

Water | ಮೊದಲು ಮಹಾನಗರಗಳಲ್ಲಿ ಅತೀ ಹೆಚ್ಚು ಬಳಕೆಯಾಗ್ತಿದ್ದ ಪ್ಲಾಸ್ಟಿಕ್ ನೀರಿನ ಕ್ಯಾನ್ಗಳು ಇದೀಗ ಹಳ್ಳಿ-ಹಳ್ಳಿಗಳಲ್ಲೂ ವ್ಯಾಪಿಸಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕ್ಯಾನ್ ನೀರಿನ ಬಳಕೆ ಹೆಚ್ಚಾಗ್ತಾ ಇದೆ. ಶುದ್ಧೀಕರಿಸಿದ ನೀರನ್ನು ಮನೆಗಳಲ್ಲಿ ಬಳಕೆ ಮಾಡುತ್ತಿದ್ದರೂ ಸಹ ನೀರಿನ ಕ್ಯಾನ್ಗಳ ಬಳಕೆ ಮಾಡುವುದು ಹೇಗೆ ಎಂಬುದನ್ನು ನಾವು ತಿಳಿಯಬೇಕಿದೆ. ಏಕೆಂದರೆ ಹಲವು ಬಾರಿ ಮರುಬಳಕೆ ಮಾಡಲಾದ ಡಬ್ಬಗಳನ್ನು ನಿರ್ದಿಷ್ಟ ಅವಧಿಗಿಂತ ಹೆಚ್ಚು ಕಾಲ ಬಳಸಬಾರದು ಎಂದು ವರದಿಯಲ್ಲಿ ತಿಳಿದು ಬಂದಿದೆ.
ಕುಡಿಯುವ ನೀರಿನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ.
ನೇರ ಸೂರ್ಯನ ಬೆಳಕಿನಲ್ಲಿ ಇರಿಸಲಾದ ಡಬ್ಬಿಗಳನ್ನು ಮಾರಾಟ ಮಾಡಬಾರದು.
ಕೊಳಕು ಅಥವಾ ಗೀಚಿದ ಡಬ್ಬಿಗಳನ್ನು ಸಾರ್ವಜನಿಕರಿಗೆ ನೀಡಬಾರದು.
ನೀರಿನ ಕ್ಯಾನ್ಗಳನ್ನು 50 ಕ್ಕಿಂತ ಹೆಚ್ಚು ಬಾರಿ ಬಳಸಬಾರದು.
ಸಾಮಾನ್ಯವಾಗಿ ನಾವು ನಿತ್ಯ ಮುಟ್ಟುವ ವಸ್ತುಗಳಾದ ಬಾಗಿಲುಗಳು, ಕೈಚೀಲಗಳು, ಟೇಬಲ್ಗಳು ಇನ್ನಿತರ ವಸ್ತುಗಳನ್ನು ಮುಟ್ಟಿದ್ದೇವೆ ಎಂಬುದನ್ನು ಗಮನಿಸುವುದಿಲ್ಲ. ನಮ್ಮ ಕೈಗಳನ್ನು ಶುಚಿಗೊಳಿಸದೆಯೇ ಬಾಟಲಿಯ ಮುಚ್ಚಳವನ್ನು ತೆಗೆಯುತ್ತೇವೆ. ಆದ್ದರಿಂದ ಮೊದಲು ನಮ್ಮ ಕೈಗಳನ್ನು ಶುಚಿಗೊಳಿಸಿ, ನಂತರ ಬಾಟಲಿಗಳ ಮುಚಳವನ್ನು ತೆರೆಯಬೇಕು. ಬಾಟಲಿಗಳನ್ನು ಒಯ್ಯುವ ಬ್ಯಾಗ್ಗಳು, ಲಾಕರ್ಗಳು, ಕೆಲಸದ ಮೇಜುಗಳು ಮತ್ತು ಅಡುಗೆ ಮನೆಯ ಸಿಂಕ್ಗಳಲ್ಲಿಯೂ ಬ್ಯಾಕ್ಟೀರಿಯಾ ಇರಬಹುದು. ಬಾಟಲಿಯನ್ನು ಆಗಾಗ್ಗೆ ಸ್ವಚ್ಛಗೊಳಿಸದಿದ್ದರೆ ಈ ಸೂಕ್ಷ್ಮಜೀವಿಗಳು ಬಾಟಲಿ ಒಳಗೆ ಪ್ರವೇಶಿಸಿ ನೀರಿನ ಮೂಲಕ ದೇಹದೊಳಗೆ ಪ್ರವೇಶ ಮಾಡಬಹುದು.
ಈ ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯುವುದು ಬಹಳ ಮುಖ್ಯವಾಗಿದೆ. ಆದರೆ ನೀರು ಕಲುಷಿತವಾಗಿದ್ದರೆ ಅದರಿಂದ ನೀವು ಅನಾರೋಗ್ಯಕ್ಕೆ ತುತ್ತಾಗುತ್ತೀರಿ. ಮನೆ, ಕಚೇರಿ, ಶಾಲೆ ಅಥವಾ ಪ್ರಯಾಣದ ಸಮಯದಲ್ಲಿ ನೀವು ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋದರೆ, ಪ್ರತಿ ಮೂರು ದಿನಗಳಿಗೊಮ್ಮೆ ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಅವಶ್ಯಕವಾಗಿದೆ. ಹೀಗೆ ಮಾಡದಿದ್ದರೆ, ಬಾಟಲಿಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ನಮ್ಮನ್ನು ಸುಲಭವಾಗಿ ಅನಾರೋಗ್ಯಕ್ಕೆ ಒಳಪಡಿಸುತ್ತವೆ. ನಾವು ಎಲ್ಲೆಡೆ ಬ್ಯಾಕ್ಟೀರಿಯಾಗಳಿಂದ ಸುತ್ತುವರೆದಿದ್ದೇವೆ, ಈ ಸೂಕ್ಷ್ಮ ಜೀವಿಗಳು ನಮ್ಮ ನೀರಿನ ಬಾಟಲಿಗಳನ್ನು ವಿಭಿನ್ನ ರೀತಿಯಲ್ಲಿ ಪ್ರವೇಶಿಸಬಹುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
(ಏಜೆನ್ಸೀಸ್)
ಕೆಲವು ನೀರಿನ ಬಾಟಲಿಗಳನ್ನು ಸರಿಯಾಗಿ ಸ್ವಚ್ಛಗೊಳಿಸಲಾಗುವುದಿಲ್ಲ. ಅದಕ್ಕೆ ಕಾರಣ ಅದರ ಆಕಾರ. ಇವುಗಳನ್ನು ಸುಲಭವಾಗಿ ತೊಳೆಯಲು ಆಗುವುದಿಲ್ಲ ಮತ್ತು ಬಾಟಲಿನ ಒಳಗೆ ಏನೂ ಕೂಡ ಸುಲಭವಾಗಿ ಕಾಣಿಸುವುದಿಲ್ಲ. ಹಾಗಾಗಿ ಈ ಕೆಲ ಟಿಪ್ಸ್ಗಳನ್ನು ಫಾಲೋ ಮಾಡುವ ಮೂಲಕ ನೀರಿನ ಬಾಟಲಿಯನ್ನು ಸ್ವಚ್ಛಗೊಳಿಸಬಹುದು. ನೀರಿನ ಬಾಟಲಿಯನ್ನು ಸ್ವಚ್ಛಗೊಳಿಸಲು ಅದಕ್ಕೆ ಸ್ವಲ್ಪ ಬ್ಲೀಚ್ ಮತ್ತು ತಣ್ಣೀರು ಸೇರಿಸಿ. ಈಗ ಅದರ ಮುಚ್ಚಳವನ್ನು ಮುಚ್ಚಿ ಚೆನ್ನಾಗಿ ಅಲ್ಲಾಡಿಸಿ. ರಾತ್ರಿಯಿಡೀ ಹೀಗೆಯೇ ಬಿಟ್ಟು, ಬೆಳಗ್ಗೆ ಎದ್ದಾಕ್ಷಣ ಬ್ರಶ್ನಿಂದ ಉಜ್ಜಿ ಸ್ವಚ್ಛವಾಗಿ ತೊಳೆಯಬೇಕು. ಆದಷ್ಟು ಪ್ಲಾಸ್ಟಿಕ್ ಬಾಟಲಿಗಳಿಂದ ದೂರ ಇರುವುದು ಉತ್ತಮ.