More

    ಅಪಘಾತದಲ್ಲಿ ಎರಡೂ ಕಾಲು ಕಳೆದುಕೊಂಡಿದ್ದ ರಾಜ್ಯದ ಗೋಪಿಚಂದ್ ಪ್ಯಾರಾ ಏಷ್ಯನ್ ಗೇಮ್ಸ್‌ಗೆ ಆಯ್ಕೆ

    ಬೆಂಗಳೂರು: ಅ. 22ರಿಂದ ಚೀನಾದ ಹಾಂಗ್‌ರೆೌನಲ್ಲಿ ನಡೆಯಲಿರುವ 4ನೇ ಆವೃತ್ತಿಯ ಪ್ಯಾರಾ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಿರುವ ಭಾರತದ 14 ಸದಸ್ಯರ ಈಜು ತಂಡದಲ್ಲಿ ರಾಜ್ಯದ ಎಲ್. ಗೋಪಿಚಂದ್ ಸ್ಥಾನ ಪಡೆದಿದ್ದಾರೆ. 2016ರಲ್ಲಿ ಈಜು ಅಭ್ಯಾಸ ಆರಂಭಿಸಿದ ಗೋಪಿಚಂದ್ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ದರೋಜಿಯ ರಾಜಶೇಖರ್, ವಸಂತ ದಂಪತಿ ಪುತ್ರ. ಎರಡನೇ ತರಗತಿಯಲ್ಲಿದ್ದಾಗಲೇ ಅಪಘಾತದಲ್ಲಿ ಎರಡೂ ಕಾಲು ಕಳೆದುಕೊಂಡಿದ್ದ ಗೋಪಿಚಂದ್ ಪ್ರಸ್ತುತ 9ನೇ ತರಗತಿಯಲ್ಲಿ ವ್ಯಾಸಂಗ ನಡೆಸುತ್ತಿದ್ದಾರೆ. 17 ವರ್ಷದ ಅವರು, ಹಲವು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇದುವರೆಗೆ 25 ಚಿನ್ನ, 8 ಬೆಳ್ಳಿ ಪದಕ ಜಯಿಸಿದ್ದಾರೆ. 2021ರ ಬಹರೇನ್ ಏಷ್ಯನ್ ಯೂತ್ ಪ್ಯಾರಾ ಗೇಮ್ಸ್ ಹಾಗೂ 2022ರಲ್ಲಿ ಪ್ಯಾರಾ ಸ್ವಿಮ್ಮಿಂಗ್ ಗೇಮ್ಸ್‌ನಲ್ಲೂ ಭಾಗವಹಿಸಿದ್ದರು.

    ‘ಗೋಪಿಚಂದ್ ಪ್ಯಾರಾ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಈ ಸಾಧನೆ ಮಾಡಿದ ಭಾರತದ ಅತಿ ಕಿರಿಯ ಈಜುಪಟು ಎನ್ನವುದಕ್ಕೆ ಹೆಮ್ಮೆಯಿದೆ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜುನ ಪ್ರಶಸ್ತಿ ವಿಜೇತ ಶರತ್ ಗಾಯಕ್ವಾಡ್ ಬಳಿ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ಯಾರಾಲಿಂಪಿಕ್ಸ್‌ಗೂ ಅರ್ಹತೆ ಗಳಿಸುವ ಮೂಲಕ ಇನ್ನೂ ಉನ್ನತ ಸಾಧನೆ ಮಾಡುವಂತಾಗಲಿ’ ಎಂದು ಗೋಪಿಚಂದ್ ಬಾಲ್ಯದ ಕೋಚ್ ರಜಿನಿ ಲಕ್ಕ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts