ವಿರಾಟ್ ವಿಶ್ವದ​ ಅತ್ಯುತ್ತಮ ಟೆಸ್ಟ್ ನಾಯಕ: ಕೊಹ್ಲಿ ನೇತೃತ್ವದಲ್ಲಿ ಭಾರತ ಎಷ್ಟು ಪಂದ್ಯಗಳನ್ನು ಗೆದ್ದಿದೆ ಗೊತ್ತಾ? Virat Kohli

Virat Kohli

Virat Kohli : ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​, ದಾಖಲೆಗಳ ಸರದಾರ, ರನ್ ಮೆಷಿನ್​ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ಇಂದು (ಮೇ 12) ನಿವೃತ್ತಿ ಘೋಷಿಸಿದ್ದಾರೆ. ಕೊಹ್ಲಿಯ ಈ ಒಂದು ನಿರ್ಧಾರ ಅಸಂಖ್ಯಾತ ಅಭಿಮಾನಿಗಳಿಗೆ ನೋವಿನ ಸಂಗತಿಯಾಗಿದೆ. ರೋಹಿತ್​ ಶರ್ಮ ಬೆನ್ನಲ್ಲೇ ಕೊಹ್ಲಿ ಕೂಡ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿರುವುದು ದಿಗ್ಗಜ ಕ್ರಿಕೆಟಿಗರ ಯುಗಾಂತ್ಯವಾಗಿದೆ. ಇನ್ನು ಮುಂದೆ ಟೀಮ್​ ಇಂಡಿಯಾದಲ್ಲಿ ಅನುಭವಿ ಆಟಗಾರರ ಕೊರತೆ ಕಾಡಲಿದೆ. ಸದ್ಯ ಕೊಹ್ಲಿ ಮತ್ತು ರೋಹಿತ್​ ಕೆಲ ಕಾಲ ಏಕದಿನ ಸ್ವರೂಪದಲ್ಲಿ ಮುಂದುವರಿಯಲಿದ್ದಾರೆ.

blank

ಅಂದಹಾಗೆ, ವಿರಾಟ್​ ಕೊಹ್ಲಿ ಅವರು ಟೀಮ್ ಇಂಡಿಯಾ ಪರ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 46.9 ಸರಾಸರಿಯಲ್ಲಿ 9230 ರನ್ ಗಳಿಸಿದ್ದು, ಇದರಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳು ಸೇರಿವೆ. ಅವರ ಗರಿಷ್ಠ ಸ್ಕೋರ್ ಅಜೇಯ 254 ರನ್​.

ವಿರಾಟ್ ಕೊಹ್ಲಿ ಓರ್ವ ಆಟಗಾರನಾಗಿ ಮಾತ್ರವಲ್ಲದೆ ನಾಯಕನಾಗಿಯೂ ಟೀಮ್ ಇಂಡಿಯಾಕ್ಕೆ ಅನೇಕ ಉತ್ತಮ ಗೆಲುವುಗಳನ್ನು ನೀಡಿದ್ದಾರೆ. ಅವರ ನಾಯಕತ್ವದಲ್ಲಿ, ಟೀಮ್ ಇಂಡಿಯಾ ಟೆಸ್ಟ್‌ ಆಡುವ ರೀತಿ ಬದಲಾಯಿತು. ಕೊಹ್ಲಿ ಅವರು ದೀರ್ಘ ಸ್ವರೂಪದ ಕ್ರಿಕೆಟ್​ ತೀವ್ರತೆಯನ್ನು ತಂದರು. ಫಿಟ್‌ನೆಸ್ ಮುಖ್ಯ ಎಂದು ಹೇಳಿಕೊಟ್ಟರು. ಹಿಂದೆಂದೂ ಕಾಣದ ರೀತಿಯಲ್ಲಿ ವೇಗದ ಬೌಲಿಂಗ್ ಅನ್ನು ಉತ್ತೇಜಿಸಿದರು. ಟೀಮ್ ಇಂಡಿಯಾ ಜಗತ್ತಿನ ಎಲ್ಲಿಯಾದರೂ ಸ್ಪರ್ಧಿಸಬಹುದು ಮತ್ತು ಗೆಲ್ಲಬಹುದು ಎಂಬ ನಂಬಿಕೆಯನ್ನು ಕೊಹ್ಲಿ ಹುಟ್ಟುಹಾಕಿದರು.

2014ರಲ್ಲಿ ಎಂಎಸ್ ಧೋನಿ ಅವರಿಂದ ವಿರಾಟ್ ಕೊಹ್ಲಿ ಅಧಿಕಾರ ವಹಿಸಿಕೊಂಡರು. ಕೊಹ್ಲಿ ನಾಯಕತ್ವದಲ್ಲಿ ಭಾರತ 68 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಪೈಕಿ 40 ಪಂದ್ಯಗಳನ್ನು ಗೆದ್ದಿದೆ. ಬೇರೆ ಯಾವ ನಾಯಕನೂ ಭಾರತಕ್ಕೆ ಇಷ್ಟೊಂದು ಗೆಲುವುಗಳನ್ನು ನೀಡಿಲ್ಲ. ಕೊಹ್ಲಿ ನಾಯಕತ್ವದಲ್ಲಿ ಭಾರತ 17 ಪಂದ್ಯಗಳನ್ನು ಸೋತಿದ್ದರೆ, 11 ಪಂದ್ಯಗಳು ಡ್ರಾ ಆಗಿವೆ. ನಾಯಕನಾಗಿ ಕೊಹ್ಲಿಯ ಗೆಲುವಿನ ಶೇಕಡಾವಾರು 58.82. ಇದು ಕೇವಲ ಭಾರತೀಯ ನಾಯಕರಲ್ಲಿ ಮಾತ್ರ ಅತ್ಯುತ್ತಮವಾದದ್ದಲ್ಲ, ವಿಶ್ವದ ಅತ್ಯುತ್ತಮ ನಾಯಕರಲ್ಲಿ ಕೊಹ್ಲಿಯೂ ಒಬ್ಬರು.

ಭಾರತಕ್ಕೆ ಟೆಸ್ಟ್‌ನಲ್ಲಿ ಅತಿ ಹೆಚ್ಚು ಗೆಲುವುಗಳನ್ನು ನೀಡಿದ ನಾಯಕರಲ್ಲಿ ವಿರಾಟ್​ ಕೊಹ್ಲಿ ಅವರು ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ನೇತೃತ್ವದಲ್ಲಿ ಭಾರತ 68 ಪಂದ್ಯಗಳಲ್ಲಿ 40 ಗೆಲುವುಗಳು ಕಂಡಿದ್ದರೆ, ಎಂಎಸ್ ಧೋನಿ ನಾಯಕತ್ವದ ಅಡಿಯಲ್ಲಿ 60 ಪಂದ್ಯಗಳಲ್ಲಿ 27 ಗೆಲುವುಗಳನ್ನು ಕಂಡಿದೆ. ಸೌರವ್ ಗಂಗೂಲಿ ನಾಯಕತ್ವದಲ್ಲಿ 49 ಪಂದ್ಯಗಳಲ್ಲಿ ಭಾರತ 21 ಗೆಲುವುಗಳನ್ನು ಸಾಧಿಸಿದೆ.

ಇದನ್ನೂ ಓದಿ: ಈ 3 ರಾಶಿಯವರು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ! ನಿಮ್ಮದೂ ಇದೇ ರಾಶಿನಾ? Zodiac Signs

ಒಟ್ಟಾರೆಯಾಗಿ, ಗ್ರೇಮ್ ಸ್ಮಿತ್ (53), ರಿಕಿ ಪಾಂಟಿಂಗ್ (48) ಮತ್ತು ಸ್ಟೀವ್ ವಾ (41) ಮಾತ್ರ ಕೊಹ್ಲಿಗಿಂತ ನಾಯಕರಾಗಿ ಹೆಚ್ಚು ಟೆಸ್ಟ್ ಗೆಲುವುಗಳನ್ನು ಗಳಿಸಿದ್ದಾರೆ.

ಕೊಹ್ಲಿ ಭಾವುಕ ವಿದಾಯ

ಇಂದು ನಿವೃತ್ತಿ ಘೋಷಣೆ ಮಾಡಿದ ಕೊಹ್ಲಿ, ಇನ್​ಸ್ಟಾಗ್ರಾಂನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಮೊದಲ ಬಾರಿಗೆ ಬ್ಯಾಗಿ ಬ್ಲೂ ಧರಿಸಿ 14 ವರ್ಷಗಳಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸ್ವರೂಪವು ನನ್ನನ್ನು ಕರೆದೊಯ್ಯುವ ಪ್ರಯಾಣವನ್ನು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿತು, ನನ್ನನ್ನು ರೂಪಿಸಿತು ಮತ್ತು ನಾನು ಜೀವನಪರ್ಯಂತ ನನ್ನೊಂದಿಗೆ ತೆಗೆದುಕೊಂಡು ಹೋಗಬಹುದಾದ ಪಾಠಗಳನ್ನು ಕಲಿಸಿತು.

ಬಿಳಿ ಉಡುಪಿನಲ್ಲಿ ಆಡುವುದೆಂದರೆ ಅದೊಂದು ರೀತಿಯಲ್ಲಿ ಆಳವಾದ ವೈಯಕ್ತಿಕ ಬಂಧವಿದೆ. ಶಾಂತವಾದ ಜಂಜಾಟ, ದೀರ್ಘಾವಧಿ ಹಾಗೂ ಯಾರೂ ನೋಡದ ಆದರೆ ಶಾಶ್ವತವಾಗಿ ನಿಮ್ಮೊಂದಿಗೆ ಉಳಿಯುವ ಸಣ್ಣ ಕ್ಷಣಗಳು ಈ ಸ್ವರೂಪದಲ್ಲಿವೆ. ನಾನು ಈ ಸ್ವರೂಪದಿಂದ ದೂರ ಸರಿಯುವುದು ಸುಲಭವಲ್ಲ ಅನಿಸುತ್ತಿತ್ತು. ಆದರೆ, ಇದು ಸರಿಯಾದ ನಿರ್ಧಾರ ಅನಿಸುತ್ತದೆ. ನಾನು ನನ್ನಲ್ಲಿದ್ದ ಎಲ್ಲವನ್ನೂ ಈ ಸ್ವರೂಪಕ್ಕೆ ನೀಡಿದ್ದೇನೆ ಮತ್ತು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಟೆಸ್ಟ್​ ಕ್ರಿಕೆಟ್ ನನಗೆ ಹಿಂತಿರುಗಿಸಿದೆ. ಈ ಟೆಸ್ಟ್​ ಸ್ವರೂಪಕ್ಕಾಗಿ ಹಾಗೂ ನನ್ನೊಂದಿಗೆ ಮೈದಾನ ಹಂಚಿಕೊಂಡ ಜನರಿಗೂ ಮತ್ತು ಈ ಪ್ರಯಾಣದಲ್ಲಿ ನನ್ನೊಂದಿಗೆ ಸಾಗಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಕೃತಜ್ಞತೆ ಸಲ್ಲಿಸುತ್ತಾ ತುಂಬಿದ ಹೃದಯದಿಂದ ಹೊರಡುತ್ತಿದ್ದೇನೆ. ನನ್ನ ಟೆಸ್ಟ್ ವೃತ್ತಿಜೀವನವನ್ನು ನಾನು ಯಾವಾಗಲೂ ನಗುವಿನೊಂದಿಗೆ ನೆನಪಿಸಿಕೊಳ್ಳುತ್ತೇನೆ ಎಂದು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಮೂಲಕ ವಿರಾಟ್​ ಕೊಹ್ಲಿ ಭಾವುಕ ವಿದಾಯ ಹೇಳಿದ್ದಾರೆ. (ಏಜೆನ್ಸೀಸ್​)

 

View this post on Instagram

 

A post shared by Virat Kohli (@virat.kohli)

ಎಂದಿಗೂ ಊಹಿಸಿರಲಿಲ್ಲ… ರೋಹಿತ್ ಬೆನ್ನಲ್ಲೇ ಟೆಸ್ಟ್​ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ರನ್​ ಮೆಷಿನ್​ ವಿರಾಟ್​ ಕೊಹ್ಲಿ! Virat Kohli

ಆ ದಿನ ನಾನು ಏಕದಿನ ಮಾದರಿಗೂ ವಿದಾಯ ಹೇಳ್ತೀನಿ… ರೋಹಿತ್ ಶರ್ಮರ ಅಚ್ಚರಿ ಹೇಳಿಕೆ ವೈರಲ್​! Rohit Sharma

Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank