ಟೊಮ್ಯಾಟೋ ಕಚ್ಚುವ ಹಾವು! ವೈರಲ್​ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ ನೋಡಿ... Viral Video

Viral Video
Published on

Viral Video : ಟೊಮ್ಯಾಟೋ ಕಚ್ಚುವ ಹಾವಿನ ವಿಡಿಯೋವೊಂದು ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈಗಲೂ ಆ ವಿಡಿಯೋ ಆಗಾಗ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ವಿಡಿಯೋ ನೋಡಿದವರು ತಮ್ಮದೇಯಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ವಿಡಿಯೋ ನೋಡಿದವರಿಗೆ ಹಾವು ಟೊಮ್ಯಾಟೋ ತಿನ್ನುತ್ತಿರುವಂತೆ ಕಾಣುತ್ತಿದೆ. ಹೀಗಾಗಿ ಅನೇಕರು ಈ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಏನಾದರೂ ತಿನ್ನುವ ಬದಲು ಚೆನ್ನಾಗಿ ತೊಳೆಯಿರಿ ಮತ್ತು ಚೆನ್ನಾಗಿ ಬೇಯಿಸಿ, ಹಸಿಯಾಗಿ ತಿನ್ನಬೇಡಿ. ಏಕೆಂದರೆ, ಈ ರೀತಿ ಹಾವು ಕಚ್ಚಿರಬಹುದು ಎಂದು ಬರೆದು, ವಿಡಿಯೋ ಶೇರ್​ ಮಾಡುತ್ತಿದ್ದಾರೆ.

ಆದರೆ, ವಾಸ್ತವ ಸಂಗತಿ ಬೇರೇನೆ ಇದೆ. ಅದೇನೆಂದರೆ, ಇಲ್ಲಿ ಹಾವು ಉದ್ದೇಶಪೂರ್ವಕವಾಗಿ ಟೊಮ್ಯಾಟೋವನ್ನು ಕಚ್ಚಿಲ್ಲ. ಹಾವು ಅಲ್ಲಿ ಒಂದು ಮರದ ಪಟ್ಟಿಯ ಕೆಳಗೆ ಸಿಕ್ಕಿಹಾಕಿಕೊಂಡಿದೆ. ಬಹುಶಃ ಯಾರೋ ಉದ್ದೇಶಪೂರ್ವಕವಾಗಿಯೇ ಹಾವಿನ ಬಾಲದ ಮೇಲೆ ಮರದ ಪಟ್ಟಿಯನ್ನು ಇಟ್ಟಿರುವಂತೆ ಕಾಣುತ್ತದೆ. ನೋವನ್ನು ಸಹಿಸಲಾಗದೇ ಹಾವು ಒದ್ದಾಡುತ್ತಿದೆ.

ಒಂದೆಡೆ ನೋವು, ಮತ್ತೊಂದೆಡೆ ತನ್ನ ಅಸಹಾಯಕತೆಯನ್ನು ಸಹಿಸಿಕೊಳ್ಳಲಾಗದೇ ತನ್ನ ಕೋಪವನ್ನು ವ್ಯಕ್ತಪಡಿಸಲು, ಹಾವು ಟೊಮ್ಯಾಟೋವನ್ನು ಹುಡುಕಿ ಅದರ ಮೇಲೆ ಕಚ್ಚಿದೆ. ಹಾವಿನ ಕೋಪ ಎಷ್ಟರ ಮಟ್ಟಿಗೆ ಇದೆ ಅಂದರೆ ಒಂದು ವೇಳೆ ಮನುಷ್ಯನಿಗೆ ಕಡಿದರೆ ವಿಷ ತಕ್ಷಣ ಏರಿ ಸಾಯುವುದು ಖಚಿತ.

ಈ ವಿಡಿಯೋವನ್ನು ತಪ್ಪು ಸಂದೇಶದೊಂದಿಗೆ ಹರಿಬಿಡಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗುತ್ತಲೇ ಇದೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net