ನಮ್ಮ ನಡುವೆ ಇದುವೇ... ಜಹೀರ್ ಇಕ್ಬಾಲ್ ಜತೆ ಮದುವೆ ಬಳಿಕ ಸೋನಾಕ್ಷಿಗೆ ಮತಾಂತರಗೊಳ್ಳಲು ಕೇಳಲಾಗಿತ್ತಾ? ಹೀಗಿದೆ ನಟಿ ನೀಡಿದ ಕಾರಣ

Sonakshi Zaheer
Published on

ಮುಂಬೈ: ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಸದ್ಯ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದು, ಕುಟುಂಬದ ಜತೆ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. 2024ರಲ್ಲಿ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಜೊತೆಗೆ ವೈವಾಹಿಕ ಹೀವನಕ್ಕೆ ಕಾಲಿಟ್ಟಿದ್ದ ಸೋನಾಕ್ಷಿ ಸಿನ್ಹಾ ಸಖತ್ ಸೌಂಡ್​ ಮಾಡಿದ್ದರು. ಮದುವೆಗೆ ಸೋನಾಕ್ಷಿ ಸಹೋದರ ಹಾಜರಾಗದೆ ಇರುವುದು ಕುಟುಂಬಸ್ಥರಿಗೆ ಒಪ್ಪಿಗೆ ಇಲ್ಲವೆಂಬ ಮಾತನ್ನು ಹುಟ್ಟುಹಾಕಿದ್ದವು. ಆ ಬಳಿಕ ಕುಟುಂಬಸ್ಥರು ಸ್ಪಷ್ಟನೆ ನೀಡುವ ಮೂಲಕ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದರು.

ಮದುವೆಯ ಬಳಿಕ ಸೋನಾಲ್ಷಿ ಸಿನ್ಹಾ (Sonakshi Sinha) ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿ ಹರಿದಾಡಿದ್ದವು. ಅವರ ವಿವಾಹದ ನಿರ್ಧಾರವು ಸಾರ್ವಜನಿಕವಾಗಿ ಹಲವು ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗಿತ್ತು. ಇದೀಗ ಅವೆಲ್ಲವಕ್ಕೂ ನಟಿ ಸೋನಾಕ್ಷಿ ಸ್ಪಷ್ಟನೆ ನೀಡುವ ಮೂಲಕ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸೋನಾಕ್ಷಿ ಸಿನ್ಹಾ, ನನ್ನ ತಂದೆ ಸಾಧ್ಯವಾದಷ್ಟು ನನಗೆ ಬೆಂಬಲ ನೀಡುತ್ತಿದ್ದರು. ತನ್ನ ಸಹೋದರರ ಅನುಪಸ್ಥಿತಿಯ ಬಗ್ಗೆ ನಾನು ಅಷ್ಟೇನು ಯೋಚಿಸಲಿಲ್ಲ. ಜಹೀರ್ ಕುಟುಂಬದಿಂದ ಇಸ್ಲಾಂಗೆ ಮತಾಂತರಗೊಳ್ಳುವಂತೆ ಯಾವುದೇ ಮಾತು ಆಡಿಲ್ಲ.

ನಮ್ಮಿಬ್ಬರ ನಡುವೆ ಮತಾಂತರದ ಪ್ರಶ್ನೆಯೇ ಬರಲಿಲ್ಲ. ನಾವು ಪರಸ್ಪರ ಪ್ರೀತಿಸುತ್ತೇನೆ. ಅಷ್ಟು ಸಾಕು. ನಾವು ಧರ್ಮವನ್ನು ನೋಡುತ್ತಲೇ ಇಲ್ಲ. ಪ್ರೀತಿಸುತ್ತಿರುವ ಇಬ್ಬರು ವ್ಯಕ್ತಿಗಳು ಮದುವೆ ಆದೆವು. ಅವರು ತಮ್ಮ ಧರ್ಮವನ್ನು ನನ್ನ ಮೇಲೆ ಹೇರಿಲ್ಲ. ಹಾಗೆಯೇ ನಾನು ನನ್ನ ಧರ್ಮವನ್ನು ಅವರ ಮೇಲೆ ಹೇರಿಲ್ಲ. ನಾವು ಧರ್ಮದ ಬಗ್ಗೆ ಚರ್ಚೆ ಮಾಡುವುದೇ ಇಲ್ಲ. ಇಬ್ಬರೂ ಕುಳಿತುಕೊಂಡು ಅದರ ಬಗ್ಗೆ ಮಾತನಾಡುವುದಿಲ್ಲ.

ನಾವಿಬ್ಬರೂ ಪರಸ್ಪರರ ಸಂಸ್ಕೃತಿಗಳನ್ನು ಗೌರವಿಸುತ್ತೇವೆ ಮತ್ತು ಅರ್ಥಮಾಡಿಕೊಳ್ಳುತ್ತೇವೆ. ಜಹೀರ್​ ನಮ್ಮ ಮನೆಯಲ್ಲಿನ ಕೆಲವು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ನಾನು ಅವರ ಮನೆಯಲ್ಲಿನ ಕೆಲವು ಸಂಪ್ರದಾಯಗಳನ್ನು ಅನುಸರಿಸುತ್ತೇನೆ. ಅವರು ನನ್ನ ಮನೆಯಲ್ಲಿನ ದೀಪಾವಳಿ ಪೂಜೆಯಲ್ಲಿ ಭಾಗವಹಿಸುತ್ತಾರೆ ಮತ್ತು ನಾನು ಅವರ ಮನೆಯ ಆಚರಣೆಗಳಲ್ಲಿ ಭಾಗವಹಿಸುತ್ತೇನೆ. ನಮ್ಮ ನಡುವೆ ಇದುವೇ ಮುಖ್ಯವಾಗಿದೆ.

ಬೇರೆ ಬೇರೆ ಧರ್ಮಗಳಿಗೆ ಸೇರಿದವರು ಮದುವೆಯಾಗಲು ಉತ್ತಮ ಮಾರ್ಗವೆಂದರೆ, ವಿಶೇಷ ವಿವಾಹ ಕಾಯ್ದೆ. ಅಲ್ಲಿ ನಾನು ಹಿಂದೂ ಮಹಿಳೆಯಾಗಿ ನನ್ನ ಧರ್ಮವನ್ನು ಬದಲಾಯಿಸುವ ಅಗತ್ಯವಿಲ್ಲ ಮತ್ತು ಅವರು ಮುಸ್ಲಿಂ ಪುರುಷನಾಗಿಯೇ ಉಳಿಯಬಹುದು. ಅದು ತುಂಬಾ ಸರಳವಾಗಿದೆ ಎಂದು ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net