

ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸ್ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಎಲ್ಲಾ ವಯಸ್ಸಿನ ಜನರು ನೃತ್ಯದ ವಿಡಿಯೋವನ್ನು ಇಷ್ಟಪಡುತ್ತಾರೆ. ಕೃಷ್ಣ ಜನ್ಮಾಷ್ಟಮಿಯಂದು ಮಹಿಳೆಯೊಬ್ಬರು ಮಾಡಿರುವ ನೃತ್ಯವು ಇತ್ತೀಚಿನ ದಿನಗಳಲ್ಲಿ ವೈರಲ್(Viral Video) ಆಗುತ್ತಿದೆ. ಬಾಹುಬಲಿ 2 ಸಿನಿಮಾದ ಕನ್ಹಾ ನಿದಿರುಂಚರಾ ಹಾಡಿಗೆ ಅವರು ನೃತ್ಯ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಸಾಂಪ್ರದಾಯಿಕ ಬಟ್ಟೆ ತೊಟ್ಟು ಮಹಿಳೆಯೊಬ್ಬರು ಕನ್ಹಾ ನಿದಿರುಂಚರಾ ಎಂಬ ಹಾಡಿಗೆ ಸುಂದರವಾಗಿ ನೃತ್ಯ ಮಾಡಿದ್ದಾರೆ. ಈ ವಿಡಿಯೋವನ್ನು ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮಹಿಳೆಯ ಡ್ಯಾನ್ಸ್ ಅನ್ನು ನೆಟ್ಟಿಗರು ಹೊಗಳುತ್ತಿದ್ದಾರೆ. ಈ ಹಾಡನ್ನು ಮಧುಶ್ರೀ ಭಟ್ಟಾಚಾರ್ಯ ಹಾಡಿದ್ದು ಬಾಹುಬಲಿ 2 ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಹೆಜ್ಜೆ ಹಾಕಿದ್ದಾರೆ.
ವಿಡಿಯೋ ವೈರಲ್ ಆದಾಗಿನಿಂದ ಇದುವರೆಗೂ 52 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 2 ಲಕ್ಷ 85 ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ನಿಮ್ಮಲ್ಲಿ ಪ್ರತಿಭೆ ಇದ್ದಾಗ ಅದು ನಿಮ್ಮನ್ನು ಪ್ರಸಿದ್ಧಗೊಳಿಸುತ್ತದೆ. ನೀವು ಅನಗತ್ಯ ಕೆಲಸಗಳನ್ನು ಮಾಡುವ ಅಗತ್ಯವಿಲ್ಲ, ನಿಮ್ಮ ಡ್ಯಾನ್ಸ್ ಮತ್ತು ಎಕ್ಸ್ಪ್ರೆಷನ್ ಮಂತ್ರಮುಗ್ಧವಾಗಿದೆ, ಸುಂದರವಾದ ಕ್ಷಣಗಳೊಂದಿಗೆ ಸುಂದರವಾದ ವಿಡಿಯೋ, ಹಾಡಿನ ಸುಂದರ ಸಾಹಿತ್ಯ ನಿಮ್ಮ ಅಭಿನಯವನ್ನು ಹೆಚ್ಚಿಸಿದೆ, ಸಂತೋಷದಾಯಕವಾಗಿದೆ, ರಾಧೆ-ರಾಧೆ ಎಂದು ಕಾಮೆಂಟ್ ಮಾಡಿದ್ದಾರೆ.