

ವಿಟ್ಲ: ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಉತ್ತಮ ಶಿಕ್ಷಕರ ಅಗತ್ಯವಿದ್ದು, ಬದುಕಿನ ದಾರಿಯನ್ನು ಗಮನಿಸಿ ಸಾಗುವ ಕಾರ್ಯವಾಗಬೇಕು. ಸಮಸ್ಯೆಯನ್ನು ಸ್ವಪ್ರಯತ್ನದ ಮೂಲಕ ಎದುರಿಸುವ ಗುಣವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಪ್ರಾರಂಭದಲ್ಲಿದ್ದ ವೇಗ ಅಂತ್ಯದವರೆಗೆ ಮುಂದುವರಿಸದಿದ್ದರೆ ಸಾಧನೆಯನ್ನು ಮಾಡಲಾಗುವುದಿಲ್ಲ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಹೇಳಿದರು.
ವಿಟ್ಲದಲ್ಲಿ ವಿಟ್ಠಲ ಎಜುಕೇಶನ್ ಸೊಸೈಟಿಯ ವಿಟ್ಠಲ ಪದವಿ ಪೂರ್ವ ಕಾಲೇಜು ಮತ್ತು ವಿಟ್ಠಲ ಸುಪ್ರಜಿತ್ ಐಟಿಐ ವಿಭಾಗದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಬೆಂಗಳೂರು ಟ್ರಾನ್ಸೆಂಡ್ ಪಿಯು ಕಾಲೇಜಿನ ಉಪನ್ಯಾಸಕಿ ಅಪರ್ಣಾ ಬರೆಂಗಾಯಿ ಮಾತನಾಡಿ, ಪಾಠ ಪುಸ್ತಕದ ಜತೆಗೆ ಮೌಲ್ಯಯುತ ಜೀವನದ ಬಗ್ಗೆ ವಿದ್ಯಾರ್ಥಿಗಳು ಕಲಿಯಬೇಕು. ಸಮಾಜದ ಪ್ರತಿಯೊಂದು ಪ್ರಶ್ನೆಗೆ ಉತ್ತರ ನೀಡಬೇಕಾದ ಅನಿವಾರ್ಯತೆ ವಿದ್ಯಾಭ್ಯಾಸದ ಪ್ರತಿ ಹಂತದಲ್ಲಿ ಬರುತ್ತದೆ. ಉತ್ತಮ ಗುರಿ ಇಟ್ಟುಕೊಂಡು ವಿದ್ಯಾರ್ಥಿ ಜೀವನವನ್ನು ನಡೆಸಬೇಕಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ಮೃತರಾದ ಶಾಲೆಯ ಸಂಚಾಲಕ ಎಲ್. ಎನ್. ಕೂಡೂರು ಅವರಿಗೆ ನುಡಿನಮನ ಸಲ್ಲಿಸಲಾಯಿತು. ವಿಟ್ಠಲ ಎಜುಕೇಶನಲ್ ಸೊಸೈಟಿ ಅಧ್ಯಕ್ಷ ತಿರುಮಲೇಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಆಡಳಿತ ಮಂಡಳಿ ಕೋಶಾಽಕಾರಿ ಬಾಬು ಕೊಪ್ಪಳ, ಸದಸ್ಯ ನಿತ್ಯಾನಂದ ನಾಯಕ್, ಉಪಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ, ವಿದ್ಯಾರ್ಥಿ ಸಂಘದ ಪದಾಽಕಾರಿಗಳಾದ ಪ್ರೀತೇಶ್, ಲವಿಶ್ ಶೆಟ್ಟಿ, ತಸ್ಲಿಯಾ ಮತ್ತು ಪಲ್ಲವಿ ಪಾದೆಕಲ್ಲು ಉಪಸ್ಥಿತರಿದ್ದರು.
ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಸ್ವಾಗತಿಸಿದರು. ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಮತ್ತು ಐಟಿಐ ಪ್ರಿನ್ಸಿಪಾಲ್ ರಮೇಶ್ ರೈ ವರದಿ ವಾಚಿಸಿದರು. ರೂಪಶ್ರೀ ವಂದಿಸಿದರು. ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಮುಕ್ತಾಶ್ರೀ, ಪ್ರಮೀಳಾ, ಪ್ರಕಾಶ್ ನಾಯಕ್, ಸವಿತಾ, ಸಂಪಾವತಿ, ಚಂದ್ರಕಲಾ, ಚಂದ್ರಕಾಂತ್, ಹಿತಾ, ನಳಿನಿ ಸಹಕರಿಸಿದರು.