Viral Video: ನಮ್ಮ ಜನರಿಗೆ ಪಾರ್ಟಿ ಮಾಡಲು ಒಂದು ನೆಪ ಸಿಕ್ಕರೆ ಸಾಕು, ಅಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿಸಿ ಬಿಡುತ್ತಾರೆ. ಮದುವೆ, ಹುಟ್ಟುಹಬ್ಬಕ್ಕೆ ಪಾರ್ಟಿ ಮಾಡುವುದು ಸಹಜ. ಆದರೆ ಇಲ್ಲೊಂದು ಕುಟುಂಬ ತಮ್ಮ ಮುದ್ದಿನ ಬೆಕ್ಕು ತಾಯಿಯಾದ (Cat Become Mother) ಖುಷಿಗೆ ಇಡೀ ಊರಿಗೇ ಬಿರಿಯಾನಿ ಪಾರ್ಟಿ ಕೊಟ್ಟಿದೆ. ಹೌದು, ಕೇಳಲು ವಿಚಿತ್ರ ಎನಿಸಿದರೂ ಇದು ಸತ್ಯ. ಸದ್ಯ ಈ ಪಾರ್ಟಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.