ರಾಜ್ಯದ ದೇವಾಲಯಗಳ ಸುತ್ತ ಗಡಿ ಗೋಡೆಗಳನ್ನು ನಿರ್ಮಿಸಲಿದ್ದೇವೆ: ಬಿಹಾರ ಸಿಎಂ

Untitled design - 2023-08-15T183348.962
Published on

ಬಿಹಾರ: ಇಂದು 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಾತನಾಡಿದ ಬಿಹಾರ ಸಿಎಂ ನಿತೀಶ್​ ಕುಮಾರ್, ರಾಜ್ಯದ ದೇವಾಲಯಗಳ ಸುತ್ತ ಗಡಿ ಗೋಡೆಗಳನ್ನು ನಿರ್ಮಿಸಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಭಾಷಣದ ವೇಳೆ ಈ ವಿಷಯವನ್ನು ಮುನ್ನೆಲೆಗೆ ತಂದ ಸಿಎಂ, "ಹಲವು ದೇವಸ್ಥಾನಗಳಿಂದ ವಿಗ್ರಹಗಳು ಕಳ್ಳತನವಾದ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗಿದೆ. ಹಾಗಾಗಿ ದುಷ್ಕರ್ಮಿಗಳನ್ನು ಇಂಥ ಕೆಲಸಗಳಿಂದ ದೂರವಿಡಲು ರಾಜ್ಯ ಸರ್ಕಾರವು ದೇವಾಲಯಗಳಿಗೆ ಗಡಿ ಗೋಡೆಗಳನ್ನು ನಿರ್ಮಿಸಲಿದೆ" ಎಂದು ಹೇಳಿದರು.

"ರಾಜ್ಯದಲ್ಲಿ ಕೋಮು ಘರ್ಷಣೆಯ ಪ್ರಕರಣಗಳು ಇಳಿಮುಖವಾಗಿದೆ. ಗುತ್ತಿಗೆ ಶಿಕ್ಷಕರಿಗೆ ತಮ್ಮ ಉದ್ಯೋಗಗಳನ್ನು ಖಾಯಂಗೊಳಿಸಲು ಸರ್ಕಾರವು ಯೋಜನೆಯನ್ನು ರೂಪಿಸುತ್ತಿದೆ. ಉತ್ತಮ ಶಿಕ್ಷಣದ ಗುಣಮಟ್ಟವನ್ನು ಕಾಪಾಡಬೇಕು, ವಿಫಲವಾದಲ್ಲಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ" ಎಂದು ಎಚ್ಚರಿಕೆಯ ಜತೆ ಭರವಸೆ ನೀಡಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net