ಶೌಚಾಲಯದಲ್ಲಿ ವಿಡಿಯೋ ಪ್ರಕರಣ ಎನ್​ಐಎ ತನಿಖೆಗೆ ಆಗ್ರಹ

udp-28-bjp 3
Published on

ಉಡುಪಿ: ನಗರದ ಖಾಸಗಿ ನರ್ಸಿಂಗ್​ ಕಾಲೇಜಿನ ಶೌಚಾಲಯದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು, ಹಿಂದು ವಿದ್ಯಾರ್ಥಿನಿಯ ವಿಡಿಯೋ ಮಾಡಿರುವ ಪ್ರಕರಣವನ್ನು ಎನ್​.ಐ.ಎ ತನಿಖೆಗೆ ಒಪ್ಪಿಸಬೇಕು ಎಂದು ಬೈಂದೂರು ಶಾಸಕ ಗುರುರಾಜ್​ ಗಂಟಿಹೊಳೆ ಆಗ್ರಹಿಸಿದ್ದಾರೆ.

ಶುಕ್ರವಾರ ಜಿಲ್ಲಾ ಬಿಜೆಪಿ ವತಿಯಿಂದ ಎಸ್ಪಿ ಕಚೇರಿ ಮುಂಭಾಗ ನಡೆದ ಬೃಹತ್​ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಹಿಂದೂ ಸಂಘಟನೆಗಳು 25 ವರ್ಷಗಳಿಂದ ಜಿಹಾದಿ ನೆಟ್​ ವರ್ಕ್​ ಬಗ್ಗೆ ಹೇಳಿಕೆಗಳನ್ನು ನೀಡುತ್ತಿವೆ. ಅದರೆ ನಮ್ಮ ಮಾತನ್ನು ರ್ನಿಲಕ್ಷ$್ಯ ಮಾಡಲಾಗುತ್ತಿತ್ತು. ಪ್ರಸ್ತುತ ಎನ್​.ಐ.ಎ ತನಿಖೆಯಲ್ಲಿ ಅನೇಕ ಅಂಶಗಳು ಬಯಲಾಗಿದೆ. ಗಂಭೀರ ವಿಷಯವನ್ನು ರ್ನಿಲಕ್ಷ$್ಯ ಮಾಡುತ್ತಿರುವ ಕಾಂಗ್ರೆಸ್​ ನಾಯಕರ ಮಕ್ಕಳನ್ನು ಮುಂದಿನ ದಿನಗಳಲ್ಲಿ ರಕ್ಷಣೆ ಮಾಡಲು ನಾವೇ ಬೇಕು. ಹಿಂದುಗಳ ಮುಂದಿನ ಜನಾಂಗ ಮತ್ತು ಹೆಣ್ಮಕ್ಕಳು ಸಮಸ್ಯೆ ಅದಾಗ ಕೊನೆಗೆ ರಕ್ಷಣೆ ಪಡೆದುಕೊಳ್ಳುವುದು ಬಿಜೆಪಿ ಕಚೇರಿಯಲ್ಲಿ ಹಾಗೂ ಸಂಪರಿವಾರದ ಕಚೇರಿಗಳಲ್ಲಿ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಕೊಲ್ಲೂರಿಗೆ ಅಗಮಿಸುವ ಕೇರಳದ ಕಾಂಗ್ರೆಸ್​ ಮತ್ತು ಕಮ್ಯುನಿಷ್ಟ್​ ಮುಖಂಡರು ಈ ಸತ್ಯವನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಿಡಿಯೋ ಪ್ರಕರಣದಲ್ಲಿ ಪೋಲಿಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದರು.

ಉಡುಪಿ ಶಾಸಕ ಯಶ್ಪಾಲ್​ ಸುವರ್ಣ ಮಾತನಾಡಿ, ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು, ಹಿಂದೂ ವಿದ್ಯಾರ್ಥಿನಿಯ ವಿಡಿಯೋ ಚಿತ್ರಿಕರಿಸಿರುವುದರ ಹಿಂದೆ ಪಿ.ಎಫ್​.ಐ ನ ಮಹಿಳಾ ಘಟಕದ ಷಡ್ಯಂತ್ರವಿರಬಹುದು. ಟಾಯ್ಲೆಟ್ನಲ್ಲಿ ಮೊಬೈಲ್​ ಇಟ್ಟವರು ಮುಂದಿನ ದಿನಗಳಲ್ಲಿ ಬಾಂಬ್​ ಇಡಲು ಹಿಂದೇಟು ಹಾಕುವುದಿಲ್ಲ. ಹೀಗಾಗಿ ವಿದ್ಯಾರ್ಥಿನಿಯರ ಸಂಪರ್ಕದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ್​ ಮಾತನಾಡಿ, ಕಾಂಗ್ರೆಸ್​ ಸರ್ಕಾರ ಎಲ್ಲಾ ಪ್ರಕರಣಗಳನ್ನು ಕ್ಷುಲ್ಲಕವಾಗಿ ಪರಿಗಣಿಸುತ್ತಿದೆ. ಉಡುಪಿಗೆ ವಿದ್ಯಾರ್ಜನೆಗಾಗಿ ಹೊರ ಜಿಲ್ಲೆಯ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದರೆ ಈಗ ಹೊರಜಿಲ್ಲೆಯ ವಿದ್ಯಾರ್ಥಿಗಳನ್ನು ಉಡುಪಿಗೆ ಕಳುಹಿಸಲು ಪೋಷಕರು ಹಿಂಜರಿಯುತ್ತಿದ್ದಾರೆ. ಹಿಜಾಬ್​ ಗಲಾಟೆಯ ಹಿಂದೆ ಯಾರೆಲ್ಲಾ ಇದ್ದರೂ, ಯಾವ ಸಂಘಟನೆ ಇದೆ ಗೊತ್ತಿದೆ ಎಂಬುದು ಬಯಲಾಗಿದೆ. ಇದು ಸಣ್ಣ ವಿಚಾರವಾಗಿದ್ದರೇ ಕಾಲೇಜಿನವರು ವಿದ್ಯಾರ್ಥಿಗಳನ್ನು ಯಾಕೆ ಸಸ್ಪೆಂಡ್​ ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಶಾಸಕರಾದ ಸುರೇಶ್​ ಶೆಟ್ಟಿ ಗುರ್ಮೆ, ಕಿರಣ್​ ಕೊಡ್ಗಿ, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ್​ ಕುಮಾರ್​ ಶೆಟ್ಟಿ, ಮುಖಂಡರಾದ ಬೈಕಾಡಿ ಸುಪ್ರಸಾದ್​ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಮಟ್ಟಾರು ರತ್ನಾಕರ ಹೆಗ್ಡೆ, ಶ್ರೀನಿಧಿ ಹೆಗ್ಡೆ, ಮಾಜಿ ಶಾಸಕ ರಘುಪತಿ ಭಟ್​, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net