

ಮುಂಬೈ : ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಕರೊನಾ ಲಸಿಕೆ ಪಡೆದಿದ್ದಾರೆ. ಅಷ್ಟೇ ಅಲ್ಲ, ಲಸಿಕೆ ಪಡೆಯುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ಎಲ್ಲರೂ ನಿಮಗೆ ಸಾಧ್ಯವಾದಷ್ಟು ಬೇಗ ಲಸಿಕೆ ಪಡೆದುಕೊಳ್ಳಿ ಎಂದು ಕರೆ ನೀಡಿದ್ದಾರೆ.
ಮತ್ತೊಬ್ಬ ಕ್ರಿಕೆಟಿಗ ಇಶಾಂತ್ ಶರ್ಮ ಕೂಡ ತಾವು ಲಸಿಕೆ ಪಡೆದ ಬಗ್ಗೆ ನೆಟ್ಟಿಗರಿಗೆ ತಿಳಿಸಿದ್ದಾರೆ. "ಲಸಿಕೆ ಪಡೆದಾಯಿತು. ಇದಕ್ಕಾಗಿ ಧನ್ಯವಾದಗಳು. ಎಲ್ಲಾ ಅವಶ್ಯಕ ಕರ್ಮಚಾರಿಗಳಿಗೆ ಋಣಿಯಾಗಿದ್ದೇನೆ. ಲಸಿಕಾ ಕೇಂದ್ರದ ಉತ್ತಮ ನಿರ್ವಹಣೆ ಮತ್ತು ಸುಗಮ ಕಾರ್ಯಾಚರಣೆ ನೋಡಿ ಸಂತೋಷವಾಯಿತು. ಎಲ್ಲರೂ ಆದಷ್ಟು ಬೇಗ ಲಸಿಕೆ ಪಡೆಯೋಣ" ಎಂದು ಶರ್ಮ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)