ಭಾರೀ ಮಳೆಗೆ ನೀರಿನ ಮಟ್ಟ ಏರಿಕೆ: ಹಗ್ಗ ಹಿಡಿದು ಎರಡು ಗಂಟೆಗಳ ಕಾಲ ತಾವಿ ನದಿಯಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ| tawi-river

Untitled design (1)
Published on

52 ವರ್ಷದ ಮದನ್ ಕುಮಾರ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ಇಂದು ಬೆಳಗ್ಗೆ 8:45 ರ ಸುಮಾರಿಗೆ ಜ್ಯುವೆಲ್ ಚೌಕ್ ಸೇತುವೆಯ ಬಳಿ ನದಿಯಿಂದ ಮರಳು ತೆಗೆಯಲು ಹೋಗಿದ್ದಾಗ ನೀರಿನ ಮಟ್ಟ ಹಠಾತ್ತನೆ ಏರಿಕೆಯಾದ ಪರಿಣಾಮ ನದಿಯಲ್ಲೇ ಸಿಕ್ಕಿಬಿದ್ದಿದ್ದಾನೆ.

ಜಮ್ಮು: ಜಮ್ಮುವಿನ ತಾವಿ ನದಿಯಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ನೀರು ಹರಿಯುತ್ತಿದ್ದಾಗ, ನದಿಯ ಮಧ್ಯದಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯೊಬ್ಬ ಜೀವ ಉಳಿಸಿಕೊಳ್ಳಲು ಹಗ್ಗ ಹಿಡಿದು ನಿಂತಿದ್ದ ದಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ.

ಸುಮಾರು ಎರಡು ಗಂಟೆಗಳ ಕಾಲ ಅವರು ನದಿಯಲ್ಲೇ ಸಿಲುಕಿ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಕುಮಾರ್ ಒಂದು ಕೈಯಿಂದ ಹಗ್ಗವನ್ನು ಹಿಡಿದುಕೊಂಡು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಸೇತುವೆಯಿಂದ ಏಣಿಯನ್ನು ಕೆಳಗಿಳಿಸಿ ಅವರನ್ನು ಸುರಕ್ಷಿತವಾಗಿ ಎಳೆದು ತಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಾದ್ಯಂತ ಭಾರೀ ಮಳೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ ರಿಯಾಸಿ ಜಿಲ್ಲೆಯ ಕತ್ರಾದಲ್ಲಿ ಅತಿ ಹೆಚ್ಚು - 108.5 ಮಿಮೀ - ರಾಜೌರಿ (80 ಮಿಮೀ), ಉಧಂಪುರ (71.4 ಮಿಮೀ), ಪೂಂಚ್ (48 ಮಿಮೀ) ಮತ್ತು ರಾಂಬನ್ (47.5 ಮಿಮೀ) ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.

ಸ್ಥಳೀಯ ಪೊಲೀಸರು, ಸಂಚಾರ ಸಿಬ್ಬಂದಿ ಮತ್ತು ಸ್ವಯಂಸೇವಕರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ತಾವಿ ನದಿಯಿಂದ ಒಂಬತ್ತು ಜನರಲ್ಲಿ ರಕ್ಷಿಸಿದ್ದು, ಅದರಲ್ಲಿ ಕುಮಾರ್ ಕೂಡ ಒಬ್ಬರು ಎಂದು ಅಧಿಕಾರಿಗಳು ತಿಳಿಸಿದ್ದಾರೆ

(ಏಜೆನ್ಸೀಸ್)

ಜೂನ್ 27 ರವರೆಗೆ ಜಮ್ಮು ವಿಭಾಗದಾದ್ಯಂತ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯೊಂದಿಗೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಸಮಯದಲ್ಲಿ ನದಿಗಳು ಮತ್ತು ತಗ್ಗು ಪ್ರದೇಶಗಳಿಂದ ದೂರವಿರುವಂತೆ ಅಧಿಕಾರಿಗಳು ನಿವಾಸಿಗಳಿಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net