ಡ್ರ್ಯಾಗನ್​ ಬೇಸಾಯಕ್ಕೆ ನರೇಗಾ ನೆರವು

vv 2
Published on

| ಜಿ.ಚಂದ್ರಕಾಂತ ನಿವೃತ್ತ ಉಪನಿರ್ದೇಶಕ, ವಾರ್ತಾ ಇಲಾಖೆ, ಕಲಬುರಗಿ.

ಕೃಷಿ ಎಂದರೇ ಅಲ್ಲಿ ಪ್ರಯೋಗ ಸರ್ವೆ ಸಾಮಾನ್ಯ. ವಿಶ್ವದ ಯಾವುದೋ ಮೂಲೆಯ ಬೆಳೆ ಇನ್ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯನ್ನು ಆಕರ್ಷಿಸುತ್ತದೆ. ನಿರ್ದಿಷ್ಟ ಪ್ರದೇಶಕ್ಕೆ ಸೀಮಿತ ಎಂದುಕೊಂಡ ಬೆಳೆ ಇನ್ಯಾವುದೋ ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತದೆ. ಇಂಥ ಅಪರೂಪದ ಬೆಳೆಗಳಲ್ಲಿ ಇದೀಗ ಮುಂಚೂಣಿಯಲ್ಲಿರುವುದು ಡ್ರ್ಯಾಗನ್​ ಫ್ರೂಟ್. ಈಗಾಗಲೆ ರಾಜ್ಯದ ಅನೇಕ ಭಾಗಗಳಲ್ಲಿ ಡ್ರಾ್ಯಗನ್ ಫ್ರೂಟ್ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದ್ದು, ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಕಾಲ್ವಿ ಗ್ರಾಮದ ಬಣಕಾರ ಶಿವನಾಗಪ್ಪ ದೊಡ್ಡತೋಟಪ್ಪ ತಮ್ಮ 2.5 ಎಕರೆ ಡ್ರ್ಯಾಗನ್​ ಫ್ರೂಟ್ ಬೇಸಾಯ ಮಾಡುತ್ತಿದ್ದಾರೆ.

5 ಎಕರೆ ಭೂಮಿಯಲ್ಲಿ ಪಾರಂಪರಿಕ ಮೆಕ್ಕೆಜೋಳ ಮತ್ತಿತರ ಬೆಳೆ ಬೆಳೆಯುತ್ತಿದ್ದರಿಂದ ಅಷ್ಟಕ್ಕಷ್ಟೇ ಆದಾಯ ಬರುತ್ತಿತ್ತು. ಪದವಿ ಮುಗಿಸದ ದೊಡ್ಡತೋಟಪ್ಪ ಮಗ ಪ್ರಕಾಶ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪ್ರೇರಣೆಯಿಂದ ಡ್ರ್ಯಾಗನ್​ ಹಣ್ಣಿನ ಬೇಸಾಯ ಕೈಗೊಂಡಿದ್ದು, ಕುಟುಂಬದ ಆದಾಯ ದ್ವಿಗುಣಗೊಳ್ಳುತ್ತಿದೆ.

ಬಹುವಾರ್ಷಿಕ ಡ್ರ್ಯಾಗನ್​ ಫೂ›ಟ್ ಬೇಸಾಯಕ್ಕಾಗಿ ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆಯಡಿ ಗುಂಡಿ ತೋಡಲು ಮತ್ತು ಬಳ್ಳಿ ಹರಡುವಿಕೆೆಗಾಗಿ 1.28 ಲಕ್ಷ ರೂ. ಕಾರ್ವಿುಕರ ಖಾತೆಗೆ ನೇರವಾಗಿ ಮತ್ತು ಸಸಿಗಳ ಖರೀದಿ, ಸಾಗಣೆ, ಗೊಬ್ಬರ ಮತ್ತಿತರ ವೆಚ್ಚಗಳಿಗಾಗಿ 77,581 ರೂ. ಪಾವತಿಸಲಾಗಿದೆ. ಇದಲ್ಲದೆ, ಕೊಳವೆಬಾವಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲೂ 33,000 ರೂ. ಸಹಾಯಧನ ನೀಡಲಾಗಿದೆ.

ಈ ಬೇಸಾಯ ಪ್ರಾರಂಭಿಸಿದಾಗ ಹಲವು ರೈತರು ಅಪಹಾಸ್ಯ ಮಾಡಿದ್ದರೂ ಎದೆಗುಂದದೆ ಬೇಸಾಯದಲ್ಲಿ ಯಶಸ್ಸು ಕಂಡು ಮೊದಲ ಬೆಳೆ ಪಡೆದಾಗ ನನ್ನ ಇಡೀ ಕುಟುಂಬ ಖುಷಿಪಟ್ಟಿತು ಮತ್ತು ಕುಟುಂಬದಲ್ಲಿ ನೆಮ್ಮದಿ ಕಾಣುವಂತಾಗಿದೆ. ಕಡಿಮೆ ನೀರು ಮತ್ತು ಅಲ್ಪಾವಧಿಯಲ್ಲೇ ಉತ್ತಮ ಇಳುವರಿ, 20-25 ವರ್ಷಗಳವರೆಗೆ ನಿರಂತರವಾಗಿ ಲಾಭ ನೀಡುವ ಬೆಳೆ ಇದಾಗಿದೆ. ಇದರ ಬೇಸಾಯಕ್ಕೆ ತೋಟಗಾರಿಕೆ ಇಲಾಖೆಯ ಸಹಾಯ ಹಾಗೂ ಸಹಕಾರ ಸಿಕ್ಕಿದೆ. ವರ್ಷಕ್ಕೆ 10 ಲಕ್ಷ ರೂ. ಆದಾಯ ನಿರೀಕ್ಷೆಯಿದೆ ಎನ್ನುತ್ತಾರೆ ಪ್ರಕಾಶ ಬಣಕಾರ.

ಆಸಕ್ತರ ಸಂಪರ್ಕಕ್ಕಾಗಿ ಮೊ.ಸಂ.- 81508 75058.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net