ನೀವು ನೋಡಲೇಬೇಕಾದ ಮಹಿಳಾ ಪ್ರಧಾನ ಸೌತ್​ ಇಂಡಿಯನ್​ ಸಿನಿಮಾಗಳಿವು

ನೀವು ನೋಡಲೇಬೇಕಾದ ಮಹಿಳಾ ಪ್ರಧಾನ ಸೌತ್​ ಇಂಡಿಯನ್​  ಸಿನಿಮಾಗಳಿವು
Published on: 

ಜಯ ಜಯ ಜಯ ಜಯ ಹೇ

2022ರಲ್ಲಿ ರಿಲೀಸ್​ ಆಗಿದ್ದ ಜಯ ಜಯ ಜಯ ಜಯ ಹೇ ಸಿನಿಮಾವು...ಸೌಂತ್​ ಇಂಡಿಯನ್​ ಫಿಲ್ಮ್​ ಇಂಡಸ್ಟ್ರಿಯಲ್ಲಿ ಸಖತ್​​ ಸೆನ್ಸೇಷನ್​ ಕ್ರಿಯೇಟ್ ಮಾಡಿತ್ತು. ಪಿತೃ ಪ್ರಧಾನ ಕುಟುಂಬ, ಹೆಣ್ಣಿನ ಸ್ಥಾನ ಮಾನ. ತಾನು ಹೇಳಿದ್ದನ್ನೇ ಕೇಳಬೇಕು ಎನ್ನುವ ಗಂಡಿನ ಮನಸ್ಥಿತಿ...ದೌರ್ಜನ್ಯದ ವಿರುದ್ಧ ಹೋರಾಡುವ ಗೃಹಿಣಿ ಕತೆಯನ್ನು ಕಟ್ಟಲಾಗಿದೆ. ಜೊತೆಗೆ ಯೂಟ್ಯೂಬ್​ ಮೂಲಕ ಕರಾಟೆ ಕಲಿತು ಗಂಡನಿಗೆ ಟಕ್ಕರ್​ ಕೊಡುವ ದೃಶ್ಯಗಳು,.,ಮುಖದ ಮೇಲೆ ನಗು ತರಿಸುವ ಸಿನಿಮಾ ಇದಾಗಿದೆ. ಜಿಯೋ ಹಾಟ್​ಸ್ಟಾರ್​ನಲ್ಲಿ ಈ ಸಿನಿಮಾವಿದೆ.

ಅಮ್ಮು

ಐಶ್ವರ್ಯಾ ಲಕ್ಷ್ಮಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಅಮ್ಮು ಚಾರುಕೇಶ್​ ಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾವಾಗಿದೆ. ನ್ಯಾಯ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕಾದ ಪೊಲೀಸ್ ಅಧಿಕಾರಿಯೇ ತಪ್ಪಿನ ಹಾದಿ ಹಿಡಿದಾಗ, ಹೆಂಡತಿ ಜೊತೆಗೆ ಮೃಘೀಯವಾಗಿ ವರ್ತಿಸಿದಾಗ..ಆಕೆ ತೆಗೆದುಕೊಳ್ಳುವ ನಿರ್ಧಾರ.. ಆತನ ವಿರುದ್ಧ ಹೋರಾಡುವ ರೀತಿಯನ್ನು ಬಹಳ ಚೆನ್ನಾಗಿ ಕಟ್ಟಿಕೊಡಬೇಕಾಗಿದೆ. ಪ್ರೈಂನಲ್ಲಿ ಎಲ್ಲ ಭಾಷೆಯಲ್ಲಿ ಸಿನಿಮಾ ಲಭ್ಯವಿದೆ.

ಸೂಕ್ಷ್ಮ ದರ್ಶಿನಿ

ನಜ್ರಿಯಾ ನಟನೆಯ ಥ್ರಿಲ್ಲರ್ ಸಿನಿಮಾ ಸೂಕ್ಷ್ಮ ದರ್ಶಿನಿ. ತಂಗಿ ಲೆಸ್ಬಿಯನ್​ ಎಂದು ತಿಳಿದುಕೊಳ್ಳುವ ಕುಟುಂಬ ಆಕೆಯನ್ನು ಕೊಂದ...ದೇಹವನ್ನು ಆಸಿಡ್​ಗಳ ಮೂಲಕ ಕರಗಿಸುತ್ತದೆ. ಇದನ್ನು ಅದೇ ಬೀದಿಯ ಹೆಣ್ಣು ಮಕ್ಕಳು ಸೇರಿ ಪತ್ತೆ ಹಚ್ಚುವ ಸುತ್ತ ಥ್ರಿಲ್ಲಿಂಗ್ ಕತೆಯನ್ನು ನಿರ್ದೇಶಕ ಎಂ. ಸಿ. ಜಿತಿನ್ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಜಿಯೋಹಾಟ್​ಸ್ಟಾರ್​ನಲ್ಲಿದ್ದು, ಎಲ್ಲ ಭಾಷೆಯಲ್ಲಿ ನೋಡಬಹುದಾಗಿದೆ.

ಸುಂದರಿ ಗಾರ್ಡನ್ಸ್​

ಚಾರ್ಲಿ ಡೇವಿಸ್ ನಿರ್ದೇಶನದ ಸುಂದರಿ ಗಾರ್ಡನ್ಸ್​ ಸಿನಿಮಾವು ಭಾವುಕತೆಯಿಂದ ಕೂಡಿದ ಸಿನಿಮಾ. ಡಿವೋರ್ಸ್ ಪಡೆದ ನಾಯಕಿಗೆ ಮತ್ತೆ ಮೂಡುವ ಪ್ರೀತಿ, ತಾಯಿಯನ್ನು ಕಳೆದುಕೊಂಡಾಗ ಕಾಡುವ ಒಂಟಿತನದ ಸುತ್ತ ಕತೆಯನ್ನು ಸುಂದರವಾಗಿ ಹೆಣೆಯಲಾಗಿದೆ.

ಗ್ರೇಟ್​ ಇಂಡಿಯನ್ ​ಕಿಚನ್

ಜಿಯೋ ಬೇಬಿ ನಿರ್ದೇಶನದ ಗ್ರೇಟ್ ಇಂಡಿಯನ್​ ಕಿಚನ್​ ಭಾರಿ ಸದ್ದು ಮಾಡಿತ್ತು. ಇದು ಮಲಯಾಳಂನಲ್ಲಿ ಮಾತ್ರವಲ್ಲಿ ತಮಿಳು ಸೇರಿದಂತೆ ಇತರ ಭಾಷೆಗೆ ರಿಮೇಕ್​​ ಆಗಿದೆ. ಭಾರತದ ಅಡುಗೆ ಮನೆಯಲ್ಲಿ ಮಹಿಳೆಯರ ಪಾತ್ರ ಹೇಗೆ ರೂಪಿಸಲಾಗಿದೆ ಎನ್ನುವುದನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಜಿಯೋ ಬೇಬಿ..ಮದುವೆ ಗಂಡ ಸಂಸಾರದ ಮಧ್ಯೆ ಕಟ್ಟಿ ಹಾಕಿಕೊಳ್ಳುವ ಕನಸಿನ ಬಗ್ಗೆ ಚಂದವಾಗಿ ಬಿತ್ತರಿಸಲಾಗಿದೆ.

ಕ್ಯಾಡವರ್

ಅಮಲಾ ಪೌಲ್​ ನಟನೆಯ ಕ್ಯಾಡವರ್ ಅನೂಪ್ ಪಣಿಕ್ಕರ್ ನಿರ್ದೇಶನದ ಸಿನಿಮಾ. ಜಿಯೋ ಹಾಟ್​ಸ್ಟಾರ್​​ನಲ್ಲಿ ನೋಡಲು ಲಭ್ಯವಿದೆ. ಜೈಲಿನಲ್ಲೇ ಕುಳಿತು ಕೊಲೆ ಮಾಡಲು ಸಂಚು ರೂಪಿಸುವ ಕೈದಿಯ ರಹಸ್ಯವನ್ನು ಡಾ. ಭದ್ರಾ (ಅಮಲಾ ಪೌಲ್​) ಹೇಗೆ ಬೇಧಿಸುತ್ತಾರೆ ಎನ್ನುವ ಸುತ್ತ ಕತೆಯನ್ನು ಕಟ್ಟಿಕೊಡಲಾಗಿದೆ, (ಏಜೆನ್ಸೀಸ್).ಗೌತಮ್ ರಾಮಚಂದ್ರನ್

ಗಾರ್ಗಿ

ಸಾಯಿ ಪಲ್ಲವಿ ನಟಿಸಿರುವ ಗಾರ್ಗಿ ಸಿನಿಮಾವು ಸಾಕಷ್ಟು ಮೆಚ್ಚುಗೆ ಪಾತ್ರವಾಗಿತ್ತು. ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾಗುವ ಮಗುವಿಗೆ, ಮಗಳೇ ಶಿಕ್ಷೆಯನ್ನು ವಿಧಿಸಲು ಹೋರಾಡುವ ಸುತ್ತ ಕತೆಯನ್ನು ಕಟ್ಟಿಕೊಡಲಾಗಿದೆ. ಈ ಸಿನಿಮಾವನ್ನು ಗೌತಮ್ ರಾಮಚಂದ್ರನ್ ನಿರ್ದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net