18ನೇ ಆವೃತ್ತಿ, 18ನೇ ವರ್ಷ, ಜೆರ್ಸಿ ನಂ.18! 'ಕಿಂಗ್' ಕೊಹ್ಲಿ ಕುರಿತು ಮಾಜಿ ಸಿಎಸ್​ಕೆ ಆಟಗಾರ ಗುಣಗಾನ | Virat Kohli

ವಿಜಯವಾಣಿ - 2025-05-31T115859.239
Published on

Virat Kohli: ಐಪಿಎಲ್ 18ನೇ ಆವೃತ್ತಿಯು ಇದೀಗ ಕೊನೆಯ ಹಂತ ತಲುಪಿದ್ದು, ಆರ್​ಸಿಬಿ ನೇರವಾಗಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಸೀಸನ್​ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತ ಬಂದಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಕ್ವಾಲಿಫೈಯರ್​-2 ಪಂದ್ಯದಲ್ಲಿ ಯಾರು ತಮ್ಮ ಎದುರು ಫೈನಲ್ ಕಾಳಗದಲ್ಲಿ ಆಡುತ್ತಾರೆ ಎಂಬ ಕುತೂಹಲದಲ್ಲಿದೆ. ಈ ಸಂಗತಿ ಸದ್ಯ ಆರ್​ಸಿಬಿ ಅಭಿಮಾನಿ ಬಳಗಕ್ಕೆ ಕಾಡುತ್ತಿದ್ದು, ಭಾರೀ ವಿಶೇಷತೆಗಳಿಂದ ಕೂಡಿರುವ 18ನೇ ಸೀಸನ್​ನಲ್ಲಿ ಚೊಚ್ಚಲ ಕಪ್​ ಗೆಲ್ಲಲೇಬೇಕು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಏನಿದು 18 ವಿಶೇಷತೆ

2008ರಿಂದ ಶುರುವಾದ ಐಪಿಎಲ್​ ಆವೃತ್ತಿಯಲ್ಲಿ ಒಂದೇ ತಂಡದ ಪರ ಆಡುತ್ತಿರುವ ವಿರಾಟ್​ ಕೊಹ್ಲಿ, ಈ ವರ್ಷದ 18ನೇ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನ ನೀಡಿ, ಎಲ್ಲರ ಗಮನ ಸೆಳೆದಿದ್ದಾರೆ. ತಂಡದ ಆಟಗಾರರು ಮತ್ತು ಅಭಿಮಾನಿಗಳ ಉತ್ಸಾಹವನ್ನು ತಮ್ಮ ಆಟದ ವೈಖರಿ ಮತ್ತು ಹುರಿದುಂಬಿಸುವ ಚೀರಾಟದಿಂದಲೇ ಹೆಚ್ಚಿಸುವ ಕಿಂಗ್​ ಕೊಹ್ಲಿ, ತಮ್ಮ ದಾಖಲೆಗಳನ್ನು ಐಪಿಎಲ್​ನಲ್ಲಿಯೂ ಮುಂದುವರಿಸಿದ್ದಾರೆ. ಇದು ಫ್ಯಾನ್ಸ್​ಗಳ ಅಭಿಮಾನ, ಪ್ರೀತಿ ಮತ್ತು ಉತ್ಸಾಹವನ್ನು ಸದಾ ಹಸಿರಾಗಿರುವಂತೆ ಮಾಡಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.

'ಚಿನ್ನ ತಲಾ' ಗುಣಗಾನ

"ಐಪಿಎಲ್​ 18ನೇ ಆವೃತ್ತಿಯ ಟ್ರೋಫಿಯನ್ನು ಆರ್​ಸಿಬಿ ಗೆಲ್ಲಲಿದೆ ಮತ್ತು ಗೆಲ್ಲಬೇಕು ಎಂಬುದೇ ನನ್ನ ಆಶಯ" ಎಂದು ಮಾಜಿ ಸಿಎಸ್​ಕೆ ಆಟಗಾರ, 'ಚಿನ್ನ ತಲಾ' ಸುರೇಶ್ ರೈನಾ ಅಭಿಪ್ರಾಯಿಸಿದ್ದಾರೆ. "ನಂ.18 ಮತ್ತು ವಿರಾಟ್​ ಕೊಹ್ಲಿಗೆ ಅವಿನಾಭಾವ ಸಂಬಂಧವಿದೆ. ಅದರಲ್ಲಿ ಗೆಲುವಿನ ಗುಟ್ಟು, ಗಂಟಿದೆ. ಕಳೆದ 18 ವರ್ಷಗಳಿಂದ ಆರ್​ಸಿಬಿ ಪರ ಆಡಿರುವ ಕೊಹ್ಲಿ, ತಂಡದ ಯಶಸ್ಸಿಗೆ ದೊಡ್ಡ ಹಾಗೂ ಪ್ರಮುಖ ಕಾರಣ ಎಂದರೆ ಖಂಡಿತ ತಪ್ಪಾಗಲಾರದು. ರಜತ್ ಪಟೀದಾರ್​ ತಮಗೆ ಕೊಟ್ಟ ನಾಯಕತ್ವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ" ಎಂದು ರೈನಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net