ನಿಮ್ಮ ನಿರ್ಭೀತ ಚೊಚ್ಚಲ ಪಂದ್ಯದಿಂದ ಭಾರತದ... ಶಿಖರ್​ ನಿವೃತ್ತಿ ಕುರಿತು ವಿರಾಟ್​ ಹೇಳಿದ್ದಿಷ್ಟು

Virat Dhawan
Published on

ನವದೆಹಲಿ: ಭಾರತೀಯ ಕ್ರಿಕೆಟ್​ ಕಂಡ ಅತ್ಯುತ್ತಮ ಎಡಗೈ ಆರಂಭಿಕರಲ್ಲಿ ಒಬ್ಬರಾದ ಶಿಖರ್​ ಧವನ್​ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್​ಗೆ ಶನಿವಾರ ವಿದಾಯ ಘೋಷಿಸಿದ್ದಾರೆ. 38 ವರ್ಷದ ಶಿಖರ್​ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್​ ಮಾಡುವ ಮೂಲಕ ವಿದಾಯ ಘೋಷಿಸಿದ್ದರು. ಧವನ್​ ದ್ವಿಪಕ್ಷೀಯ ಸರಣಿಗಳಲ್ಲಿ ಗಳಿಸುತ್ತಿದ್ದ ರನ್​ಗಳದ್ದು ಒಂದು ತೂಕವಾದರೆ, ಐಸಿಸಿ ಟೂರ್ನಿಗಳಲ್ಲಿ ಅವರು ಗಳಿಸುತ್ತಿದ್ದ ರನ್​ಗಳದ್ದು ಬೇರೆಯದ್ದೇ ತೂಕವಾಗಿರುತ್ತಿತ್ತು. ಇದಕ್ಕಾಗಿಯೇ ಅವರನ್ನು “ಮಿಸ್ಟರ್​ ಐಸಿಸಿ’' ಎಂದೇ ಖ್ಯಾತಿ ಪಡೆದಿದ್ದರು.

ಶಿಖರ್​ ಧವನ್​ ನಿವೃತ್ತಿ ವಿಚಾರ ಪ್ರಕಟಿಸುತ್ತಿದ್ದಂತೆ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಅವರನ್ನು ಅಭಿನಂದಿಸುತ್ತಿದ್ದು, ವಿರಾಟ್​ ಕೊಹ್ಲಿ ಕೂಡ ಗಬ್ಬರ್​ಗೆ ಟ್ವೀಟ್​ ಮಾಡುವ ಮೂಲಕ ಅಭಿನಂದಿಸಿದ್ದು, ಶಿಖರ್​ಗೆ ಶುಭ ಹಾರೈಸಿದ್ದಾರೆ.

ಶಿಖರ್​ ನಿಮ್ಮ ಪದಾರ್ಪಣೆ ಪಂದ್ಯದ ನಿರ್ಭೀತ ಬ್ಯಾಟಿಂಗ್​ನಿಂದ ಹಿಡಿದು ಅತ್ಯಂತ ವಿಶ್ವಾಸಾರ್ಹ ಓಪನರ್​ಗಳಲ್ಲಿ ಒಬ್ಬರಾದ ನೀವು ನಮಗೆ ಸಾಕಷ್ಟು ನೆನಪುಗಳನ್ನು ಕೊಟ್ಟಿದ್ದೀರಿ. ಆಟದ ಮೇಲಿನ ನಿಮ್ಮ ಉತ್ಸಾಹ, ನಿಮ್ಮ ಕ್ರೀಡಾ ಮನೋಭಾವ ಮತ್ತು ಸ್ಟೈಲ್​ಅನ್ನು ನಾವು ಮಿಸ್​ ಮಾಡಿಕೊಳ್ಳುತ್ತೇವೆ. ಆದರೆ ನಿಮ್ಮ ಪರಂಪರೆಯು ಜೀವಿಸುತ್ತದೆ. ನೆನಪುಗಳು, ಮರೆಯಲಾಗದ ಪ್ರದರ್ಶನಗಳು ಮತ್ತು ಯಾವಾಗಲೂ ನಿಮ್ಮ ಹೃದಯದಿಂದ ಮುನ್ನಡೆಸಿದ್ದಕ್ಕಾಗಿ ಧನ್ಯವಾದಗಳು. ಗಬ್ಬರ್ ಮೈದಾನದ ಹೊರಗೆ ನಿಮ್ಮ ಮುಂದಿನ ಇನ್ನಿಂಗ್ಸ್‌ಗೆ ಶುಭ ಹಾರೈಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

2013ರಲ್ಲಿ ನಡೆದ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಶಿಖರ್​ ಧವನ್​ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಶಿಖರ್​ 114(94), 102*(107), 48(41), 68(92), 31(24), 68(65), 125(128), 78(83), 46( 34), 21(22) ರನ್ ಕಲೆಹಾಕಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net