

ಇಡೀ ಮಂಗಳೂರಿಗೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದ್ದು, ನೀರನ್ನೇ ಅವಲಂಭಿಸಿರುವ ಉದ್ಯಮವಲಯಕ್ಕೆ ನೀರಿನ ಬರೆ ಎದುರಾಗಿದೆ.
ಮಂಗಳೂರಿಗೆ ಪೂರೈಕೆಯಾಗುವ ನೀರಿನಲ್ಲಿ ಪ್ರಸ್ತುತ ಒಟ್ಟು 18 ಎಂಜಿಡಿ ನೀರು ಕೈಗಾರಿಕೆಗಳಿಗೆ ರವಾನೆಯಾಗುತ್ತಿದೆ. ತುಂಬೆ ಡ್ಯಾಂನಿಂದ ಎಂಸಿಎಫ್ಗೆ 2 ಎಂಜಿಡಿ, ಎನ್ ಎಂಪಿಟಿಎ 0.5 ಎಂಜಿಡಿ, ಇತರ ಕೈಗಾರಿಕೆಗಳಿಗೆ 1 ಎಂಜಿಡಿ ನೀರು ಪೂರೈಕೆಯಾಗುತ್ತಿದೆ. ಎಎಂಆರ್ನಿಂದ ಎಂಆರ್ಪಿಎಲ್ಗೆ 6 ಎಂಜಿಡಿ ಹಾಗೂ ಎಸ್ಇಝಡ್ಗೆ 8 ಎಂಜಿಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ಕೊರತೆಯಾದರೆ ಅನಿವಾರ್ಯವಾಗಿ ಎಎಂಆರ್ ನೀರನ್ನು ಕುಡಿಯುವ ನೀರಿನ ಬಳಕೆಗೆ ಬಳಸಿಕೊಳ್ಳಬೇಕಾಗುತ್ತದೆ. ಈಸಂದರ್ಭ ಕೈಗಾರಿಕೆಗಳು, ಕಾಮಗಾರಿಗಳಿಗೆ ನೀರು ಸ್ಥಗಿತಗೊಳಿಸುವುದು ಅನಿವಾರ್ಯ. ತುಂಬೆ, ಎಎಂಆರ್ ಡ್ಯಾಂಗಳಲ್ಲಿ ನೀರಿನ ಕುಸಿತವಾಗುತ್ತಿರುವುದರಿಂದ ಕೈಗಾರಿಕೆಗೆ ನೀರು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳ್ಳುವ ಭಯ ಆವರಿಸಿದೆ. ಈಮಧ್ಯೆ ನೀರನ್ನೇ ಆಶ್ರಯಿಸಿರುವ ಮಂಗಳೂರಿನ ಸಾಂಪ್ರದಾಯಿಕ ಉದ್ಯಮಗಳಾದ ಮೀನುಗಾರಿಕೆ, ಗೃಹಕೈಗಾರಿಕೆ, ಐಸ್್ಲ್ಯಾಂಟ್ ಉತ್ಪಾದನೆಗಳಿಗೆ ಈಗಲೇ ನೀರಿನ ಬರೆ ಎದುರಾಗಿದೆ.
*ಟ್ಯಾಂಕರ್ ನೀರಿಗೆ ಬೇಡಿಕೆ
ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್ಗಳು ಹಾಗೂ ಇದಕ್ಕೆ ಪೂರಕವಾಗಿ ಕೆಲಸ ಮಾಡುವ ಮಂಜುಗಡ್ಡೆ ಟಕಗಳು ನೀರಿನ ಲಭ್ಯತೆಯ ನಿರೀಕ್ಷೆಯಲ್ಲಿದ್ದು, ಸದ್ಯ ಟ್ಯಾಂಕರ್ಗೆ ಮೊರೆ ಇಡಲಾಗುತ್ತಿದೆ. ಮೀನುಗಾರಿಕಾ ಬಂದರು ವ್ಯಾಪ್ತಿಗೆ ಪಾಲಿಕೆ ವತಿಯಿಂದ ನೀರು ಈ ಹಿಂದೆ ನಿರಂತರವಾಗಿ ಬರುತ್ತಿತ್ತು. ಪ್ರತಿ ಡೀಸೆಲ್ ಬಂಕ್ನಲ್ಲಿ ಬೋಟ್ಗಳಿಗೆ ಬೇಕಾಗುವ ನೀರು ಕೂಡ ಸಿಗುತ್ತಿತ್ತು. ಆದರೆ ಇತ್ತೀಚೆಗೆ ಇದೂ ಸ್ಥಗಿತವಾಗಿ, ಟ್ಯಾಂಕರ್ ಮೂಲಕವೇ ನೀರಿಗೆ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಟ್ಯಾಂಕರ್ ನೀರಿನ ಬೆಲೆಯಲ್ಲಿಯೂ ಏರಿಕೆ ಆಗುತ್ತಿರುವ ಕಾರಣದಿಂದ ಇದು ಮೀನುಗಾರರಿಗೆ ಹೊರೆಯಾಗುತ್ತಿದೆ.
*ಐಸ್್ಲ್ಯಾಂಟ್ಗಳಿಂದ ಸ್ಥಗಿತ ಸಾಧ್ಯತೆ
ನಗರದ ಬಹುತೇಕ ತೆರೆದ ಬಾವಿಗಳು ಬತ್ತಿರುವುದರಿಂದ ಮಂಜುಗಡ್ಡೆ ಟಕಗಳು (ಐಸ್ ಪ್ಲಾಂಟ್) ನೀರಿಗಾಗಿ ಹಣ ಕೊಡುವ ಪರಿಸ್ಥಿತಿಯಲ್ಲಿದೆ. ಮಂಗಳೂರಿನಲ್ಲಿ 65 ಮಂಜುಗಡ್ಡೆ ಟಕಗಳಿವೆ. ಪಾಲಿಕೆ ನೀರು ನಿರಂತರವಾಗಿ ಸಿಗದ ಕಾರಣದಿಂದ ಟ್ಯಾಂಕರ್ ನೀರನ್ನೇ ಅವಲಂಬಿಸಿರುವ ಟಕಗಳ ಮಾಲೀಕರು ಈಗ ನಷ್ಟದ ಭೀತಿಯಿಂದ ತಾತ್ಕಾಲಿಕವಾಗಿ ಟಕ ಬಂದ್ ಮಾಡುವ ಯೋಚನೆಯನ್ನೂ ಮಾಡಿದ್ದಾರೆ.
ಟ್ಯಾಂಕರ್ ನೀರಿನ ದರ 1200 ರೂ.ಗೆ ಏರಿಕೆ
ಅಕ್ಟೋಬರ್ನಲ್ಲಿ ಮೀನಿನ ಬರ ಎದುರಾಗಿತ್ತು. ಶೇ.70ರಷ್ಟು ಬೊಟ್ಗಳು ಕಡಲಿಗಿಳಿಯದೆ ಲಂಗರು ಹಾಕಿದ್ದವು. ಆಗ ಮಂಜುಗಡ್ಡೆ ಟಕಗಳಿಗೆ ಕೆಲಸ ಇರಲಿಲ್ಲ. ಈಗ ಬೋಟ್ಗಳು ಮೀನುಗಾರಿಕೆಗೆ ತೆರಳುತ್ತಿವೆ. ಆಳ ಸಮುದ್ರ ಮೀನುಗಾರಿಕೆಗೆ ಹೋಗುವಾಗ ಬೋಟ್ಗಳು 10&15 ಟನ್ನಷ್ಟು ಮಂಜುಗಡ್ಡೆ ಕೊಂಡೊಯ್ಯುತ್ತವೆ. ವಿದ್ಯುತ್ ದರ ಏರಿಕೆ, ಕಾರ್ಮಿಕರ ಸಮಸ್ಯೆ ಎದುರಿಸಿದ್ದ ಮಂಜುಗಡ್ಡೆ ಟಕಗಳು ಈಗ ನೀರಿನ ಸಮಸ್ಯೆ ಎದುರಿಸುತ್ತಿವೆ. ಮಂಜುಗಡ್ಡೆಯ ಒಂದು ಟಕಕ್ಕೆ ದಿನಕ್ಕೆ 5ರಿಂದ 8 ಟ್ಯಾಂಕರ್ ನೀರು ಬೇಕಾಗುತ್ತದೆ. 1 ಟ್ಯಾಂಕರ್ ನೀರಿನ ದರ 1200 ರೂ.ಗಳಿಂದ 1300ರೂ.ವರೆಗೆ ಇದೆ. ಅಂದರೆ ದಿನಕ್ಕೆ 6 ಸಾವಿರ ರೂ.ಗಳಿಂದ 8 ಸಾವಿರ ರೂ. ನೀರಿಗಾಗಿ ಖರ್ಚು ಮಾಡಬೇಕಾಗುತ್ತಿದೆ. ಇದು ಮಂಜುಗಡ್ಡೆ ನಿರ್ವಹಿಸುವವರಿಗೆ ಹೊರೆಯಾಗುತ್ತಿದೆ .
ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರಿಕಾ ಬೋಟ್ಗಳಿಗೆ 6 ಸಾವಿರ ಲೀ ನೀರು ಬೇಕು. ಮೊದಲು ಪಾಲಿಕೆ ನೀರು ಸಿಗುತ್ತಿದ್ದರೂ ಈಗ ಅದು ಸಮರ್ಪಕವಾಗಿ ಸಿಗುತ್ತಿಲ್ಲ. ಹೀಗಾಗಿ ಟ್ಯಾಂಕರ್ ಮೂಲಕವೇ ನೀರು ಪಡೆಯಲಾಗುತ್ತಿದೆ. ಇದು ಮೀನುಗಾರರಿಗೆ ದೊಡ್ಡ ಹೊರೆ.
> ಮೋಹನ್ ಬೆಂಗ್ರೆ, ಮೀನುಗಾರ ಮುಖಂಡ