ಮದುವೆಯಾಗ್ತಿದ್ದಂತೆ ನೀವು ಮಾಡಬೇಕಾದ ಮೊದಲ ಕೆಲಸ ಇದು; ಮೊಬೈಲ್​ನಿಂದ ಈ 5 ವಿಷಯಗಳನ್ನು ಡಿಲೀಟ್ ಮಾಡ್ಬಿಡಿ..​Digital Detox

ಎಐನಿಂದ ನಿರ್ಮಿಸಿದ ಚಿತ್ರ
ಎಐನಿಂದ ನಿರ್ಮಿಸಿದ ಚಿತ್ರ
Published on
  • ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಂತೆ ನೀವು ಮಾಡಬೇಕಾದ ಕೆಲಸಗಳಿವು

  • ನಿಮ್ಮ ಮೊಬೈಲ್​ನಿಂದ ಈ ಐದು ವಿಚಾರಗಳನ್ನು ಡಿಲೀಟ್ ಮಾಡಿಬಿಡಿ

  • ಸುಖ ಸಂಸಾರದ ಜೀವನಕ್ಕೆ ಮಾಜಿ ಪ್ರೇಮಿಯಿಂದ ದೂರವಿರಿ

Digital detox for marriage: ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಲೇ ಪತ್ನಿ ಮತ್ತು ಪತಿ ಜೊತೆಗೆ ಯಾವುದೇ ಮನಸ್ತಾಪ ಮೂಡದಂತೆ ನೋಡಿಕೊಳ್ಳುವುದು ಮುಖ್ಯ. ಹೀಗಾಗಿ ನಿಮ್ಮ ಸ್ಮಾರ್ಟ್​ ಫೋನ್​ನಲ್ಲಿ ಕಾಂಟ್ಯಾಕ್ಟ್​ನಲ್ಲಿರುವ ಹಳೆ ಪ್ರೇಯಸಿ, ಗೆಳತಿ ವಿಚಾರ ಆಗಾಗ ಬೆಳಕಿಗೆ ಬಂದು ಇಬ್ಬರ ಮಧ್ಯೆ ಉಂಟಾಗುವ ವೈರತ್ವ ಅಥವಾ ರಹಸ್ಯ ಲಾಕರ್​ನಿಂದ ಎದುರಾಗುವ ಸಂಕಷ್ಟ, ಮೆಸೇಜ್​ ಹಿಸ್ಟರಿಗಳು ದ್ವೇಷಕ್ಕೆ ಕಾರಣವಾಗಬಹುದು. ಹೀಗಾಗಿ ನೀವು ನವಜೋಡಿಯಾಗುತ್ತಲೇ ಈ 5 ಅಂಶಗಳನ್ನು ಮರೆಯದೇ ಮಾಡಿ.

ಸುಖಿ ದಾಂಪತ್ಯ ಜೀವನಕ್ಕಾಗಿ ನೀವು ಮಾಡಬೇಕಾದ ಕೆಲಸ ಇದು

  • ಮಾಜಿ ಪ್ರೇಮಿಗಳ ಪೋಟೋ, ವಿಡಿಯೋ ಇಟ್ಟುಕೊಳ್ಳಬೇಡಿ

ನೀವು ಮದುವೆಯಾದ ನಂತರ ಅಥವಾ ಅದರ ಹಿಂದಿನ ದಿನಗಳು ಬಿಡುವಿದ್ದರೆ ನಿಮ್ಮ ಹಳೆಯ ಸಂಗಾತಿ ಜೊತೆಗೆ ನೀವು ಆತ್ಮೀಯವಾಗಿ ತೆಗೆಸಿಕೊಂಡ ಫೋಟೋಗಳನ್ನು ಡಿಲೀಟ್ ಮಾಡಿಕೊಳ್ಳಿ. ಹಳೆಯ ಪ್ರೇಮದ ನೆನಪು, ಚಾಟ್​, ವಿಡಿಯೋ ಎಲ್ಲವನ್ನು ಡಿಲೀಟ್ ಮಾಡಿ. ಇದು ಅಕಸ್ಮಾತ್​ ನಿಮ್ಮ ಸಂಗಾತಿಯ ಕಣ್ಣಿಗೆ ಬಿದ್ದರೆ ಅನಗತ್ಯ ಸಂಶಯ ಕಾಡುವುದು. ಅಭದ್ರತೆ ಉಂಟಾಗುವುದು ಅಥವಾ ಗಂಭೀರ ಮನಸ್ತಾಪಕ್ಕೆ ಕಾರಣವಾಗಬಹುದಾಗಿದೆ.

  • ಇನ್ನೂ ರಹಸ್ಯ ಲಾಕರ್​ಗೆ ಗುಡ್​ಬೈ ಹೇಳಿ

ನಿಮ್ಮ ಹಳೆಯ ಸಂಗಾತಿಯ ನೆನಪಿಗಾಗಿ ಆಕೆ/ಆತನ ಪೋಟೋ, ವಿಡಿಯೋ ಚಾಟ್​ಗಳ ಸ್ಕ್ರೀನ್​ ಶಾಟ್​ ಅನ್ನು ನೀವು ಮೊಬೈಲ್​ನಲ್ಲಿ ಇಟ್ಟುಕೊಂಡಿದ್ದರೆ, ಅದನ್ನು ಮೊದಲು ಡಿಲೀಟ್​ ಮಾಡಿ. ಮದುವೆಯಾದ ನಂತರವೂ ಈ ಅಪ್ಲಿಕೇಶನ್​ಗಳನ್ನು ಇಟ್ಟುಕೊಂಡರೆ ಅಕಸ್ಮಾತ್​ ಆಗಿ ಅದನ್ನು ನೋಡುವ ನಿಮ್ಮ ಪತ್ನಿ ನಿಮಗೆ ಯಾವುದೋ ರಿಲೇಷನ್​ ಶಿಪ್​ ಇರಬಹುದು ಎಂದು ಭಾವಿಸುತ್ತಾಳೆ. ಯಾವುದನ್ನೋ ಲಾಕರ್​​ ಅಲ್ಲಿ ಸೇವ್ ಮಾಡಿಕೊಳ್ಳುತ್ತಿದ್ದಾರೆ ಎಂದು ಅನುಮಾನಿಸಲು ಶುರು ಮಾಡಿಕೊಳ್ಳುತ್ತಾರೆ.

  • ಡೇಟಿಂಗ್​ ಆಪ್ಲಿಕೇಶನ್​ಗೆ ಕಡಿವಾಣ ಬೀಳಲಿ

ನಿಮ್ಮ ಮದುವೆಗೂ ಮುನ್ನ ಸಾಮಾನ್ಯವಾಗಿ ನಿಮಗಾಗಿ ಒಬ್ಬ ಸಂಗಾತಿಯನ್ನು ಬಯಸಿ ಅಥವಾ ಡೇಟಿಂಗ್​ಗಾಗಿ ಬಂಬಲ್, ಟೆಂಡರ್​​​ ಅಪ್ಲಿಕೇಶನ್​ ಬಳಕೆ ಮಾಡುತ್ತಿದ್ದರೆ ಅದನ್ನು ಬಿಟ್ಟುಬಿಡಿ. ಸಂಪೂರ್ಣವಾಗಿ ಡಿಲೀಟ್​ ಮಾಡಿ. ಇಂತಹ ಅಪ್ಲಿಕೇಶನ್​ಗಳು ನಿಮ್ಮ ಮೇಳೆ ಅನುಮಾನ ಮೂಡುವಂತೆ ಮಾಡಬಹುದು ಎನ್ನಲಾಗಿದೆ.

  • ಮೆಸೇಜ್-ಚಾಟ್ ಹಿಸ್ಟರಿ ಡಿಲೀಟ್ ಮಾಡಿ

ನಿಮ್ಮಮೊಬೈಲ್​ನಲ್ಲಿರುವ ಹಳೆಯ ಸಂಗಾತಿಯ ಇನ್​ಸ್ಟಾಗ್ರಾಮ್​​, ಫೇಸ್​ಬುಕ್​ ಮೆಸೇಜ್​ಗಳಲ್ಲಿರುವ ಪ್ರೇಮದ ಚಾಟ್​, ವಿಡಿಯೋ, ವಾಯ್ಸ್​ ಮೆಸೇಜ್​ಗಳನ್ನು ಡಿಲೀಟ್ ಮಾಡಿ. ಹಳೆಯ ನೆನಪನ್ನು ಇಟ್ಟುಕೊಳ್ಳುವುದು ಹೊಸ ಸಂಬಂಧಕ್ಕೆ ಸಮಸ್ಯೆಯನ್ನುಂಟು ಮಾಡಬಹುದು.

  • ಮಾಜಿ ಪ್ರೇಮಿ, ಅನವಶ್ಯಕ ನಂಬರ್ ಡಿಲೀಟ್ ಮಾಡಿ

ನಿಮ್ಮ ಮೊಬೈಲ್​ನಲ್ಲಿ ಹಳೆಯ ಸಂಗಾತಿ ಮತ್ತು ಅನವಶ್ಯಕವಾಗಿ ತುಂಬಿರುವ ನಂಬರ್​ಗಳನ್ನು ಡಿಲೀಟ್ ಮಾಡಿಬಿಡಿ. ಅಕಸ್ಮಾತ್​ ಆಗಿ ಬರುವ ಫೋನ್​ ಕರೆಗಳು ಇಬ್ಬರಲ್ಲಿಯೂ ವೈಮನಸ್ಸು ಮೂಡಿಸುವ ಸಾಧ್ಯತೆ ಇರುತ್ತದೆ. ಸುಖಕರ ಜೀವನಕ್ಕಾಗಿ ಅನಗತ್ಯ ವಿಚಾರಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net