ತ್ರಾಸಿಯಲ್ಲಿ ತ್ಯಾಜ್ಯ ತೆರವು, ಬೇಲಿ ಅಳವಡಿಕೆ

gan-2
Published on

ಕುಂದಾಪುರ: ರಸ್ತೆ ಬದಿ ಎಲ್ಲೆಂದರಲ್ಲಿ ಬಿದ್ದಿದ್ದ ತ್ಯಾಜ್ಯ ರಾಶಿಯನ್ನು ತೆರವು ಮಾಡಿ ಸ್ವಚ್ಛಗೊಳಿಸಿರುವ ತ್ರಾಸಿ ಗ್ರಾಮ ಪಂಚಾಯಿತಿ, ತ್ಯಾಜ್ಯ ಎಸೆಯುತ್ತಿದ್ದ ಸ್ಥಳದಲ್ಲಿ ಬೇಲಿ ಅಳವಡಿಸಿದೆ.

ತ್ರಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಾಥ ಟ್ರೇಡರ್ಸ್‌ನಿಂದ ಯುವಕ ಮಂಡಲ ಸಂಪರ್ಕ ರಸ್ತೆ ಬದಿಯಲ್ಲಿ ಸಾರ್ವಜನಿಕರು ತ್ಯಾಜ್ಯ ಎಸೆಯುತ್ತಿದ್ದು, ಡಂಪಿಂಗ್ ಯಾರ್ಡ್‌ನಂತೆ ಪರಿವರ್ತನೆಯಾಗಿತ್ತು. ಇಲ್ಲಿ ಯಾರೂ ಓಡಾಡದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಇದನ್ನು ಗಮನಿಸಿದ ತ್ರಾಸಿ ಗ್ರಾಪಂನ ಸಾಹಸ್ ಎನ್‌ಜಿಒ ಸಂಸ್ಥೆಯೊಂದಿಗೆ ಸೇರಿಕೊಂಡು ರಾಶಿ ಬಿದ್ದ ತ್ಯಾಜ್ಯವನ್ನು ತೆರವು ಮಾಡಿ ಸ್ವಚ್ಛಗೊಳಿಸಿದರು. ಈ ಸ್ಥಳದಲ್ಲಿ ಮತ್ತೆ ಸಾರ್ವಜನಿಕರು ತ್ಯಾಜ್ಯ ಎಸೆಯದಂತೆ ಬೇಲಿ ಅಳವಡಿಸಲಾಗಿದೆ. ತ್ಯಾಜ್ಯ ಎಸೆಯುವುದು ಕಂಡುಬಂದರೆ 5 ಸಾವಿರ ರೂ. ದಂಡ ವಿಧಿಸಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಗ್ರಾಪಂ ನೀಡಿದೆ.

ಅನೇಕ ದಿನಗಳಿಂದ ಯುವಕ ಮಂಡಲ ಸಂಪರ್ಕ ರಸ್ತೆಯದ್ದಕ್ಕೂ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದು ಕಂಡು ಬಂದಲ್ಲಿ ದಂಡ, ಕಾನೂನು ಕ್ರಮ ಜರುಗಿಸಲಾಗುವುದು. ಕೆಲವೊಂದು ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸ್ವಚ್ಛ ತ್ರಾಸಿ ನಿರ್ಮಾಣ ನಮ್ಮ ಗುರಿ. -ಮಿಥುನ್ ಎಂ.ಡಿ. ಬಿಜೂರು, ತ್ರಾಸಿ ಗ್ರಾ.ಪಂ. ಅಧ್ಯಕ್ಷ https://www.vijayavani.net/service-road-work-begins-in-brahmavar https://www.vijayavani.net/development-of-abandoned-lakes

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net