ಬೇಸಿಗೆಯ ಈ ಸುಡು ಬಿಸಿಲಿನಲ್ಲಿ ಗ್ಲೋಯಿಂಗ್ ಸ್ಕಿನ್​ ನಿಮ್ಮದಾಗಬೇಕಾ? ಹಾಗಾದ್ರೆ ಈ 7 ಹಣ್ಣುಗಳನ್ನು ತಿನ್ನಿ ಸಾಕು| Glowing Skin

Glowing Skin
Published on

Glowing Skin | ಬೇಸಿಗೆ ಬಂತೆಂದರೆ ಸಾಕು. ಎಲ್ಲೆಲ್ಲಿಯೂ ಉರಿ ಬಿಸಿಲೇ. ಈ ಬಿಸಿಲಿನ ಶಾಖದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಎಲ್ಲರು ಪ್ರಯತ್ನಿಸುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರು, ಮುಖಕ್ಕೆ ಸನ್ ಸ್ಕ್ರೀನ್ ಹಚ್ಚಿ,​ ಮಾಸ್ಕ್ ಧರಿಸಿ, ಛತ್ರಿ ಹಿಡಿದೇ ರೋಡಿಗಿಳಿಯುತ್ತಾರೆ. ಬೇಸಿಗೆಯ ಉರಿ ಬಿಸಿಲಿಗೆ ಮುಖದಲ್ಲಿ ಸಹಜವಾಗಿ ಕಪ್ಪು ಕಲೆ, ಸುಕ್ಕು, ಡಲ್​​ ಸ್ಕಿನ್​ ಆಗುತ್ತದೆ. ಆದರೆ ಬೇಸಿಗೆಯಲ್ಲಿಯೂ ನಿಮ್ಮ ಮುಖ ಗ್ಲೋಯಿಂಗ್ ಆಗಿ ಇರಬೇಕು ಅಂದ್ರೆ ಈ ಹಣ್ಣುಗಳನ್ನು ತಿನ್ನಿ ಸಾಕು. ಪಳಪಳ ಹೊಳೆಯುವ ತ್ವಚೆ ನಿಮ್ಮದಾಗಬಹುದು.

ಬೇಸಿಗೆಯಲ್ಲಿಯೂ ಹೊಳೆಯುವ ತ್ವಚೆಯನ್ನು ಪಡೆಯಲು ಈ ಹಣ್ಣುಗಳು ತಿನ್ನಿ:

ಪಪ್ಪಾಯಿ:

ಪಪ್ಪಾಯಿ ಅನೇಕ ಪ್ರಯೋಜನಗಳಿಂದ ತುಂಬಿರುವ ಆರೋಗ್ಯಕರ ಹಣ್ಣು. ಇದು ಪಪೈನ್ ಎಂಬ ಕಿಣ್ವವನ್ನು ಹೊಂದಿದ್ದು, ಇದು ಮುಖದ ಮೇಲಿನ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ಹೊಳೆಯುವ ತ್ವಚೆಯನ್ನು ನೀಡುತ್ತದೆ.

ಕಲ್ಲಂಗಡಿ:

ಬೇಸಿಗೆಗೆ ತಂಪಾಗಿ ತಿನ್ನಬಹುದಾದ ಹಣ್ಣೆಂದರೆ ಕಲ್ಲಂಗಡಿ. ಇದರಲ್ಲಿ ವಿಟಮಿನ್ ಸಿ ಮತ್ತು ಲೈಕೋಪೀನ್ ಸಮೃದ್ಧವಾಗಿದ್ದು, ಇದು ನಿಮ್ಮ ತ್ವಚೆಯನ್ನು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ. ಮತ್ತು ನಿಮ್ಮ ದೇಹಕ್ಕೆ ತಂಪು ನೀಡುತ್ತದೆ.

ಮಾವಿನಹಣ್ಣು:

ಹಣ್ಣುಗಳ ರಾಜ ಎಂದು ಪರಿಗಣಿಸಲಾದ ಮಾವಿನಹಣ್ಣು ವಿಟಮಿನ್ ಎ ಮತ್ತು ಸಿ ಯಿಂದ ತುಂಬಿರುತ್ತದೆ. ಇದು ತ್ವಚೆಯನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಮುಖದಲ್ಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಈ ಹಣ್ಣು ಸಹಾಯಕ. ಆದರೂ ಮಾವಿನಹಣ್ಣನ್ನು ಮಿತವಾಗಿ ಸೇವಿಸುವುದು ಮುಖ್ಯ.

ಅನಾನಸ್:

ಮತ್ತೊಂದು ರುಚಿಕರವಾದ ಮತ್ತು ಆರೋಗ್ಯಕರ ಹಣ್ಣಾದ ಅನಾನಸ್ ವಿಟಮಿನ್ ಸಿ ಮತ್ತು ಮ್ಯಾಂಗನೀಸ್​​ನಿಂದ ಕೂಡಿದೆ. ಇದು ಬೇಸಿಗೆಯ ಮುಖದ ಕಪ್ಪು ಕಲೆಗಳನ್ನು ಕಡಿಮೆ ಮಾಡಲು, ಚರ್ಮದ ಬಣ್ಣವನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ.

ಕಿವಿ:

ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಅಧಿಕವಾಗಿದೆ. ಕಿವಿಹಣ್ಣು ನಿಮ್ಮ ಸ್ಕಿನ್​​ನ್ನು ಧೂಳಿನಿಂದ ರಕ್ಷಿಸುತ್ತದೆ.

ಸ್ಟ್ರಾಬೆರಿಗಳು:

ರುಚಿಯಲ್ಲಿ ರುಚಿಕರವಾದ ಸ್ಟ್ರಾಬೆರಿಗಳನ್ನು ವಿವಿಧ ರೀತಿಯಲ್ಲಿ ಸೇವಿಸಬಹುದು. ಇವು ವಿಟಮಿನ್ ಸಿ ಯಿಂದ ತುಂಬಿರುತ್ತವೆ, ಇದು ನಿಮ್ಮ ತ್ವಚೆಯನ್ನು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ ಮತ್ತು ಅಕಾಲಿಕ ಸುಕ್ಕುಗಳ ಕಡಿಮೆ ಮಾಡುತ್ತದೆ.

ಕಿತ್ತಳೆ:

ವಿಟಮಿನ್ ಸಿಯಿಂದ ಸಮೃದ್ಧವಾಗಿರುವ ಕಿತ್ತಳೆ ಹಣ್ಣುಗಳು ಮುಖದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಸೂರ್ಯನ ಬೆಳಕಿಗೆ ಹೋದಾಗ ಸಾಮಾನ್ಯವಾಗಿ ಕಂಡುಬರುವ ಕಪ್ಪು ಕಲೆಗಳನ್ನು ಇದು ಕಡಿಮೆ ಮಾಡುತ್ತದೆ.

ಈ ಹಣ್ಣುಗಳನ್ನು ನಿಯಮಿತವಾಗಿ ನಿಮ್ಮ ಆಹಾರದ ಜೊತೆ ಸೇವಿಸುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ. ಹಾಗೆಯೇ ನಿಮ್ ಆರೋಗ್ಯಕ್ಕೂ ಕೂಡ ಈ ಹಣ್ಣುಗಳು ಉತ್ತಮವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net