More

  ಅನಂತ ಕುಮಾರ ಹೆಗಡೆ ಪ್ರಚಾರಕ್ಕೆ ಬರ್ತಾರಾ..?ಎಂಬ ಪ್ರಶ್ನೆಗೆ ಕಾಗೇರಿ ಉತ್ತರ

  ಕಾರವಾರ: ಸಂಸದನಾದಲ್ಲಿ ಮಲೆನಾಡು, ಕರಾವಳಿ ಎಂಬ ಬೇಧಭಾವ ಮಾಡುವುದಿಲ್ಲ. ಅಂಥ ಸಂಶಯ ಜನರಿಗೆ ಬೇಡ. ಕೆಲವರು ಸ್ವಾರ್ಥ ಸಾಧನೆಗೆ ನಾನು ತಾರತಮ್ಯ ಮಾಡಲಿದ್ದೇನೆ ಎಂಬ ಸಲ್ಲದ ಆರೋಪ ಹೊರಿಸುತ್ತಿದ್ದಾರೆ ಎಂದು ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
  ನಗರದಲ್ಲಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ನಾನು ಯಾವತ್ತೂ ಘಟ್ಟದ ಕೆಳಗೆ, ಮೇಲೆ ಎಂಬ ಬೇಧಭಾವ ಮಾಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ನಿರ್ಧಾರವೇ ಅಂತಿಮವಾಗುತ್ತದೆ ಎಂದು ಜಿಲ್ಲೆಯ ವಿಭಜನೆಯ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ನಾನು ಸದಾ ಅಭಿವೃದ್ಧಿಪರ ರಾಜಕಾರಣ ಮಾಡಿಕೊಂಡು ಬಂದವನು. ಜಿಲ್ಲೆಯ ಅಭಿವೃದ್ಧಿಯ ತಜ್ಞರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಜಾರಿ, ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಒತ್ತು ಕೊಡಲಿದ್ದೇನೆ. ಕೊಂಕಣ ರೈಲ್ವೆ , ರಾಷ್ಟಿçÃಯ ಹೆದ್ದಾರಿ, ಮೀನುಗಾರು-ನೌಕಾನೆಲೆಯ ನಡುವಿನ ವಿವಾದ, ಅರಣ್ಯ ಅತಿಕ್ರಮಣ ಸಮಸ್ಯೆಗಳನ್ನು ಬಗೆಹರಿಸಲು ಸ್ಪಂದನೆ ನೀಡಲಿದ್ದೇನೆ. ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಕೇಂದ್ರದ ಸಹಕಾರ ಕೋರಲಿದ್ದೇನೆ ಎಂದು ಹೇಳಿದರು.

  ಸಮಯ ಕೇಳಿದ್ದೇನೆ:

  ಅನಂತ ಕುಮಾರ ಹೆಗಡೆ ಸಂಸದರಾಗಿದ್ದರು. ಕೇಂದ್ರ ಸಚಿವರಾಗಿದ್ದರು. ದೇಶದ ಅಭಿವೃದ್ಧಿಗೆ ಅವರದ್ದೇ ಆದ ಶೈಲಿಯಲ್ಲಿ ಕೊಡುಗೆ ನೀಡಿದ್ದಾರೆ. ನಮ್ಮ ಜಿಲ್ಲಾಧ್ಯಕ್ಷರು, ಅವರನ್ನು ಭೇಟಿಯಾಗಿ ಸಕ್ರಿಯವಾಗಿ ಪ್ರಚಾರದಲ್ಲಿ ಭಾಗವಹಿಸುವಂತೆ ಮಾತನಾಡಿದ್ದಾರೆ. ನಾನೂ ಅವರನ್ನು ಭೇಟಿಯಾಗಲು ಸಮಯ ಕೇಳಿದ್ದೇನೆ. ಅವರ ಜತೆ ಚರ್ಚಿಸಿ, ಸಲಹೆ ಸೂಚನೆಗಳನ್ನು ಪಡೆಯುತ್ತೇನೆ. ಅವರು ಶೀಘ್ರದಲ್ಲಿ ಸಕ್ರಿಯವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುವ ಭರವಸೆ ಇದೆ. ಇನ್ನು ಶಿವರಾಮ ಹೆಬ್ಬಾರ ಅವರೂ ನಮ್ಮ ಜತೆ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
  ಸ್ಥಳೀಯ ಸಮಸ್ಯೆ ಮರೆಯಲಿದ್ದೇವೆ
  ಎನ್‌ಡಿಎ ಮೈತ್ರಿಕೂಟದಲ್ಲಿ ಜೆಡಿಎಸ್ ಸೇರಿಕೊಂಡಿರುವುದು ಕರ್ನಾಟಕದಲ್ಲಿ ನಮಗೆ ದೊಡ್ಡ ಬಲ ಬಂದಿದೆ. ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಮಾಜಿ ಪ್ರಧಾನಿ ದೇವೆಗೌಡರು ತಿಳಿಸಿದ್ದಾರೆ. ಅದೇ ರೀತಿ ಸ್ಥಳೀಯ ಏನೇ ಅಸಮಾಧಾನಗಳಿದ್ದರೂ ಮರೆತು ನಾವು ಮೋದಿಯವರನ್ನು ಪ್ರಧಾನಿಯಾಗಿಸಲು ಜೆಡಿಎಸ್ ನಾಯಕರ ಜತೆಗೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ಕಾಗೇರಿ ತಿಳಿಸಿದರು.
  ಅಪರಾಽಗಳಿಗೆ ಸಂತಸ
  ಕಾAಗ್ರೆಸ್ ಸರ್ಕಾರ ಬಂದ ನಂತರ ಅಪರಾಽ ಮನೋಭಾದವರು ತಮ್ಮ ಸರ್ಕಾರ ಬಂದಿದೆ ಎಂದು ಸಂತೋಷದಲ್ಲಿದ್ದಾರೆ. ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೇಳಿ ಬಂದಿರುವುದು ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದು ಕೋಮು ಸೌಹಾರ್ದತೆ ಕೆಡಿಸುವ ಕಾರ್ಯವಾಗುತ್ತಿದೆ.
  ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಇದ್ದರಾಮಯ್ಯ ಆಡಳಿತ ವೈಖರಿ ನೋಡಿ ಜನ ಹತಾಶರಾಗಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಹೊಸ ಅನುದಾನ ಬರುತ್ತಿಲ್ಲ. ಗ್ಯಾರಂಟಿ ಹಣ ಸಕಾಲದಲ್ಲಿ ತಲುಪುತ್ತಿಲ್ಲ. ಬರವನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿ, ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು.
  ಎಂಎಲ್‌ಸಿ ಗಣಪತಿ ಉಳ್ವೇಕರ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ನಾಯಕ, ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ, ಮಾಜಿ ವಕ್ತಾರ ನಾಗರಾಜ ನಾಯಕ, ನಾಗೇಶ ಕುರ್ಡೇಕರ್, ನಯನಾ ನೀಲಾವರ, ಗೋಪಾಲಕೃಷ್ಣ ವೈದ್ಯ, ಡಾ.ನಿತಿನ್ ಪಿಕಳೆ ಸುದ್ದಿಗೋಷ್ಠಿಯಲ್ಲಿದ್ದರು.

  ಏ.12 ರಂದು ನಾಮಪತ್ರ

  ಏಪ್ರಿಲ್‌ 12 ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಏ.4 ರಂದು ಕ್ಷೇತ್ರಕ್ಕೆ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ ಅಗರವಾಲ್‌ ಬರಲಿದ್ದಾರೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ವಿವರಿಸಿದರು. ಇದು ಬಿಜೆಪಿ ಕ್ಷೇತ್ರ, ಕಳೆದ 20 ವರ್ಷಗಳಿಂದ ಬಿಜೆಪಿ ಗೆಲ್ಲುತ್ತ ಬಂದಿದೆ. ಇದರಿಂದ ಈ ಬಾರಿಯೂ ಬಿಜೆಪಿ ಗೆಲ್ಲಲಿದೆ. ಮೋದಿ ಅವರ ಕಾರ್ಯ, ಜೆಡಿಎಸ್‌ ಸಹಕಾರ ನಮಗೆ ಬೆಂಬಲವಾಗಿದೆ ಎಂದರು.

  ವಿಡಿಯೋ ನೋಡಲು ಈ ಲಿಂಕ್‌ ಒತ್ತಿ: https://www.youtube.com/watch?v=zHNF8MnngEk

  ಇದನ್ನೂ ಓದಿ: ನೌಕಾನೆಲೆಯ ಮತಗಟ್ಟೆ ಸ್ಥಗಿತ ಏಕೆ ಗೊತ್ತಾ..?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts