More

    ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

    ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ಸುಡುಬಿಸಿಲಿನಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು.

    ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ ಪ್ರಚಾರ ಕಾರ್ಯಕ್ಕೆ ಮುಂದಾದ ಪದ್ಮರಾಜ್ ಆರ್. ಪೂಜಾರಿ ಅವರು, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ರೋಡ್ ಶೋ ಆರಂಭಿಸಿ ವಿಟ್ಲ ನಾಲ್ಕು ರಸ್ತೆಗಳಲ್ಲಿ ಸಂಚರಿಸಿ ವಿಟ್ಲ ಬಸ್ ನಿಲ್ದಾಣದಲ್ಲಿ ಸಮಾಪನಗೊಂಡಿತು. ವಿಟ್ಲ ಸಂತೆ ಮಾರುಕಟ್ಟೆಗೆ ತೆರಳಿ ಮತ ಯಾಚನೆ ನಡೆಸಿದರು. ಬಿಸಿಲಿನ ನಡುವಿನಲ್ಲೂ ಜನರು ಉತ್ಸಾಹದಲ್ಲಿ ಪಾಲ್ಗೊಂಡಿದ್ದರು.

    ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಅರಮನೆ, ವಿಟ್ಲ ಕೇಂದ್ರ ಜುಮ್ಮಾ ಮಸೀದಿ, ವಿಟ್ಲ ಶೋಕಮಾತಾ ದೇವಾಲಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ ಆಶೀರ್ವಾದ ಪಡೆದರು.

    ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉಸ್ತುವಾರಿ ರಮಾನಾಥ ವಿಟ್ಲ, ಕಾವು ಹೇಮನಾಥ ಶೆಟ್ಟಿ, ಜಯಪ್ರಕಾಶ್ ಬದಿನಾರು, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಪಿ., ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಕೆಪಿಸಿಸಿ ಸದಸ್ಯ ಎಂ.ಎಸ್. ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ವಿಜಯ ಕುಮಾರ್ ಆಳ್ವ, ವೇದನಾಥ ಸುವರ್ಣ, ಮಸೀದಿ ಸದರ್ ಅಬ್ದುಲ್ಲಾ ದಾರಿಮಿ, ವಿಟ್ಲ ಜಮಾತ್ ಅಧ್ಯಕ್ಷ ಮಹಮ್ಮದ್ ಅಶ್ರಫ್ ಪೊನ್ನೊಟ್ಟು, ಕಮಿಟಿ ಸದಸ್ಯ ರಶೀದ್ ವಿಟ್ಲ, ಅಜೀಜ್ ಹಳೆಮನೆ, ಮಹಮ್ಮದ್ ಇಕ್ಬಾಲ್, ವಿ.ಕೆ. ಹಂಝ, ನಜೀರ್ ಮಠ, ಚರ್ಚ್ ಧರ್ಮಗುರು ಐವನ್ ಮೈಕಲ್ ರೋಡ್ರಿಗಸ್, ವಿಜಯ್ ಪಾಯಸ್ ಥೋಮಸ್ ಮಸ್ಕರೇನಸ್, ಲೂಯಿಸ್ ಮಸ್ಕರೇನಸ್, ಜೆಸಿಂತಾ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts