More

    ಮಗುವಿನ ಆಟಿಕೆ ಖರೀದಿಗಾಗಿ ಬಯೋ-ಬಬಲ್ ಬ್ರೇಕ್ ಮಾಡಿದ್ದರೇ ಕೊಹ್ಲಿ, ಪಾಂಡ್ಯ?

    ಮೆಲ್ಬೋರ್ನ್: ರೋಹಿತ್ ಸಹಿತ ಐವರು ಕ್ರಿಕೆಟಿಗರು ಮಾರ್ಗಸೂಚಿ ಉಲ್ಲಂಘಿಸಿರುವ ಆರೋಪದ ನಡುವೆ, ಈಗಾಗಲೆ ತವರಿಗೆ ಮರಳಿರುವ ನಾಯಕ ವಿರಾಟ್ ಕೊಹ್ಲಿ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಈ ಹಿಂದೆ ಇಂಥದ್ದೇ ಉಲ್ಲಂಘನೆ ಮಾಡಿದ್ದರು ಎಂದು ಆಸೀಸ್ ಮಾಧ್ಯಮಗಳು ದೂರಿವೆ.

    ಡಿಸೆಂಬರ್ 7ರಂದು ಸಿಡ್ನಿಯಲ್ಲಿ ಮಗುವಿನ ಆಟದ ಸಾಮಾನು ಖರೀದಿಗೆ ಅಂಗಡಿಯೊಂದಕ್ಕೆ ತೆರಳಿದ್ದ ಕೊಹ್ಲಿ, ಪಾಂಡ್ಯ ಅಲ್ಲಿನ ಸಿಬ್ಬಂದಿ ಜತೆಗೆ ನಿಂತು ಚಿತ್ರಗಳಿಗೆ ಪೋಸ್ ನೀಡಿದ್ದರು. ಅವರಿಬ್ಬರು ಅಂಗಡಿಗೆ ಭೇಟಿ ನೀಡಿರುವುದು ಕೋವಿಡ್-19 ಮಾರ್ಗಸೂಚಿಯ ಉಲ್ಲಂಘನೆಯಾಗಿದೆ ಎಂದು ‘ದಿ ಏಜ್’ ವರದಿ ಮಾಡಿದೆ. ಅಲ್ಲದೆ ಕೊಹ್ಲಿ, ಪಾಂಡ್ಯ ಮಳಿಗೆಯೊಳಗೆ ಮಾಸ್ಕ್ ಕೂಡ ಧರಿಸಿರಲಿಲ್ಲ ಎಂದು ಚಿತ್ರ ಸಹಿತ ಆರೋಪಿಸಿದೆ.

    ಇದನ್ನೂ ಓದಿ: ಕೊನೇಕ್ಷಣದಲ್ಲಿ ಒಲಿದ ಅದೃಷ್ಟ, ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ತಂಡಕ್ಕೆ ಸೇರ್ಪಡೆ

    ಹಾರ್ದಿಕ್ ಪಾಂಡ್ಯ ಕಳೆದ ಜುಲೈನಲ್ಲೇ ಗಂಡು ಮಗುವಿನ ತಂದೆಯಾಗಿದ್ದರೆ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಈ ತಿಂಗಳು ಚೊಚ್ಚಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದೆ. ಹೀಗಾಗಿ ಇಬ್ಬರೂ ಆಸೀಸ್‌ನಿಂದ ಮಗುವಿಗಾಗಿ ಹಲವಾರು ಆಟಿಕೆಗಳನ್ನು ತಂದಿದ್ದಾರೆ. ಕೊಹ್ಲಿಯಂತೂ ದೊಡ್ಡ ಮೊತ್ತದ ಆಟಿಕೆಗಳನ್ನೇ ಖರೀದಿ ಮಾಡಿದ್ದಾರೆ ಎಂದು ಹೇಳಲಾಗಿದೆ.

    ಈ ನಡುವೆ ಆಸೀಸ್ ಮಾಧ್ಯಮಗಳು ಕಳೆದ ತಿಂಗಳು ಆಗಿರುವ ಬಯೋ-ಬಬಲ್ ಉಲ್ಲಂಘನೆಯ ಬಗ್ಗೆ ಈಗ ಯಾಕೆ ವರದಿ ಮಾಡುತ್ತಿವೆ ಎಂದೂ ಕೆಲ ಭಾರತೀಯ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಮಾರ್ಗಸೂಚಿ ಉಲ್ಲಂಘನೆ ಆಗಿದ್ದರೆ ಆಗಲೇ ಯಾಕೆ ಅದನ್ನು ಗಮನಕ್ಕೆ ತಂದಿರಲಿಲ್ಲ. ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಭಾರತ ತಂಡ ಆತಿಥೇಯರಿಗೆ ಸೋಲುಣಿಸಿ ತಿರುಗೇಟು ನೀಡಿದ ಬಳಿಕ ಯಾಕೆ ಅದು ನೆನಪಾಗಿದೆ ಎಂದು ಪ್ರಶ್ನಿಸುತ್ತಿದ್ದಾರೆ.

    ಬಯೋ-ಬಬಲ್ ಬ್ರೇಕ್ ಬೆನ್ನಲ್ಲೇ ಟೀಮ್ ಇಂಡಿಯಾವನ್ನು ಕಾಡುತ್ತಿದೆ ಬೀಫ್​ ವಿವಾದ!

    ಬಯೋ-ಬಬಲ್ ಉಲ್ಲಂಘನೆ ಆರೋಪ, ರೋಹಿತ್ ಸಹಿತ ಐವರು ಕ್ರಿಕೆಟಿಗರ ಐಸೋಲೇಷನ್

    ದೇಶೀಯ ಕ್ರಿಕೆಟಿಗೂ ಪ್ರೇಕ್ಷಕರಿಗೆ ಪ್ರವೇಶವಿಲ್ಲ, ಆಟಗಾರರು ಹಸ್ತಲಾಘವ ನೀಡುವಂತಿಲ್ಲ

    ಬಿಸ್ಕಿಟ್ ಜಾಹೀರಾತಿನಲ್ಲಿ ನಟಿಸಿ ಗಮನಸೆಳೆದ ಕ್ರಿಕೆಟ್ ದಿಗ್ಗಜನ ಪುತ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts