blank

ವಿರಾಟ್ ಕೊಹ್ಲಿ 10ನೇ ತರಗತಿ ಅಂಕಪಟ್ಟಿ ವೈರಲ್; ವಿರಾಟ್ ಪಡೆದ ಅಂಕ ಎಷ್ಟು ಗೊತ್ತಾ| Virat kohli

blank

Virat kohli | ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಕ್ರಿಕೆಟ್ ಕಿಂಗ್ ಹಾಗೂ ದಾಖಲೆಗಳ ಸರದಾರ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ 10ನೇ ತರಗತಿಯ ಅಂಕಪಟ್ಟಿ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲ್ಯದಿಂದಲೇ ಕ್ರಿಕೆಟ್ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಕೊಹ್ಲಿ ಹಲವು ಸಂಕಷ್ಟಗಳ ನಂತರ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ ಇದೀಗ ಜನಮಾನಸದಲ್ಲಿ ಭದ್ರ ಸ್ಥಾನ ಪಡೆದಿದ್ದಾರೆ. ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಕೊಹ್ಲಿಗೆ ಅಪಾರ ಅಭಿಮಾನಿ ಬಳಗವೇ ಇದೆ.
ಕ್ರಿಕೆಟಿಗನಾಗಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವ ಕೊಹ್ಲಿ ಓದಿದ್ದು ಮಾತ್ರ ಕೇವಲ 12ನೇ ತರಗತಿ. ಆ ಬಳಿಕ ಪೂರ್ಣ ಪ್ರಮಾಣದ ಕ್ರಿಕೆಟರ್ ಆದ ವಿರಾಟ್ ಕೊಹ್ಲಿ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಪರ ಆಡಿದ್ದರು. ಆ ಬಳಿಕ ರಾಷ್ಟ್ರೀಯ ತಂಡ ಸೇರಿಕೊಂಡು ದಾಖಲೆಗಳ ಮಹಾಪೂರವನ್ನೇ ಸೃಷ್ಟಿಸಿದರು.

blank

ಇದನ್ನೂ ಓದಿ :‘ಆಪರೇಷನ್ ಸಿಂಧೂರ್’ ಭಾರತದ ಶಕ್ತಿಯ ಸಂಕೇತವಾಗಿದೆ; 2026 ರ ವೇಳೆಗೆ ಭಾರತ ನಕ್ಸಲ್ ಮುಕ್ತವಾಗಲಿದೆ; ಅಮಿತ್ ಶಾ| Opartaion sindoor

ಕೊಹ್ಲಿ ತನ್ನ ಹತ್ತನೇ ತರಗತಿಯಲ್ಲಿ ಇಂಗ್ಲಿಷ್‌ನಲ್ಲಿ 83, ಹಿಂದಿಯಲ್ಲಿ 75, ಗಣಿತದಲ್ಲಿ 51, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 55, ಸಮಾಜ ವಿಜ್ಞಾನದಲ್ಲಿ 81 ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ 74 ಅಂಕ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ ಅವರು ಗಣಿತದಲ್ಲಿ ಪಡೆದ ಅಂಕಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಎಷ್ಟೋ ವಿದ್ಯಾರ್ಥಿಗಳಂತೆ ವಿರಾಟ್ ಗೂ ಕೂಡ ಗಣಿತ ಕಬ್ಬಿಣದ ಕಡಲೆಯಾಗಿದೆ. ಇಂಗ್ಲಿಷ್, ಹಿಂದಿ ಮತ್ತು ಸಾಮಾಜಿಕ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದರೂ, ಗಣಿತ ಮತ್ತು ವಿಜ್ಞಾನದಲ್ಲಿ ಮಾತ್ರ ಕೊಹ್ಲಿ ಅತ್ಯಂತ ಕಡಿಮೆ ಅಂಕಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: ಭಾರತದ ಬ್ರಹ್ಮೋಸ್‌, ಪಾಕಿಸ್ತಾನವನ್ನು ಯಾವುದೇ ಸಮಯದಲ್ಲಾದರೂ ಹೊಡೆದುರುಳಿಸುತ್ತದೆ; ಅಮೆರಿಕ ಯುದ್ಧ ತಜ್ಞ| Brahmos missile

ಅನೇಕರು ಕೊಹ್ಲಿ ಮಾರ್ಕ್ಸ್​ಕಾರ್ಡ್​ನ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಅಂಕ ಕೇವಲ ಹಾಳೆಯಲ್ಲಿನ ಸಂಖ್ಯೆ. ನಿಜವಾದ ಮೌಲ್ಯ ಪರಿಶ್ರಮ ಮತ್ತು ಸಮರ್ಪಣೆಯಲ್ಲಿದೆ. ಸಂಪೂರ್ಣವಾಗಿ ಒಪ್ಪುತ್ತೇನೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಒಂದೇ ಕಾಗದದ ತುಂಡು ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ.
(ಏಜೆನ್ಸೀಸ್)

‘ಆಪರೇಷನ್ ಸಿಂಧೂರ್’ ಭಾರತದ ಶಕ್ತಿಯ ಸಂಕೇತವಾಗಿದೆ; 2026 ರ ವೇಳೆಗೆ ಭಾರತ ನಕ್ಸಲ್ ಮುಕ್ತವಾಗಲಿದೆ; ಅಮಿತ್ ಶಾ| Opartaion sindoor

Share This Article
blank

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

ಆಹಾರ ಸೇವಿಸುವಾಗ ಪದೇಪದೆ ಕೂದಲು ಕಾಣಿಸುತ್ತಿದಿಯೇ?: ಹಾಗಾದ್ರೆ ಸ್ವಲ್ಪ ಜಾಗರೂಕರಾಗಿ.. ಜ್ಯೋತಿಷ್ಯದಲ್ಲಿ ಹೇಳೋದೇನು? | Eating

Eating: ನಿಮ್ಮ ಆಹಾರದಲ್ಲಿ ಕೂದಲು ಮತ್ತೆ ಮತ್ತೆ ಬರುವುದು. ನಿಮ್ಮ ಆಹಾರದಲ್ಲಿ ಕೂದಲು ಉದುರುವ ಘಟನೆ…

blank