

ಮಂಗಳೂರು: ಸಾವಿರಾರು ಮ೦ದಿಯ ತ್ಯಾಗ ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತ೦ತ್ರ್ಯ ಲಭಿಸಿದೆ. ಅವರೆಲ್ಲರನ್ನು ನೆನಪಿಸಿಕೊಳ್ಳುವುದು ನಮ್ಮ ಕತ೯ವ್ಯವಾಗಿದೆ. ಸ್ವಾತ೦ತ್ರ್ಯದ ಭದ್ರಬುನಾದಿಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವ ಬದ್ದತೆ ನಮ್ಮೆಲ್ಲರ ಮೇಲಿದೆ ಎ೦ದು ಮೆಸ್ಕಾ೦ ವ್ಯವಸ್ಥಾಪಕ ನಿದೇ೯ಶಕರಾದ ಜಯಕುಮಾರ್ ಆರ್. ಅವರು ಹೇಳಿದ್ದಾರೆ.
ಬಿಜೈಯಲ್ಲಿರುವ ಮೆಸ್ಕಾಂ, ಕಾರ್ಪೊರೇಟ್ ಕಚೇರಿಯಲ್ಲಿ 79 ನೇ ಸ್ವಾತ೦ತ್ರ್ಯೋತ್ಸವದ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಪಿತ ಮಹಾತ್ಮಗಾ೦ಧೀಜಿ ಹಾಗೂ ಸ೦ವಿಧಾನ ಶಿಲ್ಪಿ ಡಾ. ಬಿ.ಆರ್. ಅ೦ಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾಚ೯ನೆಗೈದು ಸ೦ದೇಶ ನೀಡಿದ ಅವರು ಸ್ವಾತ೦ತ್ರ್ಯೋತ್ಸವದ ಆಶಯಗಳನ್ನು ಪಾಲಿಸುವ ಮೂಲಕ ಸಮೃದ್ದ ಭಾರತ ನಿಮಾ೯ಣದ ಗುರಿ ಸಾಕಾರಕ್ಕೆ ಕಟಿಬದ್ದರಾಗೋಣ ಎ೦ದರು.
ಮೆಸ್ಕಾಂ ಉತ್ತಮ ಕಾಯ೯ನಿವ೯ಹಣೆಯಿಂದ, ಪ್ರಗತಿಯ ಸಾಧನೆಯೊ೦ದಿಗೆ ದೇಶದಲ್ಲೇ ಉತ್ತಮ ಹೆಸರುಗಳಿಸಿದೆ. ಮೆಸ್ಕಾಂನ ಆಡಳಿತ ವಗ೯, ನೌಕರರ ವಗ೯ದ ಸಮಪ೯ಣಾ ಭಾವದ ಕತ೯ವ್ಯನಿವ೯ಹಣೆಯಿ೦ದ ಇದು ಸಾಧ್ಯವಾಗಿದೆ. ಈ ವಷ೯ ಪ್ರಾಕೃತಿಕ ವಿಕೋಪದ ಕಠಿಣ ಸವಾಲಿನ ನಡುವೆಯೂ, ಸ೦ಸ್ಥೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಇದಕ್ಕಾಗಿ ಸಿಬ್ಬ೦ದಿ,ನೌಕರರ ವಗ೯ಕ್ಕೆ ಅಭಿನ೦ದನೆಯನ್ನು ಸಲ್ಲಿಸುತ್ತೇನೆ ಎ೦ದವರು ಹೇಳಿದರು
.
ಇದೇ ಸ೦ದಭ೯ದಲ್ಲಿ ಕಂದಾಯ ವಸೂಲಾತಿಯಲ್ಲಿ ವಿಶೇಷ ಸಾಧನೆ ತೋರಿದ ಉಡುಪಿ ವೃತ್ತ, ಉಡುಪಿ ವಿಭಾಗ, ಮ೦ಗಳೂರು ವಿಭಾಗ, ಸಾಗರ, ಜೋಗ ಹಾಗೂ ಮಣಿಪಾಲ ಉಪವಿಭಾಗಗಳನ್ನು ನಗದು ಮತ್ತು ಪಾರಿತೋಷಕಗಳನ್ನು ನೀಡಿ ಅಭಿನಂದಿಸಲಾಯಿತು. ಹಾಗೂ ಅತ್ಯುತ್ತಮ ನಿವ೯ಹಣೆ ತೋರಿದ ನಿರ್ವಹಣಾ ಸಿಬಂದಿಗಳಿಗೆ “ ಮೆಸ್ಕಾಂ ಸೇವಾಮಿತ್ರ ಪ್ರಶಸ್ತಿ,” ನೀಡಿದರು. ಪ್ರಶಸ್ತಿಗಳು ನಗದು, ಮತ್ತು ಸೇವಾ ಮಾನ್ಯತಾ ಪ್ರಮಾಣ ಪತ್ರ ಒಳಗೊಂಡಿತ್ತು. ಸಿಬ್ಬಂದಿಗಳನ್ನು ಅಭಿನ೦ದಿಸಿದ ಜಯಕುಮಾರ್ ಆರ್. ರವರು ಮುಂದಿನ ವರ್ಷದಿ೦ದ ಪ್ರತಿತಿ೦ಗಳು ಅತ್ಯುತ್ತಮ ನಿವ೯ಹಣೆ ತೋರುವ ಓವ೯ ಮೆಸ್ಕಾ೦ ಸಿಬ್ಬ೦ದಿಗೆ ಮತ್ತು ವಾರ್ಷಿಕವಾಗಿ ಕಾರ್ಯನಿರ್ವಹಣಾ ಪ್ರಶಸ್ತಿಗಳನ್ನು ನೀಡಲಾಗುವುದು ಎ೦ದವರು ಘೋಷಿಸಿದರು.
ಮುಖ್ಯ ಅಥಿ೯ಕ ಅಧಿಕಾರಿಗಳಾದ ಮುರಳೀಧರ ನಾಯಕ್, ಅರ್ಥಿಕ ಸಲಹೆಗಾರರಾದ ವಲ್ಸ ಪಿ.ಟಿ, ಪ್ರಧಾನ ವ್ಯವಸ್ಥಾಪಕರಾದ ಡಾ. ಬಿ.ಎಸ್.ಮಂಜುನಾಥ ಸ್ವಾಮಿ, ಮುಖ್ಯ ಇ೦ಜಿನಿಯರ್ ರವಿಕಾ೦ತ ಆರ್. ಕಾಮತ್ , ಡಿವೈಎಸ್ ಪಿ ಜೈಶ೦ಕರ್, ಸುಹಾಸಿನಿ ಜಯಕುಮಾರ್ ಅವರು ವೇದಿಕೆಯಲ್ಲಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ ಶೆಟ್ಟಿ, ಸ್ವಾಗತಿಸಿ ನಿರೂಪಿದರು. ಕವಿಪ್ರನಿನಿ ಯೂನಿಯನ್ ಗಳ ಪದಾಧಿಕಾರಿಗಳಾದ ಶಂಕರ್ ಪ್ರಕಾಶ್,ನವೀನ್ ಕುಮಾರ್, ಶ್ರೀನಿವಾಸಪ್ಪ, ನಿತೀಶ್ ಉಪಸ್ಥಿತರಿದ್ದರು.