

ಬೆಂಗಳೂರು: ಮೂಳೆ ಚಿಕಿತ್ಸಾ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ 'ಡಿಪ್ಯೂ ಸಿಂಥೆಸ್' ಸಂಸ್ಥೆಯು, ಬೆಂಗಳೂರಿನ ಪ್ರತಿಷ್ಠಿತ 'ರಾಮಯ್ಯ ಅಡ್ವಾನ್ಸ್ಡ್ ಲರ್ನಿಂಗ್ ಸೆಂಟರ್' (ಆರ್‌ಎಎಲ್‌ಸಿ) ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಭಾರತದ ಮೂಳೆ ಶಸ್ತ್ರಚಿಕಿತ್ಸಕರಿಗೆ ವರ್ಷಪೂರ್ತಿ ಅತ್ಯಾಧುನಿಕ ಪ್ರಾಯೋಗಿಕ ತರಬೇತಿ ನೀಡಲು ಮುಂದಾಗಿದ್ದು, ದೇಶದ ಮೊಟ್ಟಮೊದಲ ವಿಶೇಷ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುತ್ತಿದೆ.