ಹಣ ಖರ್ಚು ಮಾಡದೇ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ? ಮೃನಾಲ್​ ಠಾಕೂರ್ ಸೌಂದರ್ಯ ರಹಸ್ಯ ಬಯಲು! Mrunal Thakur

Mrunal Thakur
Published on

Mrunal Thakur : ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್​ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ತೆಲುಗಿನಲ್ಲಿ ತಾನು ನಟಿಸಿದ ಕೇವಲ ಎರಡೇ ಚಿತ್ರಕ್ಕೆ ಮೃನಾಲ್​, ಸ್ಟಾರ್ ನಟಿ ಇಮೇಜ್ ಪಡೆದುಕೊಂಡಿದ್ದಾರೆ. ಮೂಲತಃ ಬಾಲಿವುಡ್ ಬೆಡಗಿಯಾಗಿರುವ ಮೃನಾಲ್​, ಟಾಲಿವುಡ್​ನಲ್ಲಿ ಅಪಾರ ಕ್ರೇಜ್ ಗಳಿಸಿದ್ದಾರೆ. ತನ್ನ ಮನಮೋಹಕ ಸೌಂದರ್ಯ ಮತ್ತು ಅತ್ಯುತ್ತಮ ನಟನೆಯಿಂದ ತೆಲುಗು ಪ್ರೇಕ್ಷಕರ ಮನ ಕದ್ದಿರುವ ಮೃನಾಲ್​, ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

ಸದ್ಯ ಮೃನಾಲ್​ ಠಾಕೂರ್ ಅವರು ಅಜಯ್​ ದೇವಗನ್​ ನಟನೆಯ ಸನ್​ ಆಫ್​ ಸರ್ದಾರ್​ 2 ಚಿತ್ರದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಹೀಗಾಗಿ ತಮ್ಮ ಮನಮೋಹಕ ಫೋಟೋಗಳಿಂದಲೇ ಮೃನಾಲ್ ಆಗಾಗ​ ಟ್ರೆಂಡ್​ ಆಗುತ್ತಿದ್ದಾರೆ. ಪ್ರಸ್ತುತ ಅವರಿಗೆ 33 ವರ್ಷ ವಯಸ್ಸು. ಆದರೂ ಮೃನಾಲ್​ ಅವರ ಚರ್ಮ ಅಷ್ಟು ವಯಸ್ಸಾದಂತೆ ಕಾಣುವುದಿಲ್ಲ. ಹೀಗಾಗಿ, ಮೃನಾಲ್​ ಅವರ ಬ್ಯೂಟಿ ಸೀಕ್ರೆಟ್​ ಏನೆಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಆ ಪ್ರಶ್ನೆಗೆ ನಾವಿಂದು ಉತ್ತರ ನೀಡಲಿದ್ದೇವೆ.

ಅಂದಹಾಗೆ, ಮೃನಾಲ್​ ಅವರ ಹೊಳೆಯುವ ಚರ್ಮಕ್ಕೆ ದುಬಾರಿ ಸೌಂದರ್ಯ ಉತ್ಪನ್ನಗಳು ಕಾರಣವಲ್ಲ. ಮೃನಾಲ್​ ಅವರು ಒಂದು ಪೈಸೆಯನ್ನೂ ಖರ್ಚು ಮಾಡದೆ ಹೊಳೆಯುವ ಚರ್ಮವನ್ನು ಪಡೆಯುತ್ತಾರಂತೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಸ್ವತಃ ಮೃನಾಲ್ ಅವರೇ ಹೇಳಿಕೊಂಡಿದ್ದಾರೆ. ತಮ್ಮ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ಸಕ್ಕರೆ ಸ್ಕ್ರಬ್‌ಗಳು, ಅರಿಶಿನ ಫೇಸ್ ಮಾಸ್ಕ್‌ಗಳು ಮತ್ತು ಜೇನುತುಪ್ಪವು ಮೃನಾಲ್​ ಅವರ ನೆಚ್ಚಿನ ಫೇಸ್ ಮಾಸ್ಕ್‌ಗಳಾಗಿವೆ. ಹಾಗಾದರೆ, ಮೃನಾಲ್ ಅವರ ನೆಚ್ಚಿನ ಫೇಸ್ ಮಾಸ್ಕ್‌ಗಳಲ್ಲಿ ಒಂದನ್ನು ವಿವರವಾಗಿ ತಿಳಿದುಕೊಳ್ಳೋಣವೇ?

ಜೇನುತುಪ್ಪ ಮತ್ತು ಹಣ್ಣು

ಜೇನುತುಪ್ಪ ಮತ್ತು ಹಣ್ಣು ಮೃನಾಲ್‌ಗೆ ಪ್ರಮುಖವಾದ ಫೇಸ್ ಮಾಸ್ಕ್ ಆಗಿದೆ. ಬಾಳೆಹಣ್ಣು ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಮತ್ತು ಜೇನುತುಪ್ಪವು ಚರ್ಮವನ್ನು ಮೃದುವಾಗಿರಿಸುತ್ತದೆ. ಇದನ್ನು ಹೇಗೆ ತಯಾರಿಸಬೇಕೆಂದು ನೋಡೋಣ.

ಅಗತ್ಯವಾದ ವಸ್ತುಗಳು

1. ಚೆನ್ನಾಗಿ ಮಾಗಿದ ಬಾಳೆಹಣ್ಣು - 1

2. ಜೇನುತುಪ್ಪ - ಒಂದು ಚಮಚ

3. ನಿಂಬೆ ರಸ

ತಯಾರಿಸುವುದು ಹೇಗೆ?

ಮೊದಲು ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ ಪೇಸ್ಟ್ ಮಾಡಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮುಖವನ್ನು ಸ್ವಚ್ಛಗೊಳಿಸಿದ ನಂತರ, ಈ ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ. 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ನೀವು ಈ ಮಾಸ್ಕ್ ಅನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಬಳಸಬಹುದು. ಇದರಿಂದ ನೀವು ಆಕರ್ಷಕ ಮುಖವನ್ನು ಪಡೆದುಕೊಳ್ಳಬಹುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net