

ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ ಜಾರುವ ಸಾಧ್ಯತೆ ಇದೆ. ಗುರುವಾರ ರಾತ್ರಿವರೆಗೂ ಮತ ಎಣಿಕೆ ಕಾರ್ಯ ನಡೆಯಿತು.
ಈ ಬಾರಿ ಕಾಂಗ್ರೆಸ್, ಎಸ್‌ಡಿಪಿಐ ಜತೆ ಸೇರಿ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳಿವೆ. 33 ಸದಸ್ಯ ಬಲದ ಗಂಗೊಳ್ಳಿ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರು 13, ಎಸ್‌ಡಿಪಿಐ ಬೆಂಬಲಿತರು 6, ಬಿಜೆಪಿ ಬೆಂಬಲಿತರು 12 ಸ್ಥಾನಗಳಲ್ಲಿ ಜಯ ಗಳಿಸಿದ್ದರೆ, ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ 23 ಸ್ಥಾನಗಳಿಸಿದ್ದ ಬಿಜೆಪಿ ಬೆಂಬಲಿತರು ಈ ಬಾರಿ 11 ಸ್ಥಾನ ಕಳೆದುಕೊಂಡಿದೆ. 6 ಸ್ಥಾನಗಳಿಸಿದ್ದ ಕಾಂಗ್ರೆಸ್ ಈ ಬಾರಿ ಹೆಚ್ಚುವರಿ 7 ಸ್ಥಾನ, 4 ಸ್ಥಾನ ಗಳಿಸಿದ್ದ ಎಸ್‌ಡಿಪಿಐ ಎರಡು ಸ್ಥಾನ ಹೆಚ್ಚಿಗೆ ಪಡೆದುಕೊಂಡಿದೆ.
ಕಾಂಗ್ರೆಸ್ ಎಸ್‌ಡಿಪಿಐನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಸಂಘಟಿತ ಹೋರಾಟ ನೀಡಿರುವುದು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು, ಯುವಜನ ಸೇವಾ ಅಧಿಕಾರಿ ಕುಸುಮಾರ ಶೆಟ್ಟಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಕುಂದಾಪುರ ಇನ್‌ಸ್ಪೆಕ್ಟರ್ ನಂಜಪ್ಪ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.
ಗಂಗೊಳ್ಳಿ-1: ಗುರುರಾಜ್ (558), ನಾಗರಾಜ ಖಾರ್ವಿ (546), ರೇಖಾ ಖಾರ್ವಿ (483), ಸರೋಜ ಕೃಷ್ಣ ಪೂಜಾರಿ (462), ನಾಗರತ್ನ ಶೇರುಗಾರ್ (396)- ಬಿಜೆಪಿ ಬೆಂಬಲಿತರು.
ಗಂಗೊಳ್ಳಿ-2: ತಬ್ರೈಜ್ (578), ರಜಬ್ (516), ಅಬೂಬಕರ್ ನಾಖುದಾ (505) ಮತ್ತು ಶರೀನಾ (530)- ಎಸ್‌ಡಿಪಿಐ ಬೆಂಬಲಿತರು.
ಗಂಗೊಳ್ಳಿ-3: ಗೋಪಾಲ ಖಾರ್ವಿ (356), ಮಮತಾ ಎಸ್.ಗಾಣಿಗ (346)-ಪಕ್ಷೇತರರು, ದೀಪಾ (225) ಮತ್ತು ಶ್ಯಾಮಲಾ ಶೆಡ್ತಿ (251)-ಬಿಜೆಪಿ ಬೆಂಬಲಿತರು.
ಗಂಗೊಳ್ಳಿ-4: ದೇವೇಂದ್ರ ಖಾರ್ವಿ (412), ಶೋಭಾ ಕೃಷ್ಣ ಬಿಲ್ಲವ (331), ಅಮ್ಮು ಮೊಗೇರ‌್ತಿ (291)-ಕಾಂಗ್ರೆಸ್ ಬೆಂಬಲಿತರು, ಮಹೇಶ್ (275) ಬಿಜೆಪಿ ಬೆಂಬಲಿತ.
ಗಂಗೊಳ್ಳಿ -5: ಜಯೇಂದ್ರ ಖಾರ್ವಿ (505), ಗಣೇಶ ಪೂಜಾರಿ (344), ಜನ್ನಿ ಖಾರ್ವಿ (352), ಲಕ್ಷ್ಮೀ ಪೂಜಾರಿ (326)-ಕಾಂಗ್ರೆಸ್ ಬೆಂಬಲಿತರು.
ಗಂಗೊಳ್ಳಿ-6: ಮೋಮಿನ್ ಸಮೀರ್ ಅಹ್ಮದ್ (376), ಜಮೀಲಾ (398)-ಎಸ್‌ಡಿಪಿಐ ಬೆಂಬಲಿತರು, ಜಯಂತಿ ಖಾರ್ವಿ (554), ಮಂಜುಳಾ ದೇವಾಡಿಗ (460), ಮ್ಯಾಕ್ಸಿಮ್ ಅಲ್ಬರ್ಟ್ ಫರ್ನಾಂಡಿಸ್ (396)- ಕಾಂಗ್ರೆಸ್ ಬೆಂಬಲಿತರು.
ಗಂಗೊಳ್ಳಿ-7: ಶ್ರೀನಾಥ ಖಾರ್ವಿ (340), ರಿಯಾಜ್ ಅಹಮ್ಮದ್ (333), ಸುರೇಖಾ ಕಾನೋಜಿ (347)- ಕಾಂಗ್ರೆಸ್ ಬೆಂಬಲಿತರು.