಡವು ವಿನ್ಯಾಸಗೊಳಿಸಿದೆ. 80 ವರ್ಷದ ಹಳೆಯ,  ಸಾಂಪ್ರದಾಯಿಕ ಜರಿ ಬಾರ್ಡರ್​​ವುಳ್ಳ  ವಿಂಟೇಜ್ ರೇಷ್ಮೆ ಸೀರೆಗಳನ್ನು ಮರುಬಳಕೆಮಾಡಿ ಗೌನ್​​ ತಯಾರಿಸಲಾಗಿದೆ. ಸೀರೆಯ ಯಾವುದೇ ಪ್ರಸಿದ್ಧತೆಯನ್ನು ನಾಶ ಮಾಡದೆ,  ಹೆರಿಟೇಜ್ ಫ್ಯಾಬ್ರಿಕ್ ಅನ್ನು ಉಳಿಸಿಕೊಂಡೇ ಈ ಮಾಡರ್ನ್ ಮರ್ಮೇಯ್ಡ್-ಕಟ್ ಸಿಲೂಯೆಟ್ ಗೌನ್ ಸೃಷ್ಟಿಸಲಾಗಿದೆ.

ಮಹಿಳಾ ಕಾರ್ಮಿಕರಿಂದ ತಯಾರಾದ ಗೌನ್

ದಕ್ಷಿಣ ಭಾರತದ ದೇವಸ್ಥಾನಗಳ ಸುಂದರ ಕಲ್ಲಿನ ಕೆತ್ತನೆಗಳು ಮತ್ತು ಮಹಿಳಾ ಶಕ್ತಿಯ ಪ್ರತೀಕದಿಂದ ಪ್ರೇರಿತರಾಗಿ ಗೌನ್​ ತಯಾರಿಸಲಾಗಿದೆ. ಇದರಲ್ಲಿ 'ಬಂಜಾರ ಕಸೂತಿ' ಕಲಾಕೃತಿಯನ್ನು ಇದೆ. ನುರಿತ ಮಹಿಳಾ ಕುಶಲಕರ್ಮಿಗಳು ಬರೋಬ್ಬರಿ 2,500 ಗಂಟೆಗಳ ಕಾಲ ಶ್ರಮವಹಿಸಿ ಕೈಯಿಂದಲೇ ಈ ಅದ್ಭುತ ಕರಕುಶಲತೆಯನ್ನು ಮೂಡಿಸಿದ್ದಾರೆ.

ದಿಶಾ ಲುಕ್​ ಹೇಗಿತ್ತು?

ಸಾಂಪ್ರದಾಯಿಕ ಗೌನ್​ಗೆ ತಕ್ಕಂತೆ ದಿಶಾ ಮದನ್​ ಅವರು, ದಕ್ಷಿಣ ಭಾರತದ ಸಾಂಪ್ರದಾಯಿಕ 'ಜಡೆ ಬಿಲ್ಲೆ'ಮಾದರಿಯ ಆಭರಣಗಳಿಂದ ಅಲಂಕೃತಗೊಂಡ ಉದ್ದನೆಯ ಜಡೆ, ಕೆಂಪು ಬಿಂದಿ, ಸಾಂಪ್ರದಾಯಿಕ ಮೂಗುತಿ, ಕಿವಿಯೋಲೆ ಮತ್ತು ನೆಕ್ಲೇಸ್ ಧರಿಸಿ ಕೇನ್ಸ್​ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದರು. 
ತಮ್ಮ ಈ ಯಶಸ್ವಿ ರೆಡ್ ಕಾರ್ಪೆಟ್ ಅನುಭವವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ದಿಶಾ, "ಇದು ನನ್ನ ಜೀವನದ ಹೆಮ್ಮೆಯ ಕ್ಷಣ. ಕೇನ್ಸ್ ಎಂದರೆ ನನಗೆ ಕೇವಲ ಫ್ಯಾಷನ್ ಅಲ್ಲ, ಬದಲಿಗೆ ಜಾಗತಿಕ ಮಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವುದು. ದಕ್ಷಿಣ ಭಾರತದ ಕರಕುಶಲತೆ ಮತ್ತು ಪರಂಪರೆಯಲ್ಲಿ ಬೇರೂರಿರುವ ಇಂತಹ ಉಡುಪನ್ನು ಧರಿಸಿದ್ದು ನನಗೆ ಅತ್ಯಂತ ವಿಶೇಷ ಎನಿಸಿದೆ" ಎಂದು ಅವರು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net