ಅನುಷ್ಕಾ, ಕೊಹ್ಲಿಯನ್ನು ಕೆಫೆಯಿಂದ ಹೊರಹೋಗುವಂತೆ ಹೇಳಿದ ಸಿಬ್ಬಂದಿ! ಕಾರಣವೇನು ಗೊತ್ತಾ? Virat Kohli

Virat-Kohli-and-Anushka-Sharma
Published on

Virat Kohli: ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಇತ್ತೀಚೆಗೆ ನ್ಯೂಜಿಲೆಂಡ್‌ನಲ್ಲಿರುವ ಕೆಫೆಯೊಂದರಿಂದ ಹೊರಗೆ ಹೋಗುವಂತೆ ಸಿಬ್ಬಂದಿ ಹೇಳಿದ್ದರು ಎಂದು ವರದಿಯಾಗಿದೆ. ಈ ಸುದ್ದಿಯ ಅಸಲಿ ಸಂಗತಿ ಏನು ಎಂದು ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಭಾರತೀಯ ಮಹಿಳಾ ತಂಡ ನ್ಯೂಜಿಲೆಂಡ್ ಪ್ರವಾಸ ಮಾಡಿತ್ತು. ಅದೇ ಸಮಯದಲ್ಲಿ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಕೂಡ ಆ ದೇಶದಲ್ಲಿದ್ದರು. ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಕೊಹ್ಲಿಯನ್ನು ಕೆಫೆಗೆ ಆಹ್ವಾನಿಸಿದರು. ಅವರ ಆಹ್ವಾನದ ಮೇರೆಗೆ, ಅನುಷ್ಕಾ ಕೂಡ ಕೊಹ್ಲಿಯೊಂದಿಗೆ ಬಂದರು.

ಈ ವೇಳೆ ರೊಡ್ರಿಗಸ್ ಜೊತೆಗೆ, ಸ್ಟಾರ್ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ, ಕೊಹ್ಲಿ ಮತ್ತು ಅನುಷ್ಕಾ ಅವರನ್ನು ಭೇಟಿಯಾದರು. ಈ ನಾಲ್ವರು ಜನರು ಒಟ್ಟಿಗೆ ಸೇರಿ ಆ ಕೆಫೆಯಲ್ಲಿ ಹರಟೆ ಹೊಡೆಯುತ್ತಿದ್ದರು. ಅವರು ಸಮಯ ತಿಳಿಯದೆ ಕ್ರಿಕೆಟ್, ವೈಯಕ್ತಿಕ ಜೀವನ, ವೃತ್ತಿ ಬೆಳವಣಿಗೆ ಮತ್ತು ಇತರ ಹಲವು ವಿಷಯಗಳ ಬಗ್ಗೆ ಮಾತನಾಡುತ್ತಲೇ ಇದ್ದರು.. ಹೀಗೆ, ಅವರು 4 ಗಂಟೆಗಳ ಕಾಲ ಮಾತನಾಡುತ್ತಲೇ ಇದ್ದರು.

ಕೆಫೆ ಆಡಳಿತ ಮಂಡಳಿಯವರು ಕೊಹ್ಲಿ ಮತ್ತು ಅನುಷ್ಕಾ ಅವರನ್ನು ಹೊರಹೋಗುವಂತೆ ಕೇಳಿದಾಗ ಅವರು ನಗುತ್ತಾ ಕೆಫೆಯನ್ನು ಮುಚ್ಚುವ ಸಮಯ ಬಂದಿದೆ ಎಂದು ಜೆಮಿಯಾ ರೊಡ್ರಿಗಸ್ ಮಾಷಬಲ್ ಇಂಡಿಯಾದ ಯೂಟ್ಯೂಬ್ ಸರಣಿ ದಿ ಬಾಂಬೆ ಜರ್ನಿಯಲ್ಲಿ ಕಾಣಿಸಿಕೊಂಡಿದ್ದ ರೊಡ್ರಿಗಸ್ ಇದನ್ನು ಬಹಿರಂಗಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net