ಐದು ವರ್ಷಗಳಿಂದ ಬಟ್ಟೆಯೇ ಧರಿಸಿಲ್ಲ, ಬಟ್ಟೆ ಅಂದ್ರೆನೇ ಆಗಿಬರಲ್ಲ ಎಂದು ಈ ಮಹಿಳೆ ಮಾಡಿಕೊಂಡಿದ್ದೇನು ಗೊತ್ತಾ?

Tatoo
Published on

ಬರ್ಲಿನ್​: ಕೆಲವರಿಗೆ ಒಂದೊಂದು ವಿಷಯದಲ್ಲಿ ಆಸಕ್ತಿ ಇರುವುದಿಲ್ಲ. ಆದರೆ ತೀರಾ ಅಗತ್ಯ ವಿಷಯಗಳಿಗೆ ಬಂದರೆ ಅನಿವಾರ್ಯವಾಗಿ ಅದಕ್ಕೆ ಹೊಂದಿಕೊಳ್ಳಲೇ ಬೇಕಿದೆ. ಆದರೆ ಇಲ್ಲೊಬ್ಬ ಮಹಿಳೆ ತನಗೆ ಬಟ್ಟೆಯೇ ಇಷ್ಟವಿಲ್ಲವೆಂದು ಮಾಡಿರುವುದು ನೋಡಿದರೆ ಎಂತಹವರಿಗೂ ಶಾಕ್​ ಆಗುತ್ತದೆ.

ಜರ್ಮನಿಯಲ್ಲಿರುವ ಈ ಮಹಿಳೆ ಟ್ಯಾಟೂ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದಾಳೆ. ಅರೆ...ಟ್ಯಾಟೂ ಎಲ್ಲರು ಹಾಕಿಸಿಕೊಳ್ಳುತ್ತಾರೆ ಅದರಲ್ಲೇನು ವಿಶೇಷ ಎಂದನ್ನಿಸಬಹುದು.

ಈ ಮಹಿಳೆಗೆ ಬಟ್ಟೆ ಅಂದ್ರೇನೇ ಅಲರ್ಜಿಯಂತೆ, ಐದು ವರ್ಷಗಳಿಂದ ಈ ಮಹಿಳೇ ಬಟ್ಟೆಯೇ ಧರಿಸಿಲ್ಲವಂತೆ, ಬಟ್ಟೆ ಧರಿಸುವುದು ಅಂದ್ರೆ ಆಗೋದೇ ಇಲ್ವಂತೆ ಅದಕ್ಕೆ ಒಂದು ಉಪಾಯ ಮಾಡಿದ್ದಾಳೆ.

ಅದೇನೆಂದರೆ ತನ್ನ ದೇಹವನ್ನು ಮುಚ್ಚಿಕೊಳ್ಳಲು ಈಕೆ ಇಡೀ ದೇಹವನ್ನೇ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಿ ಈಕೆ ಟ್ಯಾಟೂವಿನಿಂದ ಮೈ ಮುಚ್ಚಿಕೊಂಡಿದ್ದಾಳೆ. ಇದಕ್ಕೆ 25 ಲಕ್ಷ ಖರ್ಚು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ಐದು ವರ್ಷಗಳ ಹಿಂದೆ ಈಕೆ ಮೊದಲ ಟ್ಯಾಟೈ ಹಾಕಿಸಿಕೊಂಡಿದ್ದಳು, ಬರು ಬರುತ್ತಾ ಇಡೀ ದೇಹವಿಡೀ ಟ್ಯಾಟೂವನ್ನೇ ತುಂಬಿಸಿಕೊಂಡಿದ್ದಾಳೆ. ಸದ್ಯಕ್ಕೆ ಈಕೆಗೆ ಈಗ 50 ವರ್ಷ, ಐದು ವರ್ಷದಿಂದಲೂ ಬಟ್ಟೆಯನ್ನೇ ಬಳಸುತ್ತಿಲ್ಲ ಎಂದು ಹೇಳಿಕೊಂಡಿದ್ದಾಳೆ. ಸದ್ಯ ಈಕೆಯ ಫೋಟೋ ಭಾರೀ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net