VIDEO | ಕರ್ನಾಟಕಕ್ಕೆ ಇನ್ನೂ ಎರಡು ಆಕ್ಸಿಜನ್ ಎಕ್ಸ್​ಪ್ರೆಸ್​

express
Published on

ಬೆಂಗಳೂರು : ಕರ್ನಾಟಕಕ್ಕೆ ಎರಡನೇ ಆಕ್ಸಿಜನ್ ಎಕ್ಸ್​​​ಪ್ರೆಸ್ ರೈಲು ಇಂದು ತಲುಪಿದೆ. ಈ ರೈಲು, ಒಡಿಶಾದ ಕಳಿಂಗನಗರದಿಂದ 120 ಎಂಟಿ ಲಿಖ್ವಿಡ್​ ಮೆಡಿಕಲ್​ ಆಕ್ಸಿಜನ್ ಹೊತ್ತು ತಂದಿದ್ದು, ಇಂದು ಬೆಳಗಿನ ಜಾವ ಬೆಂಗಳೂರಿಗೆ ತಲುಪಿದೆ. ಈ ಆಕ್ಸಿಜನ್​ಅನ್ನು ರಾಜ್ಯದ ವಿವಿಧೆಡೆ ಕರೊನಾ ರೋಗಿಗಳ ಚಿಕಿತ್ಸೆಗೆ ಬಳಸಲಾಗುವುದು.

ಜಾರ್ಖಂಡ್​​ನ ಟಾಟಾನಗರದಿಂದ ಇನ್ನೂ 120 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಹೊರಟಿರುವ ಕರ್ನಾಟಕದ ಮೂರನೇ ಆಕ್ಸಿಜನ್ ರೈಲು ಇಂದು ಸಾಯಂಕಾಲ ಬೆಂಗಳೂರು ತಲುಪಲಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net