Virat Kohli: ಟೀಕೆಗಳ ನಡುವೆಯೇ ಟೀಂ ಇಂಡಿಯಾ ಮಾಜಿ ಮುಖ್ಯ ಆಯ್ಕೆದಾರ ಕೊಹ್ಲಿ ಪರ ಬ್ಯಾಟಿಂಗ್​!

Virat Kohli
Published on

ನವದೆಹಲಿ: ಭಾರತ ತಂಡದ ಮಾಜಿ ನಾಯಕ, ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ(Virat Kohli) ಬ್ಯಾಟ್‌ನಿಂದ ರನ್‌ಗಳು ಬರುತ್ತಿಲ್ಲ. ಹೀಗಾಗಿ ಅವರು ಸದ್ಯ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಿರುವಾಗಲೇ ಭಾರತ ಮುಂದಿನ ತಿಂಗಳು ಆಸ್ಟ್ರೇಲಿಯಾ ಪ್ರವಾಸ ಮಾಡಬೇಕಿದ್ದು ಅದಕ್ಕೂ ಮುನ್ನ ಕೊಹ್ಲಿ ಫಾರ್ಮ್ ಆತಂಕದ ವಿಷಯವಾಗಿಯೇ ಉಳಿದಿದೆ. ಆದರೆ ಮಾಜಿ ನಾಯಕನಿಗೆ ಮಾಜಿ ಮುಖ್ಯ ಆಯ್ಕೆದಾರರ ಬೆಂಬಲ ಸಿಕ್ಕಿದೆ.

ಕೊಹ್ಲಿ ನಾಯಕತ್ವದಲ್ಲಿ ಭಾರತ 2018-19ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು. ಇದರ ನಂತರ, ಭಾರತವು 2020-21 ರಲ್ಲಿ ಮತ್ತೊಮ್ಮೆ ಅಂತಹುದೇ ಸಾಧನೆ ಮಾಡಿದೆ. ಇದೀಗ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲುವಿನ ಹ್ಯಾಟ್ರಿಕ್ ಸಾಧಿಸುವ ಪ್ರಯತ್ನದಲ್ಲಿದೆ.

ಬಿಸಿಸಿಐನ ಮಾಜಿ ಮುಖ್ಯ ಆಯ್ಕೆಗಾರ ಸುನಿಲ್ ಜೋಶಿ ಕೊಹ್ಲಿಯನ್ನು ಬೆಂಬಲಿಸಿದ್ದು, ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸವನ್ನು ಪ್ರಬಲವಾಗಿ ಪ್ರಾರಂಭಿಸುತ್ತಾರೆ ಎಂದು ನನಗೆ ಸಾಕಷ್ಟು ವಿಶ್ವಾಸವಿದೆ. ಅವರು ಭಾರತದಲ್ಲಿ ಇನ್ನೂ ರನ್ ಗಳಿಸಿಲ್ಲದಿರಬಹುದು, ಆದರೆ ವಿರಾಟ್ ಕೊಹ್ಲಿ ದೊಡ್ಡ ತಂಡಗಳ ವಿರುದ್ಧ ಮತ್ತು ದೊಡ್ಡ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಹೇಳಿದರು.

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಒಟ್ಟು 88 ರನ್ ಗಳಿಸಿದ್ದಾರೆ. ಇದಕ್ಕೂ ಮೊದಲು ಬಾಂಗ್ಲಾದೇಶ ವಿರುದ್ಧ ಆಡಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 99 ರನ್ ಗಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net