ಕಾಸರಗೋಡು: ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಗೆ ಅನುಕೂಲವಾಗುವಂತೆ ಜೂ.4ರಂದು ಪೆರಿಯ ಕೇಂದ್ರೀಯ ವಿವಿ ಯಲ್ಲಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳ ಇವಿಎಂ ಮತ ಎಣಿಕೆ ಕೇಂದ್ರದ ಮಾದರಿ ಸ್ಥಾಪಿಸಿ ತರಬೇತಿ ನೀಡಲಾಯಿತು.
ಕಾಸರಗೋಡು ಕಲೆಕ್ಟರೇಟ್ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮತ ಎಣಿಕೆ ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಮಂಜೇಶ್ವರ, ಕಾಸರಗೋಡು, ಉದುಮ, ಕಾಞಂಗಾಡ್, ತ್ರಿಕರಿಪುರ, ಪಯ್ಯನ್ನೂರು ಮತ್ತು ಕಲ್ಲೃಶ್ಶೇರಿ ಮಂಡಲಗಳ ನೌಕರರಿಗೆ ವಿವಿಧ ಸಮಯಗಳಲ್ಲಿ ತರಬೇತಿ ನೀಡಲಾಯಿತು.
ಜಿಲ್ಲಾಧಿಕಾರಿಗಳಾದ ಜೆಗ್ಗಿ ಪಾಲ್(ಮಂಜೇಶ್ವರ), ಪಿ.ಬಿನುಮೋನ್(ಕಾಸರಗೋಡು), ನಿರ್ಮಲ್ ರೀಟಾ ಗೋಮ್ಸ್(ಉದುಮ), ಸಬ್ ಕಲೆಕ್ಟರ್ ಸುಫಿಯಾನ್ ಅಹ್ಮದ್(ಕಾಞಂಗಾಡ್), ಪಿ.ಶಾಜು(ತ್ರಿಕರಿಪುರ), ಸಿರೋಶ್ ಪಿ.ಜಾನ್(ಪಯ್ಯನ್ನೂರು), ಕೆ.ಅಜಿತ್ ಕುಮಾರ್(ಕಲ್ಲೃಶ್ಶೇರಿ) ಮತ ಎಣಿಕೆ ವಿಧಾನ ಮಂಡಿಸಿದರು.
ಕೆ.ಇನ್ಬಾಶೇಖರ್ ಅವರು ಪ್ರತಿ ವಿಧಾನಸಭಾ ಕ್ಷೇತ್ರದ ಕಲಾಪ ಪರಿಶೀಲಿಸಿ ಅಗತ್ಯ ಸೂಚನೆ ನೀಡಿ ಅನುಮಾನ ನಿವಾರಿಸಿದರು. ಮತ ಎಣಿಕೆ ಪ್ರಕ್ರಿಯೆ ದೋಷರಹಿತವಾಗಿ ಪೂರ್ಣಗೊಳಿಸಲು ಸಾಮೂಹಿಕ ಕ್ರಮ ಅಗತ್ಯ ಎಂದು ಜಿಲ್ಲಾಧಿಕಾರಿ ಹೇಳಿದರು. ಶುಕ್ರವಾರ ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ಅಂಚೆ ಮತ ಎಣಿಕೆ ಕುರಿತು ಮಾದರಿ ತರಬೇತಿ ಹಮ್ಮಿಕೊಳ್ಳಲಾಗಿತ್ತು.