More

    ಫಾರ್ಮ್​ಹೌಸ್​ನಲ್ಲಿ ಕ್ರಿಕೆಟ್​ ಪಿಚ್​ ನಿರ್ಮಿಸುವ ಸುದ್ದಿ ಬಗ್ಗೆ ವಿರಾಟ್​ ಕೊಹ್ಲಿ ನೀಡಿದ ಪ್ರತಿಕ್ರಿಯೆ ಹೀಗಿದೆ…

    ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಮತ್ತು ಬಾಲಿವುಡ್​ ತಾರೆ ಅನುಷ್ಕಾ ಶರ್ಮ ದಂಪತಿ ಮುಂಬೈ ಹೊರವಲಯದ ಆಲಿಬಾಗ್​ನಲ್ಲಿ 19.24 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿರುವ 7.45 ಏಕರೆ ಭೂಮಿಯಲ್ಲಿ ಫಾರ್ಮ್​ಹೌಸ್ ನಿರ್ಮಿಸಲು ಸಿದ್ಧತೆಗಳನ್ನು ನಡೆಸುತ್ತಿದೆ. ವಿರೂಷ್ಕಾ ದಂಪತಿ ಇತ್ತೀಚೆಗೆ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿತ್ತು. ಈ ನಡುವೆ ಫಾರ್ಮ್​ಹೌಸ್​ನಲ್ಲಿ ವಿರಾಟ್​ ಕೊಹ್ಲಿ ತನ್ನ ಬ್ಯಾಟಿಂಗ್​ ಅಭ್ಯಾಸಕ್ಕೆ ಅನುಕೂಲಕರವೆನಿಸುವಂತೆ ಕ್ರಿಕೆಟ್​ ಪಿಚ್​ ಕೂಡ ನಿರ್ಮಿಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ವಿರಾಟ್​ ಕೊಹ್ಲಿ ಈ ಸುದ್ದಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

    ಅಲ್ಲದೆ, ಆಂಗ್ಲ ಪತ್ರಿಕೆಯೊಂದು ಈ ಬಗ್ಗೆ ಪ್ರಕಟಿಸಿರುವ ವರದಿಯನ್ನು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿರುವ ಕೊಹ್ಲಿ, “ನಾನು ಬಾಲ್ಯದಿಂದ ಓದಿಕೊಂಡು ಬರುತ್ತಿದ್ದ ಪತ್ರಿಕೆಯೂ ಈಗ ಸುಳ್ಳು ಸುದ್ದಿಗಳನ್ನು ಪ್ರಕಟಿಸಲಾರಂಭಿಸಿದೆ’ ಎಂದು ಕಿಡಿಕಾರಿದ್ದಾರೆ.

    ಕಳೆದೊಂದು ವಾರದಲ್ಲಿ ಕೊಹ್ಲಿ ಮಾಧ್ಯಮ ವರದಿಗೆ 2ನೇ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಕೊಹ್ಲಿ ಇತ್ತೀಚೆಗಷ್ಟೇ, ಇನ್​ಸ್ಟಾಗ್ರಾಂನ ಪ್ರತಿ ಪ್ರಾಯೋಜಿತ ಪೋಸ್ಟ್​ನಿಂದ ತಾನು 11.45 ಕೋಟಿ ರೂ. ಗಳಿಸುತ್ತೇನೆ ಎಂಬ ವರದಿಯನ್ನೂ ತಳ್ಳಿಹಾಕಿದ್ದರು.

    ಅತ್ಯಂತ ಸಾಧಾರಣ ತಂಡವೆಂದು ಟೀಮ್​ ಇಂಡಿಯಾವನ್ನು ತೆಗಳಿದ ವೆಂಕಟೇಶ್​ ಪ್ರಸಾದ್​

    ಸೋಲು ಒಳ್ಳೆಯದೇ ಎಂದು ಟೀಕೆಗೆ ಗುರಿಯಾದ ಹಾರ್ದಿಕ್​ ಪಾಂಡ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts