

ಬೆಂಗಳೂರು: ಚಿನ್ನಾಭರಣ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ‘ನವರತನ್ ಜ್ಯುವೆಲ್ಲರ್ಸ್’ ಹಾಗೂ ವಿಆರ್ಎಲ್ ಮೀಡಿಯಾ ಸಹಯೋಗದಲ್ಲಿ ಮೇ 1 ರಂದು ವಾರ್ಷಿಕ ಆರೋಗ್ಯ ಹೃದಯಕ್ಕಾಗಿ ವಾಕಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಇತ್ತೀಚೆಗೆ ಒತ್ತಡ, ಆಹಾರ ಪದ್ದತಿ ಸೇರಿ ಇನ್ನೀತರ ಚಟುವಟಿಕೆಗಳಿಂದಾಗಿ ಯುವ ಪೀಳಿಗೆ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದೆ. ಈ ಹಿನ್ನೆಲೆಯಲ್ಲಿ ವಾಕ್ಥಾನ್ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಗುವುದು. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತು ಅರಿವು ಮೂಡಿಸಲಾಗುವುದು ಎಂದು ‘ನವರತನ್ ಜ್ಯುವೆಲ್ಲರ್ಸ್’ನ ಉಪಾಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.
ಉಚಿತ ಆರೋಗ್ಯ ಶಿಬಿರ
ಮೇ1ರ ಬೆಳಗ್ಗೆ 6.30ರಿಂದ 8 ಗಂಟೆಯವರೆಗೆ ರಾಜಾಜಿನಗರದಲ್ಲಿರುವ ನವರತನ್ ಜುವೆಲರ್ಸ್ ನಿಂದ ವಾಕಥಾನ್ ಆರಂಭವಾಗಲಿದೆ. ಪೈಪ್ಲೈನ್, ಶಂಕರಮಠ ವೃತ್ತ, ಮೋದಿ ಆಸ್ಪತ್ರೆ ರಸ್ತೆ ಮೂಲಕ ವೆಸ್ಟ್ಆಫ್ಕಾರ್ಡ್ ರಸ್ತೆಗೆ ಬಂದು ಪುನಃ ನವರತನ್ ಜ್ಯುವೆಲರ್ಸ್ಗೆ ಬಂದು ಅಂತ್ಯಗೊಳ್ಳಲಿದೆ. ಲಘು ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದೆ. ಇದಾದ ಬಳಿಕ ಫೋರ್ಟಿಸ್ ಆಸ್ಪತ್ರೆಯ ಸಹಯೋಗದೊಂದಿಗೆ ರಾಜಾಜಿನಗರದಲ್ಲಿರುವ ನವರತನ್ ಜ್ಯುವೆಲರ್ಸ್ನಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಇಸಿಜಿ, ಸಾಮಾನ್ಯ ಆರೋಗ್ಯ ಪರೀಕ್ಷೆ, ಬಿಪಿ, ಸಕ್ಕರೆ ಖಾಯಿಲೆ ಸೇರಿ ಇನ್ನಿತರ ಆರೋಗ್ಯ ಸಮಸ್ಯೆಗೆ ತಜ್ಞ ವೈದ್ಯರು ಪರಿಹಾರ ಸೂಚಿಸಲಿದ್ದಾರೆ ಎಂದು ಅರುಣ್ಕುಮಾರ್ ತಿಳಿಸಿದ್ದಾರೆ.
ಸ್ಥಳ: ನವರತನ್ ಜ್ಯುವೆಲರ್ಸ್’, 120, 12ನೇ ಕ್ರಾಸ್, ವೆಸ್ಟ್ಆಫ್ ಕಾರ್ಡ್ ರಸ್ತೆ, ರಾಜಾಜಿನಗರ 2ನೇ ಹಂತ. ಸಮಯ: ಬೆಳಗ್ಗೆ 6.30
ದೂರವಾಣಿ ಸಂಖ್ಯೆ: 080 23019400
ವಾಟ್ಸ್ಆ್ಯಪ್ ಸಂಖ್ಯೆ: 9742023322