ಬಾಳೆಹಣ್ಣು ತಿಂದು ಕ್ರಿಕೆಟ್​ ದಂತಕಥೆಗೆ ವಿಶಿಷ್ಟ ರೀತಿಯಲ್ಲಿ ಶುಭಕೋರಿದ ಸೆಹವಾಗ್​!

Sehwag
Published on

ಮುಂಬೈ: ಕ್ರಿಕೆಟ್​ ದಂತಕಥೆ, ಭಾರತ ರತ್ನ ಸಚಿನ್​ ತೆಂಡೂಲ್ಕರ್ ಅವರ ಜನ್ಮದಿನಕ್ಕೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹವಾಗ್ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ.

ಸೆಹವಾಗ್​ ಅಲ್ಲದೇ ಸುರೇಶ್ ರೈನಾ, ಹರ್ಭಜನ್​ ಸಿಂಗ್, ಯುವರಾಜ್​ ಸಿಂಗ್​ ಸೇರಿದಂತೆ ಕ್ರಿಕೆಟ್​ ದಿಗ್ಗಜರಿಂದ ಸಚಿನ್ ತೆಂಡೂಲ್ಕರ್ ಅವರಿಗೆ ಶುಭಾಷಯದ ಮಹಾಪೂರವೇ ಹರಿದುಬರುತ್ತಿದೆ. ಆದರೆ ಅತಿ ವಿಶಿಷ್ಟ ರೀತಿಯಲ್ಲಿ ವಿಶ್​ ಮಾಡುವ ಮೂಲಕ ಸೆಹವಾಗ್​ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಸಚಿನ್​​ ಅವರೇ ನಿಮಗೆ ಜನ್ಮ ದಿನದ ಶುಭಾಷಯಗಳು, ಪ್ರಪಂಚದ ಎಲ್ಲಾ ಸಂತೋಷವೂ ನಿಮಗೆ ಸಿಗಲಿ ಎಂದು ಹೇಳಿದ್ದಾರೆ. ಇದು ಸಾಮಾನ್ಯ ಶುಭಾಷಯ ಎನ್ನಬಹುದು. ಆದರೆ ಮುಂದುವರಿದು ನಿಮಗೆ ಬಾಳೆಹಣ್ಣನ್ನು ಉಡುಗೊರೆಯಾಗಿ ನೀಡುತ್ತಿದ್ದೆ, ನೀವಿಲ್ಲಿದ್ದಿದ್ದರೆ ಬಾಳೆಹಣ್ಣು ತಿನ್ನಬಹುದಿತ್ತು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net