ಘಟಕವನ್ನು ಉದ್ಘಾಟಿಸಿ ಮಾತನಾಡಿದ ಜಪಾನ್ ರಾಯಭಾರಿ ಕೀಚಿ ಒನೊ ಎಎಂ/ಎನ್‌ಎಸ್ ಇಂಡಿಯಾವನ್ನು ಅಭಿನಂದಿಸಿದರು. "ಭಾರತದಲ್ಲಿ ಹೈ-ಎಂಡ್ ಸ್ಟೀಲ್ ಉತ್ಪಾದನೆಗೆ ಜಪಾನ್‌ನ ಅತ್ಯಾಧುನಿಕ ತಂತ್ರಜ್ಞಾನವು ಗಣನೀಯ ಕೊಡುಗೆ ನೀಡಿದ್ದು, ಇದು 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ಉಪಕ್ರಮಕ್ಕೆ ಜಪಾನ್‌ನ ಕೊಡುಗೆಯ ಹೊಸ ಮೈಲುಗಲ್ಲಾಗಿದೆ. ಜಪಾನ್‌ನ ತಂತ್ರಜ್ಞಾನ ಮತ್ತು ಬಂಡವಾಳಕ್ಕೆ, ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ಬೇಡಿಕೆಯು ಪೂರಕವಾಗಿದೆ," ಎಂದ ಅವರು, "ಹಜೀರಾ ಸ್ಟೀಲ್ ಪ್ಲಾಂಟ್‌ನ ಸಾಮರ್ಥ್ಯವನ್ನು ನೋಡಿದ ನಂತರ, ಭಾರತ-ಜಪಾನ್ ನಡುವಿನ ಕೈಗಾರಿಕಾ ಸಹಕಾರ ಮತ್ತು 'ವಿಕಸಿತ ಭಾರತ'ದ ಭವಿಷ್ಯ ಉಜ್ವಲವಾಗಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.