

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವ ಉದ್ಧವ್ ಠಾಕ್ರೆ ಕುರಿತು ಬಾಲಿವುಡ್ ನಟಿ ದಿಯಾ ಮಿರ್ಜಾ ಮಾಡಿರುವ ಟ್ವೀಟ್ ಈಗ ಟ್ರೋಲ್ಗೆ ಕಾರಣವಾಗಿದೆ.
ಉದ್ಧವ್ ಠಾಕ್ರೆ ಅವರು ಅಧಿಕಾರ ಕಳೆದುಕೊಂಡಿರುವುದಕ್ಕೆ ದಿಯಾ ಮಿರ್ಜಾ ನೀಡಿದ ಹೇಳಿಕೆ ನೆಟ್ಟಿಗರಲ್ಲೂ ಭಾರೀ ಟೀಕೆಗೆ ಗುರಿಯಾಗುತ್ತಿದ್ದಾರೆ. ಕಾಶ್ಮೀರಿ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗಿದ್ದರೆ ದಿಯಾ ಮಾಡಿರುವ ಟ್ವೀಟ್ ಆದರೂ ಏನು ಎಂಬುದಕ್ಕೆ ಇಲ್ಲಿದೆ ಉತ್ತರ.
ಧನ್ಯವಾದಗಳು.... ಉದ್ಧವ್ ಠಾಕ್ರೆ ಅವರೇ ಜನರು ಹಾಗೂ ಗ್ರಹದ(planet) ಬಗ್ಗೆ ನೀವು ಕಾಳಜಿ ಹೊಂದಿರುವ ವ್ಯಕ್ತಿಯಾಗಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ಲಾನೆಟ್ ಅಂದರೆ ನಿಮ್ಮ ಅರ್ಥದಲ್ಲಿ ಬಾಲಿವುಡ್ ಆಗಿರಬಹುದೇ ಎಂದು ಹಾಸ್ಯದ ಮೂಲಕವೇ ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು ಜನರು ಮತ್ತು ಗ್ರಹದ ಬಗ್ಗೆ ಕಾಳಜಿ ವಹಿಸಿದ್ದೀರಿ. ನನ್ನ ಕೃತಜ್ಞತೆ ಮತ್ತು ಗೌರವವನ್ನು ಇಲ್ಲಿ ತಿಳಿಸುತ್ತಿದ್ದೇನೆ. ರಾಷ್ಟ್ರ ಸೇವೆ ಮಾಡಲು ನಿಮಗೆ ಇನ್ನೂ ಹಲವು ಅವಕಾಶಗಳು ಸಿಗಲಿ ಎಂದಿದ್ದ ದಿಯಾ ಅವರ ಟ್ವೀಟ್ಗೆ ಪ್ರತಿಯಾಗಿ ಗ್ರಹ ಎಂದರೆ ಅದು ಬಾಲಿವುಡ್ ಇರಬಹುದೇ ಎಂದಿದ್ದಾರೆ. (ಏಜೆನ್ಸೀಸ್)