ಜೀಬ್ರಾ & ಮೊಸಳೆಯ ಗುಂಪಿನ ನಡುವೆ ಫೈಟ್​​; Viral Video ನೋಡಿ ಪಾಠ ಹೇಳಿದ ನೆಟ್ಟಿಗರು

Untitled design - 2025-01-15T195221.620
Published on

ಮೊಸಳೆಗಳು ಭಾರವಾದ ಮತ್ತು ಸೋಮಾರಿಯಾದ ಪ್ರಾಣಿಗಳಾಗಿ ಕಾಣಿಸಬಹುದು. ಆದರೆ ಅದರ ವೇಗವನ್ನು ಅಂದಾಜು ಮಾಡುವುದು ಅಷ್ಟು ಸುಲಭವಲ್ಲ. ಮೊಸಳೆಗಳು ತಮ್ಮ ಬೇಟೆಯನ್ನು ಕಂಡುಕೊಂಡ ತಕ್ಷಣ, ಗಂಟೆಗೆ 15 ರಿಂದ 20 ಕಿಲೋಮೀಟರ್ ವೇಗದಲ್ಲಿ ಈಜುತ್ತವೆ. ತನ್ನ ಬೇಟೆಯನ್ನು ಬಾಯಿಯಲ್ಲಿ ಹಿಡಿದರೆ ಅದರಿಂದ ಬಿಡಿಸಿಕೊಳ್ಳುವುದು ಸುಲಭದ ಮಾತಲ್ಲ. ಅದರ ದವಡೆಯಿಂದ ತಪ್ಪಿಸಿಕೊಳ್ಳುವುದು ಸಾವಿನ ಸ್ಪರ್ಶದಿಂದ ಹಿಂತಿರುಗುವುದಕ್ಕೆ ಸಮಾನವಾಗಿದೆ. ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video) ಆಗಿದೆ.

ವಾಸ್ತವವಾಗಿ ಒಂದು ಜೀಬ್ರಾ ನದಿಯನ್ನು ದಾಟುತ್ತಿದ್ದಾಗ ಮೊಸಳೆಗಳ ಗುಂಪು ಅದರ ಸುತ್ತು ಸುತ್ತುವರೆದಿದೆ. ಮೊಸಳೆಯೊಂದು ಜೀಬ್ರಾದ ಬಾಯಿಯನ್ನು ಹಿಡಿಯುತ್ತದೆ.ಆದರೆ ಕೊನೆಯಲ್ಲಿ ಜೀಬ್ರಾ ಇಡೀ ಕಥೆಯನ್ನು ಬದಲಾಯಿಸಿದೆ. ವೈರಲ್​​ ವಿಡಿಯೋದಲ್ಲಿ ಜೀಬ್ರಾ ನದಿ ದಾಟುವಾಗ ಮೊಸಳೆಗಳ ಗುಂಪು ಸುತ್ತುವರಿದಿರುವುದನ್ನು ಕಾಣಬಹುದು. ಮೊಸಳೆಯು ಜೀಬ್ರಾದ ಮೇಲೆ ದಾಳಿ ಆರಂಭಿಸಿ ಅದರ ಬಾಯಿಯನ್ನು ಹಿಡಿಯುತ್ತದೆ. ಸುತ್ತು ಮೊಸಳೆಗಳು ಸುತ್ತುವರಿದರು ಜೀಬ್ರಾ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಇಡೀಮ ಚಿತ್ರಣವೇ ಬದಲಾಗುವ ರೀತಿಯಲ್ಲಿ ದಾಳಿ ಮಾಡುತ್ತದೆ. ಕೊನೆಗೆ ಜೀಬ್ರಾ ಮೊಸಳೆಯ ಬಾಯಿಯನ್ನು ಹಿಡಿಯುತ್ತದೆ ಇದಾದ ನಂತರ ಹೇಗೋ ಅಪಾಯದಿಂದ ಪಾರಾಗಿ ನದಿಯ ದಡ ತಲುಪುವುದನ್ನು ನೋಡಬಹುದು.

36 ಸೆಕೆಂಡ್‌ ಇರುವ ಈ ವಿಡಿಯೋವನ್ನು ಇದುವರೆಗೂ 15 ಮಿಲಿಯನ್ ಮಂದಿ ಮೆಚ್ಚಿಕೊಂಡಿದ್ದಾರೆ. ಪ್ರಯತ್ನಿಸುವವರು ಸೋಲುವುದಿಲ್ಲ ಎಂಬುದನ್ನು ಇದರಿಂದ ನಾವು ಕಲಿಯಬೇಕು, ಜೀಬ್ರಾದ ಆತ್ಮಕ್ಕೆ ನಮಸ್ಕಾರ, ಯಾರು ಕೊನೆಯವರೆಗೂ ಬಿಟ್ಟುಕೊಡಬಾರದು, ಸಮಯ ಯಾವಾಗಲಾದರೂ ಬದಲಾಗಬಹುದು ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net