More

    ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆಯದೇ? ಆರೋಗ್ಯ ತಜ್ಞರು ಹೇಳುವುದೇನು?

    ಕೆಲವರು ಮಲಗುವ ಮುನ್ನ ನೀರು ಕುಡಿಯಬೇಕು ಎಂದು ಹೇಳಿದರೆ, ಇನ್ನು ಕೆಲವರು ನೀರು ಕುಡಿಯಲೇ ಬಾರದು ಎನ್ನುತ್ತಾರೆ. ಹಾಗಾದರೆ ಈ ಎರಡರಲ್ಲಿ ಯಾವುದು ಉತ್ತಮ ಎಂದು ನಾವೀಗ ತಿಳಿದುಕೊಳ್ಳೋಣ.

    ಕೆಲವರಿಗೆ ಹಗಲಿಗಿಂತ ರಾತ್ರಿಯ ವೇಳೆ ಬಾಯಾರಿಕೆ ಹೆಚ್ಚು. ಹೀಗಾಗಿ ಕೆಲವರು ಮಲಗುವ ಮುನ್ನ ನೀರು ಕುಡಿಯಲು ಬಯಸುತ್ತಾರೆ. ಇನ್ನು ಕೆಲವರು ನೀರು ಕುಡಿಯಲು ಬಯಸುವುದಿಲ್ಲ. ಪ್ರತಿಯೊಬ್ಬರಲ್ಲೂ ಅವರದೇಯಾದ ಅಭ್ಯಾಸಗಳು ಇರುತ್ತದೆ. ಅದೇ ರೀತಿ ಇದು ಕೂಡ. ಆದರೆ, ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆಯದೇ? ಈ ಪ್ರಶ್ನೆಗೆ ಉತ್ತರಗಳು ಮಾತ್ರ ಕೊಂಚ ವಿಭಿನ್ನವಾಗಿವೆ. ಏಕೆಂದರೆ, ನೀರು ಕುಡಿಯುವುದರಿಂದ ಕೆಲವು ಅನುಕೂಲಗಳ ಜೊತೆಗೆ ಅನಾನುಕೂಲಗಳೂ ಇವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.

    ಅನುಕೂಲಗಳು
    ಇಡೀ ದಿನ ನಾವು ಸಾಕಷ್ಟು ಕೆಲಸ ಮಾಡಿರುತ್ತೇವೆ. ಹೀಗಾಗಿ ನಮ್ಮ ದೇಹದ ಸ್ನಾಯುಗಳು ಸಾಕಷ್ಟು ಶ್ರಮಪಟ್ಟಿರುತ್ತವೆ. ಇದರಿಂದ ದೇಹದಲ್ಲಿ ಸಾಕಷ್ಟು ನೀರಿನ ಅಂಶವನ್ನು ಕಳೆದುಕೊಂಡಿರುತ್ತೇವೆ. ಅಂದರೆ, ನೀರಿನ ಪ್ರಮಾಣ ಕುಂಠಿತಗೊಂಡಿರುತ್ತದೆ. ಅದೇ ರೀತಿ ನಿದ್ರೆಯ ಕೊರತೆಯಿಂದಾಗಿಯೂ ದೇಹವು ಅಸ್ವಸ್ಥತೆಯನ್ನು ಅನುಭವಿಸುತ್ತದೆ. ಒಣ ಗಂಟಲು ಮತ್ತು ಗೊರಕೆಯ ಸಾಧ್ಯತೆಗಳಿವೆ. ಇದೆಲ್ಲವನ್ನು ಹೋಗಲಾಡಿಸಲು ನಮ್ಮ ದೇಹ ಹೈಡ್ರೇಟ್​ ಆಗಿರಲೇಬೇಕು. ಹೀಗಾಗಿ ಮಲಗುವ ಮುನ್ನ ನೀರು ಕುಡಿಯುವುದು ಉತ್ತಮ. ಹೀಗೆ ಮಾಡುವುದರಿಂದ ಒತ್ತಡಕ್ಕೊಳಗಾದ ಸ್ನಾಯುಗಳು ವಿಶ್ರಾಂಗಿಗೆ ಜಾರುತ್ತವೆ ಮತ್ತು ಬಲಗೊಳ್ಳುತ್ತವೆ. ಸರಿಯಾಗಿ ನಿದ್ರೆ ಮಾಡುವುದರಿಂದ ಮಾರನೇ ದಿನ ತುಂಬಾ ಅಲರ್ಟ್​ ಆಗಿರುತ್ತೀರಿ. ಮಲಗುವ ಮುನ್ನ ನೀರು ಕುಡಿಯುವುರಿಂದ ದೇಹದಲ್ಲಿ ಸಂಗ್ರಹವಾದ ವಿಷವನ್ನು ಸಹ ಹೊರಹಾಕುತ್ತದೆ. ಇದು ನಮ್ಮ ತ್ವಚೆಯನ್ನು ನಯವಾಗಿ ಮತ್ತು ಮೃದುವಾಗಿ ಮಾಡುತ್ತದೆ. ನಾವು ನಿದ್ರಿಸಿದ ನಂತರ ನಮ್ಮ ದೇಹದ ಉಷ್ಣತೆಯು ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಹೀಗಾಗಿ ಮಲಗುವ ಮುನ್ನ ನೀರು ಕುಡಿಯುವುದು ಈ ಸಮಸ್ಯೆಗೆ ಪರಿಹಾರವಾಗಿದೆ. ದೇಹದ ಉಷ್ಣತೆಯು ಸಮತೋಲಿತವಾಗಿರುತ್ತದೆ.

    ಇದನ್ನೂ ಓದಿ: ಅಪಘಾತದಲ್ಲಿ ಎರಡೂ ಕಾಲು ಕಳೆದುಕೊಂಡಿದ್ದ ರಾಜ್ಯದ ಗೋಪಿಚಂದ್ ಪ್ಯಾರಾ ಏಷ್ಯನ್ ಗೇಮ್ಸ್‌ಗೆ ಆಯ್ಕೆ

    ಅನಾನುಕೂಲತೆಗಳೇನು?
    ಮಲಗುವ ಮುನ್ನ ಹೆಚ್ಚು ನೀರು ಕುಡಿದರೆ ರಾತ್ರಿಯಿಡೀ ಬೇಕೆಂದಾಗ ಮೂತ್ರ ವಿಸರ್ಜನೆಗೆ ಎದ್ದೇಳಬೇಕಾಗುತ್ತದೆ. ಇದು ಎಲ್ಲರೂ ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದ ನಿದ್ರೆಗೆ ತುಂಬಾ ತೊಂದರೆಯಾಗುತ್ತದೆ. ಅದರಲ್ಲೂ ಶಾಂತ ನಿದ್ರೆ ಕಳೆದುಹೋಗುತ್ತದೆ. ರಾತ್ರಿಯಲ್ಲಿ ಹೆಚ್ಚು ನೀರು ಕುಡಿಯುವುದರಿಂದ ಎದೆಯುರಿ ಮತ್ತು ಉಸಿರಾಟದ ತೊಂದರೆಯೂ ಸಹ ಉಂಟಾಗುತ್ತದೆ. ನಾವು ರಾತ್ರಿಯಲ್ಲಿ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಿದರೆ, ಅವು ಉಸಿರಾಟದ ಪ್ರದೇಶಕ್ಕೆ ಪ್ರವೇಶಿಸಬಹುದು ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು.

    ಹೇಗೆ ನೀರು ಕುಡಿಯಬೇಕು?
    ಮಲಗುವ ಮುನ್ನ ಸರಿಯಾಗಿ ಅರ್ಧ ಗಂಟೆ ಅಥವಾ ಕನಿಷ್ಠ ಒಂದು ಗಂಟೆಗೂ ಮೊದಲೇ ನೀರು ಕುಡಿಯಿರಿ. (ಏಜೆನ್ಸೀಸ್​)

    ಮತ್ತೆ ಹೋರಾಟಕ್ಕೆ ಮರಳುತ್ತೇವೆ: ಸುಪ್ರೀಂಕೋರ್ಟ್​ ಮುಂದೆಯೇ ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗ ಜೋಡಿ!

    ಇಂದಿರಾ ಕ್ಯಾಂಟೀನ್​ಗೂ ಕಮಿಷನ್ ಕಾಟ: ಬಿಲ್ ಪಾವತಿಗೆ ಹಣದ ಡಿಮ್ಯಾಂಡ್; ಟೆಂಡರ್ ರದ್ದತಿಗೆ ಡಿಸಿಗೆ ಪತ್ರ ಬರೆದ ಗುತ್ತಿಗೆದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts