ಸರ್ಕಾರ ದೈಹಿಕ ಶಿಕ್ಷಕರ ನೇಮಕಾತಿ ಮಾಡದಿದ್ದರೆ ನ್ಯಾಯಾಲಯದ ಮೊರೆ-ಎಚ್ಚರಿಕೆ

SHRIKANTA SWAMY
SHRIKANTA SWAMY
Published on

ರಾಯಚೂರು ರಾಜ್ಯದಲ್ಲಿ ದೈಹಿಕ ಶಿಕ್ಷಕರ ವಿಷಯದಲ್ಲಿ ಸರ್ಕಾರವೇ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದು, ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡದೇ ಹೋದಲ್ಲಿ ನ್ಯಾಯಾಲಯದ ಮೊರೆ ಹೋಗಲು ಚಿಂತನೆ ನಡೆಸಲಾಗಿದೆಂದು ರಾಜ್ಯ ಸರ್ಕಾರಿ ಗ್ರೇಡ್-೧ ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶ್ರೀಕಂಠ ಸ್ವಾಮಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈಧ್ಯನಾಥನ್ ಸಮಿತಿ ಶಿ-Áರಸ್ಸುಗಳಲ್ಲಿ ೧೨ ಮಾತ್ರ ಜಾರಿಗೊಳಿಸಲಾಗಿದೆ ಉಳಿದ ಶಿ-Áರಸ್ಸುಗಳ ಜಾರಿಗೆ ಸರ್ಕಾರ ಮೀನಮೇಷ ಏಣಿಸುತ್ತಿದೆ. ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಲು ಸರ್ಕಾರ ಈಹಿಂದೆ ಆದೇಶ ನೀಡಿದ್ದರೂ ಶಿಕ್ಷಣ ಸಚಿವರು ಸದನದಲ್ಲಿ ಪರಿಗಣಿಸುವದಿಲ್ಲ ಎಂದು ಹೇಳಿದ್ದಾರೆ.

ಇಲಾಖೆ ಅಽಕಾರಿಗಳು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಂದಿಗೂ ಶಾಲೆಗಳಲ್ಲಿ ದೈಹಿಕ ಶಿಕ್ಷಕರನ್ನು ತಾರತಮ್ಯವಾಗಿ ನೋಡಲಾಗುತ್ತದೆ.ಸೇವಾ ಜೇಷ್ಠತೆಯನ್ನು ಸಹ ಪರಿಗಣಿಸದೇ ನಿರ್ಲಕ್ಷ್ಯಿಸಲಾಗುತ್ತಿದೆ ಎಂದರು.

೨೦೦೭ ರಿಂದ ವೈಧ್ಯನಾಥನ್ ಸಮಿತಿ ಶಿ-Áರಸ್ಸು ಜಾರಿಗೊಂಡಿದ್ದರೂ ದೈಹಿಕ ಶಿಕ್ಷಕರ ಸಮಸ್ಯೆಗಳ ಪರಿಗಣಿಸಲು ಸರ್ಕಾರ ಮುಂದಾಗುತ್ತಿಲ್ಲ. ಮುಪ್ರೌಡ ಶಾಲಾ ವಿಭಾಗದಲ್ಲಿಯೇ ದೈಹಿಕ ಶಿಕ್ಷಣ ಮುಂದುವರೆಸುವದ ಸೇರಿ ಹಲವು ಬೇಡಿಕೆಗಳಿಗೆ ಸರ್ಕಾರ ಗಮನ ಸೆಳೆಯಲಾಗಿದೆ. ಆದರೂ ಸಕರಾತ್ಮಕ ಸ್ಪಂದನೆ ದೊರೆಯದೇ ಇರುವದಿರಂದ ಆಡಳಿತ ನ್ಯಾಯಾಽÃಕರಣ ಮೊರೆ ಹೋಗಲು ಚಿಂತಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಯಂಕಪ್ಪ ಫಿರಂಗಿ, ರಾಜ್ಯ ಉಪಾಧ್ಯಕ್ಷ ರಾಜು ದೇಸಾಯಿ,ಪರಶುರಾಮ, ಇಸ್ಮಾಯಿಲ್, ಶಂಕರಪ್ಪ ಮಾಲಿ ಪಾಟೀಲ್, ರವಿಂದ್ರ.ಕೆ. ರಾಜೇಶ್ವರಿ, ಕವಿತಾ, ರಮೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net