ಮಹಿಳೆಯರ ಒಳಉಡುಪಿನಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಬಾಬರ್ ಆಜಮ್ ಪತ್ತೆ?!

babar azam
Published on

ನವದೆಹಲಿ: ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿದೆ. ಮೊದಲ ಟೆಸ್ಟ್‌ನಲ್ಲಿ ಆತಿಥೇಯ ತಂಡವನ್ನು ಸೋಲಿಸಿದ ಪಾಕ್​ ತಂಡವು ಎರಡನೇ ಟೆಸ್ಟ್‌ನಲ್ಲೂ 222 ರನ್‌ಗಳಿಂದ ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದೆ.

ಈ ಪಂದ್ಯದ ನಂತರ, ಪಾಕಿಸ್ತಾನದ ನಾಯಕ ಬಾಬರ್ ತಮ್ಮ ಜೆರ್ಸಿಯನ್ನು ತೆಗೆದು ತಮ್ಮ ಅಭಿಮಾನಿಯೊಬ್ಬರಿಗೆ ಉಡುಗೊರೆಯಾಗಿ ನೀಡಿದರು, ಆದರೆ ಜೆರ್ಸಿ ತೆಗೆದ ನಂತರ ಅವರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಾರೆ. ಅವರು ಜೆರ್ಸಿಯ ಕೆಳಗಡೆ ಧರಿಸಿದ್ದು ಬ್ರಾ ಎಂದೇ ಸಾಮಾಜಿಕ ಜಾಲತಾಣದಲ್ಲಿ ಜನರು ಎಂದುಕೊಂಡು ಬಿದ್ದು ಬಿದ್ದು ನಗುತ್ತಿದ್ದಾರೆ. ಕೆಲವರಂತೂ ಅವರಿಗೆ "ಬ್ರಾ ಮ್ಯಾನ್" ಎಂಬ ಬಿರುದನ್ನೂ ನೀಡಿದ್ದಾರೆ!

ಬಾಬರ್ ಆಜಮ್ ಧರಿಸಿದ್ದು ನಿಜಕ್ಕೂ ಸ್ಪೋರ್ಟ್ಸ್​ ಬ್ರಾ ನಾ?!

ವಾಸ್ತವವಾಗಿ, ಬಾಬರ್ ತನ್ನ ಜರ್ಸಿಯನ್ನು ತೆಗೆದ ತಕ್ಷಣ, ಅದರ ಕೆಳಗೆ ಕಾಣಿಸಿಕೊಂಡದ್ದು ಒಂದು ವೆಸ್ಟ್. ಅದು ಸ್ಪೋರ್ಟ್ಸ್ ಬ್ರಾದಂತೆ ಕಂಡರೂ ಅದರ ಕೆಲಸ ಬೇರೆಯದ್ದೇ ರೀತಿ ಇರುತ್ತದೆ. ಇದು ಮೈದಾನದಲ್ಲಿದ್ದಾಗ ಆಟಗಾರನ ಹೃದಯ ಬಡಿತವನ್ನು ಗಮನಿಸಲು, ಎಷ್ಟು ವೇಗವಾಗಿ ಓಡುತ್ತಿದ್ದಾನೆ, ಮೈದಾನದಲ್ಲಿ ಎಲ್ಲಿದ್ದಾನೆ, ಮುಂತಾದ ಮಾಹಿತಿಯನ್ನು ಗಮನಿಸಲು ಬಳಸಲಾಗುತ್ತದೆ. ಇದು ಸ್ಪೋರ್ಟ್ಸ್​ ಬ್ರಾ ರೀತಿ ಕಾಣಿಸುತ್ತಿದ್ದರೂ ಕೆಲವೇ ಕೆಲವು ಆಟಗಾರರು ಇದನ್ನು ಧರಿಸುತ್ತಾರೆ.

ಬಾಬರ್ ಅಜಮ್ ಈ ಸ್ಪೋರ್ಟ್ಸ್ ಬ್ರಾ ಧರಿಸಿದ್ದು ಏಕೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಶ್ನೆ ಎದ್ದಿದೆ. ಇದನ್ನು ಕಂಪ್ರೆಷನ್ ವೆಸ್ಟ್ ಎಂದು ಕರೆಯಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದು ಸ್ಪೋರ್ಟ್ಸ್ ಬ್ರಾದಂತೆ ಕಾಣುತ್ತದೆ. ಇದರಲ್ಲಿ ಎಲೆಕ್ಟ್ರಾನಿಕ್ ಸಾಧನವನ್ನು ಲಗತ್ತಿಸಲಾಗಿರುತ್ತದೆ. ಇದು ತುಂಬಾ ಹಗುರವಾಗಿದ್ದು ಸುಲಭವಾಗಿ ಧರಿಸಬಹುದು.

 ಸಾಮಾಜಿಕ ಮಾಧ್ಯಮದಲ್ಲಿ ಜನರ ಮೋಜು!

ಜನರು ಈಗ ಸಾಮಾಜಿಕ ಮಾಧ್ಯಮದಲ್ಲಿ ಬಾಬರ್ ಆಜಮ್ ಅವರ
"ಬ್ರಾ ಧರಿಸಿದ" ಫೋಟೋವನ್ನು ಹಂಚಿಕೊಳ್ಳುತ್ತಿದ್ದು ಈ ಬಗ್ಗೆ ನಾನಾ ರೀತಿಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಜನರು ಈಗ ಈ ವೀಡಿಯೊಗೆ ಕಾಮೆಂಟ್ ಮಾಡುತ್ತಿದ್ದು ಕೆಲವರಂತೂ, ಬಾಬರ್ ಆಜಮ್, ನೀವು ಯಾವ ರೀತಿಯ ಹವ್ಯಾಸವನ್ನು ಬೆಳೆಸಿಕೊಂಡಿದ್ದೀರಿ ಎಂದು ಕೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net