ಬಿಸ್ಕಿಟ್ ಜಾಹೀರಾತಿನಲ್ಲಿ ನಟಿಸಿ ಗಮನಸೆಳೆದ ಕ್ರಿಕೆಟ್ ದಿಗ್ಗಜನ ಪುತ್ರಿ!

ziva dhoni web
Published on

ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಈಗಾಗಲೆ ಕ್ರಿಕೆಟ್ ಮೈದಾನದಲ್ಲಿ ಮಿಂಚುವ ಜತೆಗೆ ವಿವಿಧ ವಾಣಿಜ್ಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನೆಯಲ್ಲೂ ಸಾಕಷ್ಟು ಗಮನ ಸೆಳೆದಿದ್ದಾರೆ. ಇದೀಗ ಅವರ ಪುತ್ರಿ ಝಿವಾ ಕೂಡ ಅಪ್ಪನ ಹಾದಿಯನ್ನೇ ಅನುಸರಿಸಿದು, ಟಿವಿ ಜಾಹೀರಾತಿನಲ್ಲಿ ನಟಿಸುವ ಮೂಲಕ ಗಮನಸೆಳೆದಿದ್ದಾಳೆ.

ಕಳೆದ ವರ್ಷ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ 39 ವರ್ಷದ ಧೋನಿ, ಐಪಿಎಲ್ 13ನೇ ಆವೃತ್ತಿಯಲ್ಲಿ ಆಡಿದ ಬಳಿಕ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಈ ನಡುವೆ 6 ವರ್ಷದ ಪುತ್ರಿ ಜತೆಗೆ ಧೋನಿ ಅವರು ‘ಓರಿಯೊ’ ಬಿಸ್ಕಿಟ್ ಕಂಪನಿಯ ಜಾಹೀರಾತಿನಲ್ಲಿ ನಟಿಸಿದ್ದಾರೆ.

‘ಮೈದಾನಕ್ಕೆ ಯಾರು ಇಳಿದಿದ್ದಾರೆ ನೋಡಿ’ ಎಂಬ ಅಡಿಬರಹದೊಂದಿಗೆ ‘ಓರಿಯೋ ಇಂಡಿಯಾ’ ಇನ್‌ಸ್ಟಾಗ್ರಾಂನಲ್ಲಿ ಧೋನಿ ಮತ್ತು ಝಿವಾ ಜಾಹೀರಾತಿನಲ್ಲಿ ನಟಿಸಿರುವ ಕ್ಷಣಗಳ ಚಿತ್ರವನ್ನು ಪ್ರಕಟಿಸಿದೆ.

ಝಿವಾ ಈಗಾಗಲೆ ಧೋನಿ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಸಂಪಾದಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ತಾಯಿ ಸಾಕ್ಷಿ ಸಿಂಗ್ ಜತೆಗೆ ಧೋನಿಗಿಂತ ಹೆಚ್ಚು ಕಾಣಿಸಿಕೊಳ್ಳುತ್ತಾಳೆ. ಝಿವಾ ಸಿಂಗ್ ಧೋನಿ ಎಂಬ ಇನ್‌ಸ್ಟಾಗ್ರಾಂ ಖಾತೆಯನ್ನೂ ಹೊಂದಿದ್ದಾಳೆ. ಈ ಮೂಲಕ ಸದಾ ಸುದ್ದಿಯಲ್ಲಿರುತ್ತಾಳೆ. ಐಪಿಎಲ್ ಪಂದ್ಯಗಳ ವೇಳೆಯೂ ಕ್ರೀಡಾಂಗಣಕ್ಕೆ ಹಾಜರಾಗಿ ಆಕರ್ಷಣೆಗೆ ಪಾತ್ರವಾಗುತ್ತಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net