

Benjamin Netanyahu: ಗಾಜಾ ಮೇಲೆ ತೀವ್ರ ದಾಳಿ ಮಾಡುತ್ತಿರುವ ಇಸ್ರೇಲ್ ಮಿಲಿಟರಿಯು ನಗರ ನಿವಾಸಿಗಳಿಗೆ ಸ್ಥಳಾಂತರವಾಗುವಂತೆ ಮಂಗಳವಾರ (ಸೆಪ್ಟೆಂಬರ್, 9) ಆದೇಶ ನೀಡಿದೆ.
ಇಸ್ರೇಲ್ ಸೇನೆಯು ಹಮಾಸ್ನ ಉಳಿದ ಎರಡು ಭದ್ರಕೋಟೆಗಳನ್ನು ವಶಪಡಿಸಿಕೊಳ್ಳುವ ಯೋಜನೆಯನ್ನು ಅನುಸರಿಸುತ್ತಿದೆ. ಅಲ್ಲದೆ, ಸುಮಾರು ಎರಡು ವರ್ಷಗಳ ಯುದ್ಧವನ್ನು ಕೊನೆಗೊಳಿಸಲು ಇಸ್ರೇಲ್ ಒಂದು ಮಿಲಿಯನ್ ಜನವಿರುವ ಗಾಜಾ ನಗರವನ್ನು ವಶಪಡಿಸಿಕೊಳ್ಳುವುದು ಮತ್ತು ಕದನ ವಿರಾಮ ಪ್ರಯತ್ನವನ್ನು ಘೋಷಿಸುವ ಪ್ರಮುಖ ಗುರಿಗಳನ್ನು ಹೊಂದಿದೆ.
ಹಮಾಸ್ ಉಗ್ರರು ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ನಿರಾಕರಿಸಿದ್ದರಿಂದ ಇಸ್ರೇಲ್ ಹಮಾಸ್ನ್ನು ಸಂಪೂರ್ಣ ಸೋಲಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ನೆತನ್ಯಾಹು ತಿಳಿಸಿದ್ದಾರೆ. ಅಲ್ಲದೆ, ಸ್ವತಂತ್ರ ಪ್ಯಾಲೆಸ್ಟೀನಿಯನ್ ದೇಶವನ್ನು ಸ್ಥಾಪಿಸದ ಹೊರತು ಹಮಾಸ್ ನಿಶ್ಯಸ್ತ್ರಗೊಳಿಸುವುದಿಲ್ಲ ಎಂದು ನೆತನ್ಯಾಹು ಹೇಳಿದರು.
ಇಸ್ರೇಲ್ ಭದ್ರತಾ ನಿಯಂತ್ರಣವನ್ನು ತೆಗೆದುಕೊಳ್ಳುವುದರಿಂದ ಗಾಜಾ ಪಟ್ಟಿಯನ್ನು ಸಶಸ್ತ್ರೀಕರಣಗೊಳಿಸುವುದನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದೆ. ಗಾಜಾದಲ್ಲಿ ಬರಗಾಲದ ಗಂಭೀರ ಅಪಾಯವನ್ನು ಎದುರಿಸುತ್ತಿರುವ 2.2 ಮಿಲಿಯನ್ ಜನಸಂಖ್ಯೆಯ ಮಾನವೀಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು ಎಂದು ಅಂತರರಾಷ್ಟ್ರೀಯ ಸಂಸ್ಥೆಗಳು ತಿಳಿಸಿವೆ.
ಗಾಜಾದಲ್ಲಿ ಹಮಾಸ್ ಹಿಡಿದಿಟ್ಟುಕೊಂಡಿರುವ ಉಳಿದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಕದನ ವಿರಾಮವನ್ನು ಖಚಿತಪಡಿಸಿಕೊಳ್ಳಲು ಇಸ್ರೇಲ್ ಮತ್ತು ಹಮಾಸ್ ನಡುವಿನ ಅಂತರವನ್ನು ಕಡಿಮೆ ಮಾಡಲು ಅಮೆರಿಕ, ಕತಾರ್ ಮತ್ತು ಈಜಿಪ್ಟ್ ನಡೆಸಿದ ಮಧ್ಯಸ್ಥಿಕೆ ಪ್ರಯತ್ನಗಳು ವಿಫಲವಾಗಿವೆ.
2023ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯೊಂದಿಗೆ ಯುದ್ಧ ಪ್ರಾರಂಭವಾಯಿತು. ಅಲ್ಲದೆ, ಇಸ್ರೇಲ್ ಈಗಾಗಲೇ ಗಾಜಾದ ಶೇ,75 ರಷ್ಟು ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಈ ಯುದ್ದದಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದ್ದು, 251 ಮಂದಿಯನ್ನು ಗಾಜಾಗೆ ಒತ್ತೆಯಾಳಾಗಿ ಇರಿಸಲಾಯಿತು ಎಂದು ಇಸ್ರೇಲ್ ತಿಳಿಸಿದೆ. ಆದರೆ, ಗಾಜಾದಲ್ಲಿ ಉಳಿದ 48 ಒತ್ತೆಯಾಳುಗಳಲ್ಲಿ 20 ಜನರು ಜೀವಂತವಾಗಿದ್ದಾರೆ ಎಂದು ಇಸ್ರೇಲಿ ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೆ,ಇಸ್ರೇಲ್ ಮಿಲಿಟರಿ ದಾಳಿಯಲ್ಲಿ 62,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಆಂತರಿಕವಾಗಿ ಗಾಜಾದ ಬಹುತೇಕ ಇಡೀ ಜನಸಂಖ್ಯೆಯನ್ನು ಸ್ಥಳಾಂತರಿಸಲಾಗಿದೆ ಮತ್ತು ಹೆಚ್ಚಿನ ಪ್ರದೇಶವನ್ನು ನಾಶ ಮಾಡಲಾಗಿದೆ. (ಏಜೆನ್ಸೀಸ್)