ಮತದಾರ ಸಾಕ್ಷರತಾ ತರಬೇತಿ ಕಾರ್ಯಾಗಾರ

11 ಎಸ್ಕೆಪಿ 2t
ಶಿಕಾರಿಪುರದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮತದಾರರ ಸಾಕ್ಷರತಾ ತರಬೇತಿ ಕಾರ್ಯಾಗಾರ.
Published on

ಶಿಕಾರಿಪುರ: ಶಿವಮೊಗ್ಗ ಚುನಾವಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ತಾಪಂ ಸಭಾಂಗಣದಲ್ಲಿ ಮತದಾರರ ಸಾಕ್ಷರತಾ ಸಂಘದ ಎಲ್ಲ ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಸಂಚಾಲಕರು, ಆಯ್ದ ವಿದ್ಯಾರ್ಥಿಗಳಿಗೆ ಸೋಮವಾರ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರವನ್ನು ಕಾರ್ಯಕ್ರಮ ನಿರ್ದೇಶಕರು ಇ-ಆಡಳಿತ ಬೆಂಗಳೂರು ಮತ್ತು ಶಿಕಾರಿಪುರ ಉಸ್ತುವಾರಿ ಅಧಿಕಾರಿ ನಾಗೇಂದ್ರ ಎಫ್. ಹೊನ್ನಳ್ಳಿ ಉದ್ಘಾಟಿಸಿದರು. ತಾಪಂ ಇಒ ರಾಜಪ್ಪ, ತಹಸೀಲ್ದಾರ್ ಮಲ್ಲೇಶಪ್ಪ ಬಿ. ಪೂಜಾರ್, ಬಿಇಒ ರಫೀಕ್ ಖಾನ್, ರಾಜ್ಯ ಸಂಪನ್ಮೂಲ ವ್ಯಕ್ತಿ ನವೀದ್ ಖಾನ್, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಕೊಟ್ರೇಶ್ವರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net