ಕೊಹ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್! ಸ್ಟಾರ್ ಬ್ಯಾಟರ್​ನ ಮುಂದಿದೆ ದೊಡ್ಡ ಗುರಿ; ನಿವೃತ್ತಿಯ ಎಲ್ಲಾ ಊಹಾಪೋಹಗಳಿಗೂ ತೆರೆ : Kohli

Virat Kohli
Published on

Kohli | ಟೀಂ ಇಂಡಿಯಾ ಸೂಪರ್ ಸ್ಟಾರ್ ಕಿಂಗ್​ ಕೊಹ್ಲಿ ತನ್ನ ಅಭಿಮಾನಿಗಳಿಗೆ ಗುಡ್​ನ್ಯೂಸ್​ ನೀಡಿದ್ದಾರೆ. 2025 ರ ಚಾಂಪಿಯನ್ಸ್ ಟ್ರೋಫಿಗೆ ವಿರಾಟ್ ಮಹತ್ವದ ಕೊಡುಗೆ ನೀಡಿದ್ದು, ಮುಂದಿನ ವಿಶ್ವಕಪ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದಾಗಿ ಕಾಡುತ್ತಿದ್ದ ಗೊಂದಲಕ್ಕೆ ಕೊಹ್ಲಿ ತೆರೆ ಎಳೆದಿದ್ದಾರೆ. ವಿರಾಟ್​ ಕೊಹ್ಲಿ ವಿಶ್ವಕಪ್ ಗೆಲ್ಲುವುದೇ ತಮ್ಮ ಪ್ರಮುಖ ಗುರಿ ಎಂದಿದ್ದು, ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇನ್ನೂ ಎಷ್ಟು ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳಬಹುದು ಎಂಬ ಚರ್ಚೆ ಶುರುವಾಗಿತ್ತು. ರೋಹಿತ್ ಶರ್ಮಾ ಅವರಂತೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ನಾನೆಲ್ಲೂ ಹೋಗೋದಿಲ್ಲ, ಏಕದಿನ ಮಾದರಿಯಿಂದ ನಿವೃತ್ತಿಯಾಗುವ ಯಾವ ಯೋಚನೆಯನ್ನೂ ಮಾಡಿಲ್ಲ ಎಂದು ಹೇಳಿದ್ದರು. ಇನ್ನೂ ಮುಂದಿನ ವಿಶ್ವಕಪ್ ಬಗ್ಗೆ ಕೇಳಿದಾಗ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರಿಸಿದ್ದರು. ಈ ವೇಳೆ ಅವರು ಮುಂದಿನ ಏಕದಿನ ವಿಶ್ವಕಪ್​ವರೆಗೂ ತಂಡದಲ್ಲಿ ಆಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಅವರು ತನ್ನ ತನ್ನ ಮುಂದಿನ ದೊಡ್ಡ ಹೆಜ್ಜೆಯ ಬಗ್ಗೆ ಸ್ಪಷ್ಟ ಮಾತುಗಳನ್ನು ಹಾಡಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 2027ರ ಏಕದಿನ ವಿಶ್ವಕಪ್ ಗೆಲ್ಲುವುದೇ ನನ್ನ ದೊಡ್ಡ ಗುರಿ ಎಂದು ತಿಳಿಸಿದ್ದಾರೆ. ಅವರ ಈ ಹೇಳಿಕೆ ವಿರಾಟ್​ ಮುಂದಿನ ಮುಂದಿನ ವಿಶ್ವಕಪ್ ನಲ್ಲಿ ಆಡುವುದನ್ನು ಖಚಿತ ಪಡಿಸಿದೆ.

ವಿರಾಟ್ ಹೇಳಿದ್ದು ಹೀಗೆ;

ನಿಮ್ಮ ಮುಂದಿನ ದೊಡ್ಡ ಹೆಜ್ಜೆ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ವಿರಾಟ್​ ಕೊಹ್ಲಿ, ಮುಂದಿನ ದೊಡ್ಡ ಹೆಜ್ಜೆ ಯಾವುದೆಂದು ನನಗೆ ಗೊತ್ತಿಲ್ಲ. ಬಹುಷಃ ಅದು ಮುಂದಿನ ವಿಶ್ವಕಪ್​ಅನ್ನು ಗೆಲ್ಲುವುದೇ ಇರಬಹುದು ಎಂದು ತಿಳಿಸಿದರು. ಅಲ್ಲಿಗೆ ಅವರು 2027ರ ವಿಶ್ವಕಪ್ ಮುಗಿಯುವವರೆಗೂ ನಿವೃತ್ತಿಯ ಬಗ್ಗೆ ಯಾವುದೇ ಯೋಚನೆಯನ್ನು ಮಾಡಿಲ್ಲ ಎಂಬುದನ್ನು ಸಾಬೀತುಪಡಿಸಿದಂತಿದೆ. ಇನ್ನೂ ಎಪ್ರಿಲ್ 2ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯಕ್ಕಾಗಿ ವಿರಾಟ್​ ಸಜ್ಜಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net