ವಿವೋ "ಮಹಾ" ವಂಚನೆ ಬಯಲು: ಬರೋಬ್ಬರಿ 62,476ಕೋಟಿ ರೂ.ಚೀನಾಗೆ ರವಾನೆ!

Vivo
Published on

ನವದೆಹಲಿ: ಚೀನಾ ಮೂಲದ ಮೊಬೈಲ್​ ತಯಾರಿಕಾ ಸಂಸ್ಥೆಯ ತೆರಿಗೆ ವಂಚನೆ ಬಯಲಾಗಿದ್ದು, ಭಾರತದಲ್ಲಿ ತೆರಿಗೆ ಪಾವತಿಸಲು ತಪ್ಪಿಸುವುದಕ್ಕಾಗಿ ಬರೋಬ್ಬರಿ ಶೇ.50ರಷ್ಟು ತೆರಿಗೆ ಹಣವನ್ನು ಚೀನಾಗೆ ರವಾನಿಸಿದೆ.

ವಿವೊ ಮೊಬೈಲ್​ ಇಂಡಿಯಾ ಪ್ರೈವೆಟ್​ ಲಿಮಿಟೆಡ್​​ ಹಾಗೂ ಇದರ ಸಹಭಾಗಿಯಾಗಿರುವ ವಿವಿಧ 23 ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ ಕಳೆದ ಎರಡು ದಿನಗಳ ಹಿಂದೆ ದಾಳಿ ಮಾಡಿತ್ತು. ಇದೀಗ ಶೇ.50 ರಷ್ಟು ಅಂದರೆ ಬರೋಬ್ಬರಿ 62, 476ಕೋಟಿ ರೂ. ಹಣವನ್ನು ಚೀನಾಗೆ ರವಾನಿಸಿರುವುದು ಬಯಲಾಗಿದೆ.

ಸಂಸ್ಥೆಯ ವಿವಿಧ ಬ್ಯಾಂಕ್​ಗಳ 119 ಖಾತೆಗಳಲ್ಲಿ ಇರಿಸಿದ್ದ ಸುಮಾರು 465 ಕೋಟಿ ರೂ. ನಗದನ್ನು ಜಪ್ತಿ ಮಾಡಲಾಗಿದೆ. 2018ರಲ್ಲೇ ವಿವೋದ ಇಬ್ಬರು ನಿರ್ದೇಶಕರು ದೇಶ ತೊರೆದಿರುವುದು ಇದೀಗ ಬಯಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net