ವಯನಾಡ್ ಭೂಕುಸಿತ: ಪ್ರಾಣದ ಹಂಗು ತೊರೆದು ಸೇನೆ ಕಾರ್ಯಚಾರಣೆ..ನಾನೂ ಸೇನೆಗೆ ಸೇರುತ್ತೇನೆಂದು ಪತ್ರ ಬರೆದ ಬಾಲಕ

ಕೇರಳ: ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಆರನೇ ದಿನಕ್ಕೆ ತಲುಪಿದೆ. ಇಂದು (ಭಾನುವಾರ) ಮುಂಡಕ್ಕೈ ಮತ್ತು ಸಾಮ್ಲಿಮಟ್ಟಂನಲ್ಲಿ ಸೇನಾ ಮತ್ತು ನೆರವು ತಂಡಗಳು ಶೋಧ ಕಾರ್ಯಾಚರಣೆ ನಡೆಸಲಿವೆ.

ಮತ್ತೊಂದೆಡೆ, ಭೂಕುಸಿತ ಘಟನೆಯಲ್ಲಿ ಸತ್ತವರ ಸಂಖ್ಯೆ 365 ಕ್ಕೆ ತಲುಪಿದೆ. 148 ಮೃತ ದೇಹಗಳನ್ನು ಗುರುತಿಸಿ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಇನ್ನೂ 206 ಮಂದಿ ಪತ್ತೆಯಾಗಬೇಕಿದೆ. ಮೃತರಲ್ಲಿ 30 ಮಕ್ಕಳಿರುವುದು ಆಘಾತಕಾರಿಯಾಗಿದೆ.  93 ಪರಿಹಾರ ಕೇಂದ್ರಗಳಲ್ಲಿ 10,042 ಜನರು ಆಶ್ರಯ ಪಡೆದಿದ್ದಾರೆ. ಮತ್ತೊಂದೆಡೆ ಅಪರಿಚಿತ ಮೃತದೇಹಗಳ ಅಂತ್ಯಸಂಸ್ಕಾರವನ್ನು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಸರಕಾರಿ ಚಿತಾಗಾರದಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗುತ್ತಿದೆ

ಭೂಕುಸಿತ ಸಂಭವಿಸಿದ ಎಲ್ಲ ಪ್ರದೇಶಗಳಲ್ಲಿ ಶೋಧಕಾರ್ಯ ನಡೆಸಲಾಗಿದೆ. ವಿವಿಧ ಪಡೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಆಶ್ರಯದಲ್ಲಿ ಶೋಧ ನಡೆಸಲಾಯಿತು. ತಮಿಳುನಾಡು ಅಗ್ನಿಶಾಮಕ ದಳದ ಶ್ವಾನದಳ ಕೂಡ ನೆರವು ನೀಡುತ್ತಿದೆ. ಇಂದು (ಭಾನುವಾರ) ಕೂಡ ಅದೇ ರೀತಿಯಲ್ಲಿ ಶೋಧ ಕಾರ್ಯ ಮುಂದುವರಿಯಲಿದೆ.

ಕೇರಳದ ಇತಿಹಾಸದಲ್ಲೇ ಅತಿ ದೊಡ್ಡ ಅನಾಹುತವಾಗಿರುವ ಈ ಘಟನೆಯನ್ನು ಕಂಡು ಹಲವರು ಬೆಚ್ಚಿಬಿದ್ದಿದ್ದಾರೆ. ಈಗಾಗಲೇ ವಿಪತ್ತು ನಿರ್ವಹಣಾ ತಂಡಗಳು, ಸೇನೆ, ಅಗ್ನಿಶಾಮಕ ದಳದವರು, ಎನ್‌ಡಿಆರ್‌ಎಫ್, ಸ್ವಯಂಸೇವಕರು ಮತ್ತು ಸ್ಥಳೀಯರು ಅನೇಕ ಜೀವಗಳನ್ನು ಉಳಿಸಿದ್ದಾರೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಸೇನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಭಾರತೀಯ ಸೇನೆಯು ನಂತರದ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.ಮಗುವೊಂದು ಬರೆದಿರುವ ಪತ್ರ ಇದೀಗ ವೈರಲ್ ಆಗಿದೆ.

ಭಾರತೀಯ ಸೇನೆಯ ಸೇವೆಯನ್ನು ಟಿವಿಯಲ್ಲಿ ನೋಡಿದ ಮೂರನೇ ತರಗತಿ ವಿದ್ಯಾರ್ಥಿ ರಿಯಾನ್ ಸೇನೆಗೆ ಪತ್ರ ಬರೆದಿದ್ದಾನೆ. ಈ ಪೋಸ್ಟ್ ಅನ್ನು ಭಾರತೀಯ ಸೇನೆಯ ದಕ್ಷಿಣ ಕಮಾಂಡ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ‘ಆತ್ಮೀಯ ಸೇನೆಯೇ, ವಯನಾಡಿನಲ್ಲಿ ಭೂಕುಸಿತದಿಂದ ನೆಲದಡಿಯಲ್ಲಿ ಸಿಲುಕಿದ್ದ ಹಲವು ಮಂದಿಯನ್ನು ನೀವು ರಕ್ಷಿಸುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು.  ಸೇತುವೆಯನ್ನು ನಿರ್ಮಿಸುವ ವೀಡಿಯೊದಲ್ಲಿ ನಿಮ್ಮನ್ನು ನೋಡಿ ನನಗೆ ಹೆಮ್ಮೆಯಾಯಿತು. ನಿಮ್ಮ ಪ್ರೇರಣೆಯಿಂದ ಮುಂದೊಂದು ದಿನ ಸೇನೆಗೆ ಸೇರಿ ದೇಶವನ್ನು ಉಳಿಸುತ್ತೇನೆ” ಎಂದು ರಿಯಾನ್ ಬರೆದಿರುವ ಪತ್ರ ಹಲವು ಮಂದಿಗೆ ಸ್ಫೂರ್ತಿ ನೀಡುತ್ತಿದೆ.

Share This Article

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ