ಪ್ರಯಾಣ ಮಾಡುವಾಗ ವಾಂತಿ ಬರುತ್ತದೆಯೇ? ಚಿಂತಿಸಬೇಡಿ, ಈ ಸಿಂಪಲ್​​ ಟಿಪ್ಸ್​ ಅನುಸರಿಸಿ ಸಾಕು! Vomiting while Travelling

Vomiting while Travelling

Vomiting while Travelling : ಸಾಮಾನ್ಯವಾಗಿ ಕೆಲ ಜನರು ಪ್ರಯಾಣವನ್ನು ಇಷ್ಟಪಡುವುದಿಲ್ಲ. ಅದರಲ್ಲೂ ಕಾರು, ಬಸ್​ನಂತಹ ವಾಹನಗಳಲ್ಲಿ ಸಂಚರಿಸುವಾಗ ವಾಂತಿ, ವಾಕರಿಕೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಾರೆ. ಕಳಪೆ ಜೀರ್ಣಕ್ರಿಯೆ, ಆಹಾರ ವಿಷ ಹಾಗೂ ವಾಹನದಲ್ಲಿರುವ ಕಳಪೆ ಗಾಳಿ ಇತ್ಯಾದಿ ಸಮಸ್ಯೆಗಳಿಂದಾಗಿ ಪ್ರಯಾಣಿಸುವಾಗ ವಾಂತಿ ಉಂಟಾಗುತ್ತದೆ.

ನೀವು ಕೂಡ ಈ ಪಟ್ಟಿಗೆ ಸೇರಿದ್ದೀರಾ? ಆದರೆ ಚಿಂತಿಸಬೇಡಿ. ಈ ಸರಳ ಸಲಹೆಗಳನ್ನು ಅನುಸರಿಸಿದರೆ ಸಾಕು, ಯಾವುದೇ ಸಮಸ್ಯೆಯಿಲ್ಲದೆ ನಿಮ್ಮ ಪ್ರವಾಸವನ್ನು ಅದ್ಭುತವಾಗಿ ಮುಗಿಸಬಹುದು.

ಏಲಕ್ಕಿಯು ಪ್ರಯಾಣದ ಸಮಯದಲ್ಲಿ ತುಂಬಾ ಉಪಯುಕ್ತವಾಗಿದೆ. ಪ್ರಯಾಣ ಮಾಡುವಾಗ ಒಂದೇ ಒಂದು ಏಲಕ್ಕಿಯನ್ನು ಜಗಿಯುತ್ತಿದ್ದರೆ ಸಾಕು ವಾಂತಿ, ವಾಕರಿಕೆಯಂತಹ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ. ಅಲ್ಲದೆ, ಏಲಕ್ಕಿಯು ಉತ್ತಮ ಮೌತ್ ಫ್ರೆಶ್ನರ್ ಆಗಿಯೂ ಕೆಲಸ ಮಾಡುತ್ತದೆ.

ಏಲಕ್ಕಿಯಂತೆ ನಿಂಬೆ ಸಹ ವಾಂತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕೆ ಕಾರಣ ನಿಂಬೆಯಲ್ಲಿರುವ ವಿಟಮಿನ್ ಸಿ. ನೀವು ನೇರವಾಗಿ ನಿಂಬೆಹಣ್ಣಿನ ರುಚಿ ಅಥವಾ ರಸವನ್ನು ಸೇವಿಸಿದರೆ, ಪ್ರಯಾಣದ ಸಮಯದಲ್ಲಿ ವಾಂತಿಯನ್ನು ನಿಯಂತ್ರಿಸಬಹುದು.

ಸೋಂಪು ಕಾಳುಗಳು ಜೀರ್ಣಕ್ರಿಯೆ ಸಮಸ್ಯೆಗಳನ್ನು ತೊಡೆದುಹಾಕಲು ಮಾತ್ರ ಸಹಾಯ ಮಾಡುತ್ತದೆ ಎಂದು ನೀವು ಭಾವಿಸಿದರೆ, ಅದು ತಪ್ಪು. ಇದು ವಾಂತಿ ನಿಲ್ಲಿಸಲು ಸಹ ಸಹಾಯ ಮಾಡುತ್ತದೆ. ಪ್ರಯಾಣ ಮಾಡುವಾಗ ಸೋಂಪು ಕಾಳುಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಆಗಾಗ ಸ್ವಲ್ಪ ಸೋಂಪು ಕಾಳುಗಳನ್ನು ಬಾಯಿಗೆ ಹಾಕಿಕೊಂಡು ಜಗಿಯಿರಿ. ಹೀಗೆ ಮಾಡುವುದರಿಂದ ವಾಂತಿ, ವಾಕರಿಕೆ ಮುಂತಾದ ಸಮಸ್ಯೆಗಳು ಬರುವುದಿಲ್ಲ.

ಪ್ರಯಾಣದ ಸಮಯದಲ್ಲಿ ವಾಂತಿಯೊಂದಿಗೆ ಆಗಾಗ ವಾಕರಿಕೆ ಮತ್ತು ಹೊಟ್ಟೆಯ ಅಸ್ವಸ್ಥತೆಯನ್ನು ನಿವಾರಿಸಲು ನೀವು ಶುಂಠಿ ಚಹಾವನ್ನು ಪ್ರಯತ್ನಿಸಬಹುದು. ಶುಂಠಿಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆದ್ದರಿಂದ ಶುಂಠಿಯು ಹೊಟ್ಟೆಯ ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ. ಅಲ್ಲದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ.

ಪ್ರಯಾಣದ ಸಮಯದಲ್ಲಿ ವಾಂತಿಯನ್ನು ನಿಲ್ಲಿಸಲು ಲವಂಗವು ಕೂಡ ಉತ್ತಮವಾಗಿದೆ. ವಾಂತಿ ಬರುತ್ತಿದೆ ಎಂದು ಅನಿಸಿದರೆ, ತಕ್ಷಣವೇ ನಿಮ್ಮ ಬಾಯಿಯಲ್ಲಿ ಒಂದು ಅಥವಾ ಎರಡು ಲವಂಗವನ್ನು ಇರಿಸಿ. ಇದರಿಂದ ವಾಂತಿ ಬರುವುದಿಲ್ಲ. ಈ ಮೇಲಿನ ಸಲಹೆಗಳಲ್ಲಿ ಯಾವುದಾದರೂ ಒಂದನ್ನು ಅನುಸರಿಸುವ ಮೂಲಕ ವಾಂತಿಯನ್ನು ತಡೆಗಟ್ಟಿ, ಸುಖಕರ ಪ್ರಯಾಣವನ್ನು ಮಾಡಬಹುದು.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. (ಏಜೆನ್ಸೀಸ್​)

ಸಿನಿಮಾ ಬಿಡುಗಡೆಯಾದ ಬಳಿಕ…. ಪುಷ್ಪ 2 ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಬಿಜೆಪಿ ಶಾಸಕ! Pushpa 2

ತೆಲಂಗಾಣ, ಆಂಧ್ರದಲ್ಲಿ ಕಂಪಿಸಿದ ಭೂಮಿ: ಹೆದರಿ ಮನೆ, ಅಪಾರ್ಟ್‌ಮೆಂಟ್‌ಗಳಿಂದ ಓಡಿ ಬಂದ ಜನರು! Earthquake

Share This Article

ನಿಮ್ಮ ಸ್ಮಾರ್ಟ್​ಫೋನ್​ ನಿಮ್ಮ ಫಿಟ್​ನೆಸ್​ ಕೋಚ್​… ಆಶ್ಚರ್ಯವಾಯಿತೇ? ಇಲ್ಲಿದೆ ಅಚ್ಚರಿ ಮಾಹಿತಿ… Smartphone

Smartphone : ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬನೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ, 2040ರ…

ಈ ದಿನಾಂಕಗಳಂದು ಜನಿಸಿದವರು ತಮ್ಮ ಬುದ್ಧಿವಂತಿಕೆಯಿಂದಾಗಿ ರಾಯಲ್​ ಲೈಫ್​ ನಡೆಸುತ್ತಾರೆ! Numerology

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ…

ನೀವು ಬೆಳಿಗ್ಗೆ ತಿಂಡಿಯನ್ನು ತಡವಾಗಿ ತಿನ್ನುತ್ತೀರಾ? ಎಚ್ಚರ..ಈ ಕಾಯಿಲೆ ಬರೋದು ಪಕ್ಕಾ… breakfast

breakfast: ಬೆಳಗಿನ ಉಪಾಹಾರವು ದೇಹಕ್ಕೆ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಉಪಹಾರವನ್ನು ಬಿಡಬಾರದು. ತಡವಾಗಿ ತಿನ್ನುವುದು…